
ನವದೆಹಲಿ(ಅ.30) ಇದು ದೇಶ ಕಂಡ ಅತೀ ದೊಡ್ಡ ಡೇಟಾ ಸೋರಿಕೆ. ಕೋವಿಡ್ ವೇಳೆ ಆರ್‌ಟಿಪಿಆರ್ ಟೆಸ್ಟ್, ರ್ಯಾಪಿಡ್ ಟೆಸ್ಟ್‌ಗಳು , ಎಲ್ಲೇ ಹೋಗಲು ನೆಗಟೀವ್ ರಿಪೋರ್ಟ್ ಕಡ್ಡಾಯವಾಗಿತ್ತು. ಈ ವೇಳೆ ಭಾರತೀಯರು ಕೈಲ ವೈಯುಕ್ತಿಕ ಮಾಹಿತಿಯನ್ನು ICMRಗೆ ನೀಡಬೇಕಿತ್ತು. ಹೀಗೆ 81.5 ಕೋಟಿ ಭಾರತೀಯರು ತಮ್ಮ ಹೆಸರು, ಆಧಾರ್ ನಂಬರ್, ಪಾಸ್‌ಪೋರ್ಟ್, ಫೋನ್ ನಂಬರ್ ಸೇರಿದಂತೆ ವೈಯುಕ್ತಿಕ ಮಾಹಿತಿ ನೀಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ICMR)ಗೆ ಈ ಮಾಹಿತಿಗಳನ್ನು ನೀಡಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ಬರೋಬ್ಬರಿ 81.5 ಕೋಟಿ ಮಂದಿ ಭಾರತೀಯರು ವೈಯುಕ್ತಿ ಮಾಹಿತಿ ಸೋರಿಕೆಯಾಗಿದೆ. ಇದೀಗ ಸಿಬಿಐ ತನಿಖೆಗೆ ಸಜ್ಜಾಗಿದ್ದು, ICMR ದೂರಿಗಾಗಿ ಕಾಯುತ್ತಿ ಎಂದು ನ್ಯೂಸ್ 18 ಸುದ್ದಿ ಸಂಸ್ಥೆ ವರದಿ ಮಾಡಿದೆ.
81.5 ಕೋಟಿ ಭಾರತೀಯರು ಮಹತ್ವದ ದಾಖಲೆಗಳು, ವೈಯುಕ್ತಿಕ ಮಾಹಿತಿಗಳು ಒಳಗೊಂಡ ಡೇಟಾ ಸೋರಿಕೆಯನ್ನು ಅಮೆರಿಕದ ಸೈಬರ್ ಸೆಕ್ಯೂರಿಟಿ ಮತ್ತು ಗುಪ್ತಚರ ಸಂಸ್ಥೆ ಗಮನಿಸಿ ಎಚ್ಚರಿಸಿದೆ. ಅಕ್ಟೋಬರ್ 9 ರಂದು ಅಮೆರಿಕ ಸಂಸ್ಥೆ ಈ ಕುರಿತು ಎಚ್ಚರಿಕೆ ನೀಡಿದೆ. ಡಾರ್ಕ್‌ವೆಬ್ ಮೂಲಕ ಭಾರತೀಯರ ಡೇಟಾವನ್ನು ಮಾರಾಟಕ್ಕಿಟ್ಟಿರುವ ಮಾಹಿತಿಯನ್ನು ಅಮೆರಿಕ ಪತ್ತೆ ಹಚ್ಚಿದೆ.
ಸದ್ದಿಲ್ಲದೆ ನಡೆಯುತ್ತಿದೆ ಆಧಾರ್ ಕಾರ್ಡ್ ವಂಚನೆ, ನಿಮ್ಮ ಡೇಟಾ ಕದಿಯುವ ಮುನ್ನ ಲಾಕ್ ಮಾಡಿ!
4 ಪುಟಗಳ ಮಾದರಿಯನ್ನು ಆರಂಭಿಕ ಹಂತದಲ್ಲಿ ಬಹಿರಂಗಪಡಿಸಲಾಗಿದೆ. ಒಟ್ಟು 1 ಲಕ್ಷ ಮಂದಿಯ ಡೇಟಾವನ್ನು ಸ್ಯಾಂಪಲ್ ಆಗಿ ಬಹಿರಂಗಪಡಿಸಲಾಗಿದೆ. ಇಷ್ಟೇ ಅಲ್ಲ ಕೋವಿಡ್ 19 ಪರೀಕ್ಷೆಗೆ ನೀಡಿದ ಮಾಹಿತಿಯನ್ನು ತೆಗೆಯಲಾಗಿದೆ. ಇಲ್ಲಿರುವ ವಿಳಾಸ, ಹೆಸರು, ಫೋನ್ ನಂಬರ್, ಆಧಾರ್ ಕಾರ್ಡ್, ಇತರ ಗುರುತಿನ ಚೀಟಿ ದಾಖಲೆಗಳನ್ನು ವೆರಿಫೈ ಮಾಡಲಾಗಿದೆ ಎಂದು ಸೂಚಿಸಲಾಗಿದೆ. ಈ ಮೂಲಕ ಭಾರತೀಯರ ಡೇಟಾ ಸೋರಿಕೆಯಾಗಿರುವುದು ಖಚಿತಗೊಂಡಿದೆ.
ICMRನಲ್ಲಿ ಭದ್ರವಾಗಿದ್ದ ಭಾರತೀಯರ ದಾಖಲೆಗಳು ಸೋರಿಕೆಯಾಗಿರುವುದು ಭಾರಿ ಸಂಚಲನ ಸೃಷ್ಟಿಸಿದೆ. ಸೋರಿಕೆಯಾಗಿರುವ ಡೇಟಾಗಳು ಐಸಿಎಂಆರ್‌ನಲ್ಲಿರುವ ದಾಖಲೆಗಳಿಗೆ ಹೋಲಿಕೆಯಾಗುತ್ತಿದೆ. ಈ ಸೋರಿಕೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಎಜೆನ್ಸಿ ಹಾಗೂ ಸಚಿವಾಲಯದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
ಖಾಸಗಿ ಸಂಸ್ಥೆಗಳಿಗೆ ಚುನಾವಣೆ ಕೆಲಸ ಇಲ್ಲ, ಕರ್ನಾಟಕದ ಚಿಲುಮೆ ಪ್ರಕರಣದ ಹಿನ್ನೆಲೆಯಲ್ಲಿ ಆಯೋಗ ಸ್ಪಷ್ಟನೆ
ICMR ಸರ್ಕಾರವನ್ನು ಸಂಪರ್ಕಿಸಿ ಮಾಹಿತಿ ನೀಡಿದೆ. ಇದೀಗ ದೂರು ನೀಡಲು ಸಜ್ಜಾಗಿದೆ. ಸೋರಿಕೆ ಕುರಿತು ತನಿಖೆ ನಡೆಸಲು ಸಿಬಿಐ ಮುಂದಾಗಿದೆ. ಸೋರಿಕೆಯಲ್ಲಿ ವಿದೇಶಿ ನಟರು ಭಾಗಿಯಾಗಿರುವ ಅನುವಾನ ದೃಢವಾಗುತ್ತಿದೆ. ಸದ್ಯ ಸೋರಿಕೆ ತಡೆಯಲು ಸಚಿವಾಲಯ ಎಸ್‌ಒಪಿ ನಿಯೋಜಿಸಿದೆ. ಆದರೆ ಸೋರಿಕೆ ತನಿಖೆಯಲ್ಲಿ ಕೆಲ ಸ್ಫೋಟಕ ಮಾಹಿತಿಗಳು ಬಹಿರಂಗವಾಗುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ