ಮದುವೆಯಾದ 12 ಗಂಟೆಗಳಲ್ಲಿಯೇ ವರನಿಗೆ ಖುಲಾ ನೀಡಿದ ವಧು!

By Santosh Naik  |  First Published Oct 30, 2023, 6:49 PM IST

ಮದುವೆ ಸಮಾರಂಭದಲ್ಲಿ ಊಟದ ವಿಚಾರವಾಗಿ ವಧು-ವರರ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಮದುವೆ ವೇಳೆ ಊಟ ಬಡಿಸುತ್ತಿರುವ ಬಗ್ಗೆ ವರನ ಕಡೆಯವರು ದೂರು ನೀಡಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ.


ನವದೆಹಲಿ (ಅ.30): ಮದುವೆಯಾದ ಕೇವಲ 12 ಗಂಟೆಗಳಲ್ಲಿಯೇ ವಧು, ವರನಿಗೆ ಖುಲಾ ನೀಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಗಂಡ ತನ್ನ ಹಂಡತಿಗೆ ವಿಚ್ಛೇದನ ನೀಡುವ ಪ್ರಕ್ರಿಯೆಯನ್ನು ತಲಾಖ್‌ ಎಂದು ಕರೆಯಲಾಗುತ್ತದೆ. ಅದೇ ರೀತಿ ಪತ್ನಿಯೇ ವಿಚ್ಛೇದನ ನೀಡಿದಲ್ಲಿ ಅದನ್ನು 'ಖುಲಾ' ಎನ್ನಲಾಗುತ್ತದೆ. ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮದುವೆ ಸಮಾರಂಭದಲ್ಲಿ ಊಟದ ವಿಚಾರವಾಗಿ ವಧು-ವರರ ಕಡೆಯವರ ನಡುವೆ ಜಗಳವಾಗಿತ್ತು. ಮದುವೆ ವೇಳೆ ಊಟ ಬಡಿಸುತ್ತಿರುವ ಬಗ್ಗೆ ವರನ ಕಡೆಯವರು ದೂರು ನೀಡಿದ್ದು, ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ಒಂದು ಹಂತಕ್ಕೆ ವಿಕೋಪಕ್ಕೆ ತಿರುಗಿದ್ದು, ವರ ಗುಲಾಂ ನಬಿ ವಧುವಿನ ಸಹೋದರನೊಂದಿಗೆ ಮಾತಿನ ಚಕಮಕಿ ನಡೆಸಿದ್ದಲ್ಲದೆ, ಆತನಿಗೆ ಹೊಡೆದಿದ್ದಾನೆ. ಎರಡೂ ಕಡೆಯ ಪೋಷಕರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರು, ಆದರೆ ಪರಿಸ್ಥಿತಿ ಹತೋಟಿ ಮೀರಿದ್ದರಿಂದ ವಿಫಲವಾಯಿತು. ವಧು ಅಂತಿಮವಾಗಿ ವಿಚ್ಛೇದನ ಮಾಡಿಕೊಳ್ಳಲು ನಿರ್ಧರಿಸಿದ್ದಳು. ನಂತರ ಮಹಿಳೆ ಭಾನುವಾರ ಬೆಳಿಗ್ಗೆ ಪುರುಷನಿಗೆ ಖುಲಾ (ವಿಚ್ಛೇದನ) ನೀಡಿದ್ದಾಳೆ ಎಂದು ವರದಿಯಾಗಿದೆ.

ವರ ಗುಲಾಂ ನಬಿ, ನಾವಡಾದ ಅನ್ಸಾರ್ ನಗರದ ನಿವಾಸಿಯಾಗಿದ್ದು, ಫುಲ್ವಾರಿ ಷರೀಫ್‌ನ ಇಮಾಮ್ ಕಾಲೋನಿಯಲ್ಲಿರುವ ಸಮುದಾಯ ಕೇಂದ್ರದಲ್ಲಿ ವಿವಾಹ ಕಾರ್ಯಕ್ರಮ ನಡೆದಿತ್ತು. ಆಗಸ್ಟ್ 2017 ರಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು. ತರುವಾಯ, ಜುಲೈ 2019 ರಲ್ಲಿ ಮುಸ್ಲಿಂ ಮಹಿಳೆಯರ (ವಿವಾಹದ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಜಾರಿಗೆ ತಂದಿದ್ದು, ಆಗಸ್ಟ್ 1, 2019 ರಿಂದ ದೇಶದಲ್ಲಿ ತ್ರಿವಳಿ ತಲಾಖ್ ಅನ್ನು ಕಾನೂನುಬಾಹಿರಗೊಳಿಸಿತು. ಆದರೆ, ಇದು ತ್ರಿವಳಿ ತಲಾಖ್‌ ವ್ಯಾಪ್ತಿಗೆ ಬರೋದಿಲ್ಲ. 
 

Tap to resize

Latest Videos

click me!