ಬೆಂಗಳೂರು(ಸೆ.24): ಭಾರತೀಯ ಸೇನಾ(Indian Military) ವಿಭಾಗವನ್ನು ಮತ್ತಷ್ಟು ಬಲಪಡಿಸಲು ಮಹತ್ವದ ಹೆಜ್ಜೆ ಇಡಲಾಗಿದೆ. ವಾಯುಪಡೆಗೆ(Indian Air Force) ಸಾರಿಗೆ ವಾಹನಗಳ ತಯಾರಿಕೆಗೆ ಇದೇ ಮೊದಲ ಭಾರಿಗೆ ಖಾಸಲಿಗ ವಲಯಕ್ಕೆ ಆರ್ಡರ್ ನೀಡಲಾಗಿದೆ. 56 ಏರ್ ಬಸ್ C295MW ವಿಮಾನ ತಯಾರಿಕೆಗೆ ಟಾಟಾ(Tata) ಹಾಗೂ ಏರ್‌ಬಸ್(Airbus) ಬರೋಬ್ಬರಿ 22,000 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.
Make in India: ಮತ್ತೊಂದು ಡೀಲ್ ಫೈನಲ್: ಸ್ಪೇನ್ 56 C-295 ವಿಮಾನಗಳ ಒಪ್ಪಂದಕ್ಕೆ ಸಹಿ!
ಅತೀ ದೊಡ್ಡ ಒಪ್ಪಂದ ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾರಣ ಖಾಸಗಿ ವಲಯನ್ನು(Private Sector) ಉತ್ತೇಜಿಸುವ ಜೊತೆಗೆ ಸರ್ಕಾರಿ ಸ್ವಾಮ್ಯದ ಏಕಸಾಮ್ಯವನ್ನು ಮುರಿಯುವ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಖಾಸಗಿ ಕ್ಷೇತ್ರದಲ್ಲಿ ಇದು ಮೊದಲ `ಮೇಕ್ ಇನ್ ಇಂಡಿಯಾ’ ಏರೋಸ್ಪೇಸ್ ಕಾರ್ಯಕ್ರಮವಾಗಿದೆ. ಇದು ಸಂಪೂರ್ಣವಾಗಿ `ಕೈಗಾರಿಕಾ ಪರಿಸರ ವ್ಯವಸ್ಥೆಯ ಪರಿಪೂರ್ಣವಾದ ಅಭಿವೃದ್ಧಿ’ಯನ್ನು ಒಳಗೊಂಡಿದೆ. ಉತ್ಪಾದನೆಯಿಂದ ಜೋಡಣೆ, ಪರೀಕ್ಷೆ ಮತ್ತು ಅರ್ಹತೆ, ವಿಮಾನದ ಸಂಪೂರ್ಣ ಜೀವನಚಕ್ರದ ವಿತರಣೆ ಮತ್ತು ನಿರ್ವಹಣೆಯನ್ನು ಒಳಗೊಂಡಿರುತ್ತದೆ.
ಮೊದಲ ಹಂತದಲ್ಲಿ ಟಾಟಾ ಹಾಗೂ ಏರ್‌ಬಸ್ 16 ವಿಮಾನಗಳನ್ನು ಪೂರೈಕೆ ಮಾಡಲಿದೆ. ಬಳಿಕ 40 ವಿಮಾನಗಳನ್ನು ಭಾರತದಲ್ಲಿನ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ನಲ್ಲಿ ಉತ್ಪಾದನೆ ಮತ್ತು ಜೋಡಣೆ ಮಾಡಿ ವಿತರಣೆ ಮಾಡಲಾಗುತ್ತದೆ. ಎರಡೂ ಕಂಪನಿಗಳ ನಡುವೆ ಮಾಡಿಕೊಂಡಿರುವ ಕೈಗಾರಿಕಾ ಪಾಲುದಾರಿಕೆ ಪ್ರಕಾರ ಈ ಪ್ರಕ್ರಿಯೆ ನಡೆಯಲಿದೆ.
ಒಪ್ಪಂದ ದಿನದಿಂದ 4 ವರ್ಷಗಳ ಅವಧಿಯಲ್ಲಿ ಮೊದಲ 16 ವಿಮಾನಗಳನ್ನು ವಿತರಣೆ ಮಾಡಲಾಗುತ್ತಿದೆ. ಎಲ್ಲಾ IAF C295MW ವಿಮಾನಗಳನ್ನು ದೇಶೀಯವಾಗಿ ತಯಾರಿಸುವ ಎಲೆಕ್ಟ್ರಾನಿಕ್ ವಾರ್ ಫೇರ್ ಸೂಟ್ ನೊಂದಿಗೆ ಸುಸಜ್ಜಿತಗೊಳಿಸಿ ಹಸ್ತಾಂತರ ಮಾಡಲಾಗುತ್ತದೆ. ಈ ಕುರಿತ ಮಾತನಾಡಿದ ಏರ್ ಬಸ್ ಡಿಫೆನ್ಸ್ ಅಂಡ್ ಸ್ಪೇಸ್ ನ CEO ಮೈಕೆಲ್ ಶೋಲ್ಹಾರ್ನ್, ಮುಂದಿನ 10 ವರ್ಷಗಳಲ್ಲಿ ಭಾರತದ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಈ ಒಪ್ಪಂದವು ಬೆಂಬಲ ನೀಡುತ್ತದೆ. ಇದರ ಜೊತೆಗೆ ಈ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ಹೂಡಿಕೆ ಬರುವಂತೆ ಮಾಡುತ್ತದೆ ಮತ್ತು 15,000 ಅತ್ಯುತ್ತಮ ಕೌಶಲ್ಯಭರಿತ ನೇರ ಉದ್ಯೋಗಗಳು ಹಾಗೂ 10,000 ದಷ್ಟು ಪರೋಕ್ಷ ಉದ್ಯೋಗಗಳನ್ನು ಸೃಜಿಸುತ್ತದೆ ಎಂದರು.
ಬೆಂಗಳೂರಿನ ಆಗಸದಲ್ಲಿ ತೇಜಸ್ Mk1 ಯುದ್ಧ ವಿಮಾನ ಹಾರಿಸಿದ IAF ಮುಖ್ಯಸ್ಥ!
ಇದು ಟಾಟಾಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಭಾರತೀಯ ಸೇನಾ ಉತ್ಪಾದನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಸ್ವದೇಶದಲ್ಲಿಯೇ ಸಂಪೂರ್ಣವಾಗಿ ವಿಮಾನವನ್ನು ತಯಾರಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಈ ಪ್ರಯತ್ನವು ಭಾರತದಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕ ಸಂಕೀರ್ಣವಾದ ಪ್ಲಾಟ್ ಫಾರ್ಮ್ ಗಳನ್ನು ಸೃಷ್ಟಿಸಲು ರಕ್ಷಣಾ ಉತ್ಪಾದಕ ಸಂಸ್ಥೆಯಾಗಿ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಗೆ ಹೆಮ್ಮೆ ಎನಿಸುತ್ತಿದೆ ಎಂದು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ವ್ಯವಸ್ಥಾಪ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕರನ್ ಸಿಂಗ್ ಹೇಳಿದರು.
ಕಾರವಾರದಲ್ಲಿ ವರ್ಷಾಂತ್ಯದೊಳಗೆ ಯುದ್ಧ ವಿಮಾನ ಪ್ರದರ್ಶನಾಲಯ?
C295MW ಕಾರ್ಯಕ್ರಮವು ಏರ್ ಬಸ್ ತನ್ನ ಸಂಪೂರ್ಣವಾದ ವಿಶ್ವದರ್ಜೆಯ ವಿಮಾನ ತಯಾರಿಕೆ ಮತ್ತು ಸೇವೆಗಳನ್ನು ನಮ್ಮ ಕೈಗಾರಿಕಾ ಪಾಲುದಾರರ ಸಹಯೋಗದೊಂದಿಗೆ ಭಾರತಕ್ಕೆ ತರುವುದನ್ನು ಎದುರು ನೋಡುತ್ತದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಹೊರತಾಗಿ ಟಾಟಾ ಮತ್ತು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಹಾಗೂ ಭಾರತ್ ಡೈನಾಮಿಕ್ ಲಿಮಿಟೆಡ್ ನಂತಹ ಪ್ರಮುಖ ರಕ್ಷಣಾ ಸಾರ್ವಜನಿಕ ವಲಯದ ಘಟಕಗಳಾಗಿವೆ.