ಪೋಷಕರು ಆಕೆಗೆ ಪೂಜೆ ಸಲ್ಲಿಸಿ ಮಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಮಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೋಷಕರು ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ವರದಿಯಾಗಿದೆ.
ಲಕ್ನೋ: ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಹಾವಿನ ರೀತಿ ವರ್ತಿಸುತ್ತಾ ಪತ್ತೆಯಾಗಿದ್ದಾಳೆ. ಯುವತಿಯ ವರ್ತನೆ ಕಂಡ ಗ್ರಾಮಸ್ಥರು ಆಕೆ ಸಾಕ್ಷತ್ ನಾಗಿಣಿಯ ಅವತಾರ ಎಂದು ಪೂಜೆ ಮಾಡಲು ಶುರು ಮಾಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ. ಗುಹೆಯೊಂದರಲ್ಲಿ ಕಾಣಿಸಿಕೊಂಡಿರುವ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೂರು ತಿಂಗಳ ಹಿಂದೆ ಈ ಯುವತಿ ಜಾರ್ಖಂಡ್‌ನಿಂದ ಕಾಣೆಯಾಗಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಬಂದ ಪೋಷಕರು ಆಕೆಗೆ ಪೂಜೆ ಸಲ್ಲಿಸಿ ಮಗಳನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಮಗಳನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಪೋಷಕರು ಪ್ರತಿಕ್ರಿಯಿಸಲು ನಿರಾಕರಿಸಿದರು ಎಂದು ವರದಿಯಾಗಿದೆ.
ಜಾರ್ಖಂಡ್ ಮೂಲದ ಯುವತಿ ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಪೋಷಕರು ಮಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಎಷ್ಟೇ ಹುಡುಕಿದರೂ ಮಗಳು ಮಾತ್ರ ಪತ್ತೆಯಾಗಿರಲಿಲ್ಲ. ಇದೀಗ ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯ ರಾಣಿಧಿ ಎಂಬಲ್ಲಿಯ ಗುಹೆಯೊಂದರಲ್ಲಿ ಪತ್ತೆಯಾಗಿದ್ದಾಳೆ. ಯುವತಿ ಗುಹೆಯಲ್ಲಿ ಹಾವಿನ ರೀತಿ ಹೊರಳಾಡುತ್ತಿದ್ದಳು. ಯುವತಿ ಪದೇ ಪದೇ ನಾಲಿಗೆಯನ್ನು ಹಾವಿನ ರೀತಿ ಹೊರಗೆ-ಒಳಗೆ ತೆಗೆದುಕೊಳ್ಳುತ್ತಿದ್ದಳು. ಹಾಗಾಗಿ ಸುತ್ತಲಿನ ಜನರು ಯುವತಿಯನ್ನು ಕಂಡು ಹೆದರಿದ್ದರು. ನಂತರ ಆಕೆಗೆ ದೂರದಿಂದಲೇ ಪೂಜೆ ಸಲ್ಲಿಸಲು ಕೆಲವರು ಆರಂಭಿಸಿದ್ದರು.
20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!
ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿತ್ತು. ಕೆಲ ನೆಟ್ಟಿಗರು ಈ ಘಟನೆಯನ್ನು ಆಧ್ಯತ್ಮಕ್ಕೆ ಲಿಂಕ್ ಮಾಡಲು ಶುರು ಮಾಡಿದ್ದರು. ಇದನ್ನು ಪರಮೇಶ್ವರನ ಚಮತ್ಕಾರ ಅಂತ ಮಾತನಾಡಿಕೊಳ್ಳಲು ಶುರು ಮಾಡಿದ್ದರು. ಇನ್ನು ಕೆಲವರು ಯುವತಿ ಮಾನಸಿಕ ಅಸ್ವಸ್ಥಳಾಗಿದ್ದು, ಆಕೆಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದರು. ಈ ವಿಡಿಯೋ ಯುವತಿಯ ಪೋಷಕರನ್ನು ಸಹ ತಲುಪಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಮಗಳನ್ನು ತಮ್ಮ ಜೊತೆ ಕರೆದೊಯ್ದಿದ್ದಾರೆ.
ಜಾರ್ಖಂಡ್‌ನಿಂದ ನಾಪತ್ತೆಯಾಗಿದ್ದ ಯುವತಿ ಮೂರು ತಿಂಗಳು ಎಲ್ಲಿದ್ದಳು? ಈ ಗುಹೆಯನ್ನು ಸೇರಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಇನ್ನು ಗ್ರಾಮದ ಜನರು ಒಂದೊಂದು ಕಥೆಯನ್ನು ಹೇಳುತ್ತಿದ್ದಾರೆ.
ಪ್ರಿಯಕರನಿಗೆ ಮೂತ್ರ ಕುಡಿಸಿ ಕೊಂದ್ಳು... ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳತಿ ಇಷ್ಟು ಕ್ರೂರಿ ಆಗಿದ್ದೇಕೆ?