
ಬಿಹಾರ: ಪೋಷಕರು ತಮ್ಮ ಮಕ್ಕಳ ಕನಸುಗಳನ್ನ ಈಡೇರಿಸಲು ಹಾಗೂ ಅವರ ಶಿಕ್ಷಣಕ್ಕಾಗಿ ಅನೇಕ ತ್ಯಾಗಗಳನ್ನ ಮಾಡುತ್ತಾರೆ. ಆದರೆ ಮಕ್ಕಳು ಅದನ್ನು ಸರಿಯಾಗಿ ಬಳಸಿಕೊಂಡು ಅಪ್ಪ-ಅಮ್ಮ ಹೆಮ್ಮೆ ಪಡುವಂತೆ ಮಾಡೋರ ಸಂಖ್ಯೆ ತುಂಬಾನೇ ಕಡಿಮೆ. ಆದರೆ ಬಿಹಾರದ ಗಯಾ ಜಿಲ್ಲೆಯಲ್ಲಿ ಸಾಮನ್ಯ ವ್ಯಕ್ತಿಯೊಬ್ಬ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಭೂಮಿಯನ್ನೇ ಮಾರಾಟ ಮಾಡಿ ಸುದ್ದಿಯಾಗಿದ್ದಾರೆ.
ಮನೋಜ್ ಕುಮಾರ್ ಹಾಗೂ ರೇಷ್ಮಿ ದೇವಿ ದಂಪತಿ ತಮ್ಮ ಮಕ್ಕಳಿಗಾಗಿ ಜಮೀನು ಮಾರಿದ್ದಾರೆ. ಸೋನು ರಾಜ್ ಹಾಗೂ ಮೋನು ರಾಜ್ ಅನ್ನೋರು ಅಪ್ಪ-ಅಮ್ಮನ ಬಳಿ ಉನ್ನತ ವ್ಯಾಸಾಂಗ ಮಾಡುವ ಭಯಕೆ ವ್ಯಕ್ತಪಡಿಸಿದ್ದಾರೆ. ಈ ಪೋಷಕರು ಮಕ್ಕಳ ಕನಸಿಗೆ ಇಲ್ಲ ಎನ್ನಲಿಲ್ಲ. ತಮಗೆ ಇರುವ ಜಮೀನನ್ನೇ ಮಾರಿ ಮಕ್ಕಳನ್ನ ಓದಿಸಿದ್ದಾರೆ. ತಂದೆ ಮನೋಜ್ ಕುಮಾರ್ ಗಯಾದ ಧಾನ್ಯ ಮಾರುಕಟ್ಟೆಯಲ್ಲಿ ಪೋರ್ಟರ್ ಆಗಿ ಕೆಲಸ ಮಾಡುವ ಮತ್ತು ಕೃಷಿ ಉತ್ಪನ್ನಗಳ ಮಾರಾಟವನ್ನು ಸುಗಮಗೊಳಿಸುವ ಮೂಲಕ ಕಮಿಷನ್ ಗಳಿಸಿ ಬದುಕು ಸಾಗಿಸುತ್ತಿದ್ದಾರೆ. ತಾಯಿ ರೇಷ್ಮಿ ದೇವಿ ಗೃಹಿಣಿ ಆಗದ್ದಾರೆ.
ತಂದೆ ಮನೋಜ್ ಮಾತನ್ನಾಡಿ.. ನಮ್ಮ ಕಠಿಣ ಪರಿಶ್ರಮ ಮತ್ತು ತ್ಯಾಗಗಳು ಫಲ ನೀಡಿವೆ. ತರಬೇತಿ ಮತ್ತು ಸರಿಯಾದ ಮಾರ್ಗದರ್ಶನದ ಮೂಲಕ ಕನಸುಗಳು ನನಸಾಗುತ್ತವೆ ಎಂಬುದಕ್ಕೆ ನಮ್ಮ ಮಕ್ಕಳೇ ಉದಾಹರಣೆ. ಮೋನು ಹೆಚ್ಚಿನ ಅಧ್ಯಯನಕ್ಕಾಗಿ ಕೋಟಾಗೆ ತೆರಳಲು ಬಯಸಿದ್ದ. ಅವನ ಶಿಕ್ಷಣ ಮತ್ತು ತರಬೇತಿಗೆ ಹಣವನ್ನು ಹೊಂದಿಸುವುದು ಕಷ್ಟವಾಯಿತು. ನಮಗೆ ಎರಡು ಸಣ್ಣ ಕೃಷಿ ಭೂಮಿ ಇತ್ತು. ನಮ್ಮ ಬಳಕೆಗೆ ಸಾಕಾಗುವಷ್ಟು ಆಹಾರ ಧಾನ್ಯಗಳನ್ನು ಬೆಳೆದುಕೊಳ್ಳುತ್ತಿದ್ದೇವು. ಎರಡು ಭೂಮಿಯಲ್ಲಿ ಒಂದು ಭಾಗವನ್ನು ಮಾರಿದೇವು. ಇದರಿಂದ ಬಂದ ಹಣದಲ್ಲಿ ಆತ ಕೋಚಿಂಗ್ ಪಡೆದುಕೊಂಡ. ಆತನನ್ನು ಕೋಟಾಗೆ ಕಳುಹಿಸಲು ಸಹಾಯ ಆಯಿತು ಎಂದಿದ್ದಾರೆ.
ಹೌದು, ಒಬ್ಬ ಸಹೋದರ ಸೋನು ರಾಜ್ ವೈದ್ಯನಾಗಲು ಸಜ್ಜಾಗಿದ್ದಾರೆ. ಇನ್ನೊಬ್ಬ ಸಹೋದರ ಮೋನು ರಾಜ್ ಎಂಜಿನಿಯರಿಂಗ್ ಆಗಿದ್ದಾರೆ. ಇಬ್ಬರೂ ಸಹೋದರರು ರಾಜಸ್ಥಾನದ ಕೋಟಾದಲ್ಲಿರುವ ಅಲೆನ್ ಕೆರಿಯರ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಧ್ಯಯನ ಮಾಡಿದರು. ಅಲ್ಲಿ ಅವರು ತಮ್ಮ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಿದರು.
ಸೋನು ರಾಜ್ 2026 ರ NEET ನಲ್ಲಿ 636 ಅಂಕಗಳನ್ನು ಗಳಿಸಿದ್ದಾರೆ. ಮತ್ತು ದೆಹಲಿಯ ಸೆಂಟ್ರಲ್ ಸಶಸ್ತ್ರ ಪೊಲೀಸ್ ಪಡೆಗಳ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದಾರೆ. ಮೋನು ರಾಜ್, ಜೆಇಇ ಮುಖ್ಯ ಪರೀಕ್ಷೆಯಲ್ಲಿ 93 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಯಾದ ಮೆಸ್ರಾದ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ಪ್ರೊಗ್ರಾಂಗೆ ಪ್ರವೇಶ ಪಡೆದುಕೊಂಡಿದ್ದಾರೆ. ಇಬ್ಬರೂ ಸಹೋದರರು ಎರಡು ವರ್ಷಗಳ ಕಾಲ ಕೋಟಾದಲ್ಲಿ ಒಟ್ಟಿಗೆ ಇದ್ದರು. ALLEN ನಲ್ಲಿ ತಮ್ಮ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು.
ಇಬ್ಬರೂ ಸಹೋದರರು ಎರಡು ವರ್ಷಗಳ ಕಾಲ ಕೋಟಾದಲ್ಲಿ ಒಟ್ಟಿಗೆ ಇದ್ದರು ಮತ್ತು ALLEN ನಲ್ಲಿ ತಮ್ಮ ಪರೀಕ್ಷೆಗಳಿಗೆ ತಯಾರಿ ನಡೆಸಿದರು. ಪರೀಕ್ಷೆ ತಯಾರಿ ವೇಳೆ ಮೋನು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಕೋಟಾಗೆ ಸ್ಥಳಾಂತರಗೊಂಡ ನಂತರ ಅವರಿಗೆ ಟೈಫಾಯಿಡ್ ಮತ್ತು ಕಾಮಾಲೆ ರೋಗ ಬಂದಿತು. ಇದರಿಂದ ಹೃದಯ ಬಡಿತದಲ್ಲಿ ಏರುಪೇರು ಉಂಟಾಯಿತು. ಸುಮಾರು ಮೂರು ತಿಂಗಳ ಕಾಲ ನಿರಂತರ ಜ್ವರದಿಂದ ಬಳಲುತ್ತಿದ್ದರು. ಹೀಗಿದ್ದೂ ಪರೀಕ್ಷೆಯನ್ನ ಕ್ರಾಕ್ ಮಾಡುವಲ್ಲಿ ಯಶಸ್ವಿಯಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ