ನಮ್ಮದು ಕುಗ್ರಾಮ, ಅಲ್ಲಿ ಯಾರೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಆಗ ನಮ್ಮ ಮೇಲಾಧಿಕಾರಿಗಳು ಹೇಳಿದ್ರೆ ಮಾತ್ರ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಪಟನಾ: ನಮ್ಮ ಬೈಕ್ ಕಳ್ಳತನವಾಗಿದೆ ಎಂದು ದೂರು ದಾಖಲಿಸಲು ಬಂದ ಜನರಿಗೆ ಸಿಸಿಟಿವಿ ಫೋಟೇಜ್ ತಂದ್ರೆ ಮಾತ್ರ ಎಫ್‌ಐಆರ್ ದಾಖಲಿಸಿಕೊಳ್ಳುವದಾಗಿ ಪೊಲೀಸರು ಹೇಳಿದ್ದಾರೆ. ಠಾಣೆಗೆ ಸಹಾಯ ಕೇಳಿ ಬಂದ ಜನರ ಕಷ್ಟಕ್ಕೆ ಸ್ಪಂದಿಸುವುದು ಪೊಲೀಸರ ಕರ್ತವ್ಯ. ಅವರ ಸಮಸ್ಯೆ ಕೇಳಿ ಪ್ರಕರಣ ದಾಖಲಿಸಿಕೊಂಡು ಇತ್ಯರ್ಥ ಮಾಡಬೇಕು. ಆದರೆ ಬಿಹಾರದ ವೈಶಾಲಿ ಜಿಲ್ಲೆಯ ಕಠಾರ ಠಾಣೆಯ ಪೊಲೀಸರು ದೂರು ದಾಖಲಿಸಲು ಬಂದವರಿಗೆ ಸಾಕ್ಷ್ಯ ತಂದರೆ ಮಾತ್ರ ಪ್ರಕರಣ ದಾಖಲಿಸಿಕೊಳ್ಳುವದಾಗಿ ಹೇಳಿದ್ದಾರೆ. ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಠಾರ ಪೊಲೀಸ್ ಠಾಣಾ ಕ್ಷೇತ್ರದ ಮಂಸುರಪುರ ಗ್ರಾಮದ ನಿವಾಸಿಯಾಗಿರುವ ವಿವೇಕ್ ಕುಮಾರ್ ಎಂಬವರ ಬೈಕ್ ಶುಕ್ರವಾರ ರಾತ್ರಿ ಕಳ್ಳತನವಾಗಿತ್ತು. ವಿವೇಕ್ ಕುಮಾರ್ ಬೈಕ್ ಕಳ್ಳತನದ ವಿಷಯವನ್ನು ಶನಿವಾರವೇ ಪೊಲೀಸರ ಗಮನಕ್ಕೆ ತಂದಿದ್ದಾರೆ. ಮಂಗಳವಾರ ಆದರೂ ಪೊಲೀಸರು ಬೈಕ್ ಕಳ್ಳತನ ಸಂಬಂಧ ಯಾವುದೇ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಪ್ರಕರಣ ದಾಖಲಿಸಿಕೊಂಡು ಬೈಕ್ ಹುಡುಕಿಕೊಡುವಂತೆ ವಿವೇಕ್ ಕುಮಾರ್ ಮನವಿ ಮಾಡಿಕೊಂಡ್ರೆ, ಠಾಣೆಯ ಟ್ರೈನಿ ಡಿಎಸ್‌ಪಿ ಗೌರವ್ ಕುಮಾರ್ ಯಾದವ್, ಕಳ್ಳತನದ ಸಿಸಿಟಿವಿ ದೃಶ್ಯ ತಂದ್ರೆ ಮಾತ್ರ ಎಫ್‌ಐಆರ್ ದಾಖಲಿಸೋದಾಗಿ ಹೇಳಿದ್ದಾರೆ. ಈ ಮಾತು ಕೇಳಿ ವಿವೇಕ್ ಕುಮಾರ್‌ಗೆ ದಿಕ್ಕು ತೋಚದಂತಾಗಿದೆ. ನಮ್ಮದು ಕುಗ್ರಾಮ, ಅಲ್ಲಿ ಯಾರೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ ಎಂದು ಹೇಳಿದ್ದಾರೆ. ಆಗ ನಮ್ಮ ಮೇಲಾಧಿಕಾರಿಗಳು ಹೇಳಿದ್ರೆ ಮಾತ್ರ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
undefined
ಪ್ರಿಯಕರನಿಗೆ ಮೂತ್ರ ಕುಡಿಸಿ ಕೊಂದ್ಳು... ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳತಿ ಇಷ್ಟು ಕ್ರೂರಿ ಆಗಿದ್ದೇಕೆ?
ದೂರುದಾರ ವಿವೇಕ್ ಕುಮಾರ್ ಸುಳ್ಳು ಹೇಳುತ್ತಿದ್ದಾನೆ ಎಂದು ಡಿಸಿಪಿ ಗೌರವ್ ಯಾದವ್ ಅನುಮಾನ ವ್ಯಕ್ತಪಡಿಸಿದ್ದಾರೆ. ಎಲ್ಲೋ ಬೈಕ್ ಕಳ್ಳತನ ಆಗಿರುತ್ತದೆ. ಇನ್ನೆಲ್ಲಿಯೋ ಬಂದು ದೂರು ದಾಖಲಿಸುತ್ತಾರೆ ಎಂದು ಶಂಕೆ ವ್ಯಕ್ತಪಡಿಸಿ ನಾಲ್ಕು ದಿನ ಕಳೆದರೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ ಎಂದು ವರದಿಯಾಗಿದೆ. ವಿವೇಕ್ ಕುಮಾರ್ ಎಷ್ಟೇ ಮನವಿ ಮಾಡಿಕೊಂಡ್ರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ವಿವೇಕ್ ಕುಮಾರ್ ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡಿಕೊಂಡಿದ್ದಾರೆ. ನಾನು ಠಾಣೆಗೆ ತೆರಳಿ ಬೈಕ್ ಬಗ್ಗೆ ವಿಚಾರಿಸಿದಾಗ, ತನಿಖೆ ಬಳಿಕವಷ್ಟೇ ಎಫ್‌ಐಆರ್ ದಾಖಲಾಗುತ್ತೆ ಎಂಬ ಉತ್ತರವನ್ನು ಪೊಲೀಸರು ನೀಡುತ್ತಿದ್ದಾರೆ. ಮಂಗಳವಾರ ಠಾಣೆಗೆ ತೆರಳಿದಾಗ ಹಿರಿಯ ಅಧಿಕಾರಿ ಇರಲಿಲ್ಲ. ಅಲ್ಲಿದ್ದ ಶ್ರವಣ್ ಕುಮಾರ್ ಸಾಹು ಎಂಬವರು ಡಿಸಿಪಿ ಸಾಹೇಬ್ರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ಈ ಭಾಗದಲ್ಲಿ ಸುಳ್ಳು ಬೈಕ್ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ವಿವೇಕ್ ಕುಮಾರ್ ಹೇಳುತ್ತಾರೆ.
ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ 'ನಾಗಿಣಿ'ಯಾಗಿ ಪತ್ತೆ; ವಿಡಿಯೋ ನೋಡಿ