ಮಹಿಳೆ ಬಳಿ ಇತ್ತು 26 ಐಫೋನ್ 16 ಪ್ರೋ ಮ್ಯಾಕ್ಸ್, ತಪಾಸಣೆ ವೇಳೆ ಅಧಿಕಾರಿಗಳೇ ದಂಗು!

By Chethan KumarFirst Published Oct 2, 2024, 4:03 PM IST
Highlights

ಐಫೋನ್ 16 ಪ್ರೋ ಮ್ಯಾಕ್ಸ್ ಬೆಲೆ 1.44 ಲಕ್ಷ ರೂಪಾಯಿ. ಇಲ್ಲೊಬ್ಬ ಮಹಿಳೆಯನ್ನು ತಪಾಸಣೆ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ದಂಗಾಗಿದ್ದಾರೆ. ಈಕೆ ಬಳಿಕ 26 ಐಫೋನ್ 16 ಪ್ರೋ ಮ್ಯಾಕ್ಸ್ ಪತ್ತೆಯಾಗಿದೆ. 

ನವದೆಹಲಿ(ಅ.02) ಆ್ಯಪಲ್ ಬಿಡುಗಡೆ ಮಾಡಿರುವ ಐಫೋನ್ 16 ಸೀರಿಸ್ ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಭಾರತದಲ್ಲಿ ಐಫೋನ್ 16 ಸೀರಿಸ್ ಬೆಲೆ 79,900 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದರ ನಡುವೆ ದೆಹಲಿ ವಿಮಾನ ನಿಲ್ದಾಣಗ ಕಸ್ಟಮ್ಸ್ ಅಧಿಕಾರಿಗಳು ಮಹಿಳೆ ಬಳಿಯಿಂದ 26 ಐಫೋನ್ 16 ಪ್ರೋ ಮ್ಯಾಕ್ಸ್ ಫೋನ್ ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಾಣಿಕೆ ಮೂಲಕ ಭಾರತಕ್ಕೆ ಐಫೋನ್ 16 ಪ್ರೋ ಮ್ಯಾಕ್ಸ್ ತಂದ ಮಹಿಳಯನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಗಳು ತಪಾಸಣೆ ನಡೆಸಿ ಒಟ್ಟು 37 ಲಕ್ಷ ರೂಪಾಯಿ ಮೌಲ್ಯದ 26 ಐಫೋನ್ 16 ಪ್ರೋ ಮ್ಯಾಕ್ಸ್ ವಶಪಡಿಸಿಕೊಂಡಿದ್ದಾರೆ.

ಹಾಂಗ್‌ಕಾಂಗ್‌ನಿಂದ ಭಾರತ ರಾಜಧಾನಿ ನವದೆಹಲಿಗೆ ಪ್ರಯಾಣಿಸುತ್ತಿರುವ ಮಹಿಳೆ ಐಫೋನ್ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ ಅನ್ನೋ ಮಾಹಿತಿ ಬಂದಿತ್ತು. ಗುಪ್ತಚರ ಇಲಾಖೆ ಮಾಹಿತಿ ಪಡೆದ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಮಹಿಳೆ ತನ್ನ ವ್ಯಾನಿಟಿ ಬ್ಯಾಗ್‌ನಲ್ಲಿ ಟಿಶ್ಯು ಪೇಪರ್ ಸುತ್ತಿ ಐಫೋನ್ ಕಳ್ಳಸಾಗಾಣಿಕೆ ಮಾಡುವ ಅತೀ ದೊಡ್ಡ ಪ್ಲಾನ್‌ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

Latest Videos

ಪ್ರಯಾಣದ ವೇಳೆ ತಿನ್ನೋಕೆ ಕುಡಿಯೋಕೆ ಏನ್‌ ಕೊಟ್ರು ಬೇಡ ಬೇಡ ಅಂತಿದ್ದ : ವಿಮಾನ ಲ್ಯಾಂಡ್ ಆಗ್ತಿದ್ದಂಗೆ ಅರೆಸ್ಟ್ ಆದ

ದೆಹಲಿ ವಿಮಾನದಲ್ಲಿ ಮಹಿಳೆ ಇಳಿಯುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳು ಮಹಿಳೆಯನ್ನು ವಶಕ್ಕೆ ಪಡೆದು ತಪಾಸಣೆ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳೇ ದಂಗಾಗಿದ್ದಾರೆ. 25 ಐಫೋನ್ 16 ಪ್ರೋ ಮ್ಯಾಕ್ಸ್ ಸ್ಮಾರ್ಟ್‌ಫೋನ್ ಪತ್ತೆಯಾಗಿದೆ.ಈಕೆಯ ಬಳಿ ಇದ್ದ ಐಫೋನ್ 16 ಪ್ರೋ ಮ್ಯಾಕ್ಸ್ 256ಜಿಬಿ ಫೋನ್ ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಭಾರತದಲ್ಲಿ 1,44,900 ರೂಪಾಯಿ. 

ಈ ಮಹಿಳೆ ಹಾಂಗ್‌ಕಾಂಗ್‌ನಿಂದ ಭಾರತಕ್ಕೆ ಐಫೋನ್ 16 ಪ್ರೋ ಮ್ಯಾಕ್ಸ್ ಕಳ್ಳಸಾಗಣೆ ಮಾಡಲು ಮುಖ್ಯ ಕಾರಣ ಒಂದಿದೆ. ಹಾಂಗ್‌ಕಾಂಗ್‌ಲ್ಲಿ ಈ ಫೋನ್ ಬೆಲೆ HK$ 1,099. ಅಂದರೆ ಭಾರತೀಯ ರೂಪಾಯಿಗಳಲ್ಲಿ 1,09,913 ರೂಪಾಯಿ ಮಾತ್ರ. ಭಾರತಕ್ಕಿಂತ ಬರೋಬ್ಬರಿ 34,987 ರೂಪಾಯಿ ಕಡಿಮೆ ಬೆಲೆಯಲ್ಲಿ ಹಾಂಗ್‌ಕಾಂಗ್‌ನಲ್ಲಿ ಫೋನ್ ಲಭ್ಯವಿದೆ. ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಆದರೆ ಮಹಿಳೆಯ ಲೆಕ್ಕಾಚಾರವನ್ನು ಕಸ್ಟಮ್ಸ್ ಅಧಿಕಾರಿಗಳು ಬುಡಮೇಲು ಮಾಡಿದ್ದಾರೆ.

ಯೂಟ್ಯೂಬರ್ ಶಬೀರ್ 2 ತಿಂಗಳಲ್ಲಿ ಕಳ್ಳಸಾಗಣೆ ಮಾಡಿದ್ದು ಒಂದಲ್ಲ ಎರಡಲ್ಲ ಬರೋಬ್ಬರಿ 267 ಕೆಜಿ ಬಂಗಾರ

26 ಐಫೋನ್ ವಶಪಡಿಸಿಕೊಂಡಿರುವ ಪೊಲೀಸರು ಮಹಿಳೆ ವಿರುದ್ದ ಕಸ್ಟಮ್ಸ್ ಆ್ಯಕ್ 1962ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ವೇಳೆ ಪೊಲೀಸರು ಮಹಿಳೆ ಇದಕ್ಕಿಂತ ಮಂಚೆ ಈ ರೀತಿ ಕಳ್ಳಸಾಗಣಿಕೆ ಮಾಡಿರುವ ಸಾಧ್ಯತೆ ಕುರಿತು ಪರಿಶೀಲಿಸುತ್ತಿದ್ದಾರೆ. ಇಷ್ಟೇ ಅಲ್ಲ ಮಹಿಳೆಯ ಮುಂದಿಟ್ಟುಕೊಂಡು ಅತೀ ದೊಡ್ಡ ಜಾಲ ಇದರ ಹಿಂದೆ ಪ್ರವರ್ತಿಸುತ್ತಿದೆಯಾ ಅನ್ನೋ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.

click me!