ಪ್ರವಾಹ ಪೀಡಿತ ಬಿಹಾರಕ್ಕೆ ಪರಿಹಾರ ಸಾಮಗ್ರಿ ಸಾಗಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮುಜಾಫರ್‌ಪುರದಲ್ಲಿ ಪತನಗೊಂಡಿದೆ.
ಬಿಹಾರ: ಪ್ರವಾಹ ಪೀಡಿತರಿಗೆ ದಿನಸಿ ಸೇರಿದಂತೆ ಪರಿಹಾರ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್‌ವೊಂದು ಪತನಗೊಂಡಿದೆ. ಬಿಹಾರದ ಮುಜಾಫರ್‌ಪುರದಲ್ಲಿ ಈ ಘಟನೆ ನಡೆದಿದೆ. ಈ ಐಎಎಫ್ ಹೆಲಿಕಾಪ್ಟರ್ ಬಿಹಾರದ ಸಿತಾಮರ್ಹಿಯಿಂದ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮೂಲಗಳ ಪ್ರಕಾರ ಈ ಪತನಗೊಂಡ ಹೆಲಿಕಾಪ್ಟರ್ ಔರಯಿ ಪ್ರದೇಶದ ನಯಗಾಂವ್ ಬಳಿ ವಾರ್ಡ್ 13ರ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಸೈನಿಕರು ಹಾಗೂ ಪೈಲಟ್‌ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಇನ್ನಷ್ಟೇ ಸ್ಥಳಕ್ಕೆ ಆಗಮಿಸಬೇಕಾಗಿರುವುದರಿಂದ ಸ್ಥಳೀಯ ನಿವಾಸಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಭಾರತೀಯ ಸೇನೆಯಿಂದ ವಿಜಯವಾಡ ಪ್ರವಾಹ ಪೀಡಿತ ಜನರ ರಕ್ಷಣೆ!
ನೇಪಾಳದಲ್ಲಿನ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿರುವುದರಿಂದ ಹಾಗೂ ಬಿರ್ಪುರದಲ್ಲಿರುವ ಕೋಸಿ ಬ್ಯಾರೇಜ್‌ನಿಂದ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಬಿಹಾರದ ಹಲವು ಭಾಗಗಳಲ್ಲಿ ತೀವ್ರ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಗಡಿ ಭಾಗದ ಜಿಲ್ಲೆಗಳಲ್ಲಿ ಹರಿಯುತ್ತಿರುವ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಹೀಗಾಗಿ ಕೋಸಿ ಹಾಗೂ ಗಂಡಕ್ ಬ್ಯಾರೇಜ್‌ನಿಂದ ಭಾರಿ ಪ್ರಮಾಣದ ನೀರನ್ನು ಹರಿ ಬಿಡಲಾಗಿದೆ. ಉತ್ತರ ಬಿಹಾರ ಹಾಗೂ ನೇಪಾಳದ ಮೇಲೆ ಇದರಿಂದ ವ್ಯಾಪಕ ಪರಿಣಾಮ ಬೀರುತ್ತಿದೆ. ಸೆಪ್ಟೆಂಬರ್ 29 ರಂದು ಬೆಲ್‌ಸಂಡ್ ಬ್ಲಾಕ್‌ನ ಮಂದರ್ ಅಣೆಕಟ್ಟಿನಿಂದ ಭಾರಿ ಪ್ರಮಾಣದ ನೀರು ಬಿಟ್ಟ ಕಾರಣ ಬಿಹಾರದ ಸೀತಾಮರ್ಹಿಯಲ್ಲಿ ಪ್ರವಾಹ ಉಂಟಾಗಿದೆ. ಇದಕ್ಕೂ ಮೊದಲು ಸೆಪ್ಟೆಂಬರ್ 30 ರಂದು ಬಿಹಾರ ಡೆಪ್ಯೂಟಿ ಸಿಎಂ ವಿಜಯ್ ಕುಮಾರ್ ಸಿನ್ಹಾ ಮಾತನಾಡಿ, ಪ್ರವಾಹ ಪರಿಸ್ತಿತಿಯನ್ನು ನಿಭಾಯಿಸಲು ಕೇಂದ್ರ ಸರ್ಕಾರದ ಜೊತೆ ಸಮನ್ವಯದಿಂದ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ತೆಲುಗು ರಾಜ್ಯದಲ್ಲಿ ಭೀಕರ ಪ್ರವಾಹ: ಆಂಧ್ರ ಮತ್ತು ತೆಲಂಗಾಣಕ್ಕೆ ತಲಾ 50 ಲಕ್ಷ ರೂ. ನೆರವು ಕೊಟ್ಟ ಜೂ. ಎನ್‌ಟಿಆರ್
बिहार में सेना का हेलीकॉप्टर क्रैश
मुजफ्फरपुर के औराई प्रखंड के देसी बाजार में एक बड़ा हादसा हुआ है। बाढ़ राहत सामग्री वितरण के दौरान सेना का एक हेलीकॉप्टर क्रैश हो गया। यह हेलीकॉप्टर सीतामढ़ी से उड़ान भरकर बाढ़ प्रभावित इलाकों में राहत पैकेट बांटने जा रहा था।
इस हेलीकॉप्टर में… pic.twitter.com/yHTPADvgII