ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿಗೆ ಬಿಗ್ ಪ್ಲಾನ್, ಇಬ್ಬರು 'ಕಸಬ್' ಅರೆಸ್ಟ್!

By Suvarna News  |  First Published Nov 18, 2020, 4:53 PM IST

ದೆಹಲಿಯಲ್ಲಿ ಉಗ್ರ ದಾಳಿಗೆ ಬಿಗ್ ಸ್ಕೆಚ್| ಇಬ್ಬರು ಉಗ್ರರು ಅರೆಸ್ಟ್| ಶಾಕಿಂಗ್ ವಸ್ತುಗಳು ಪತ್ತೆ


ನವದೆಹಲಿ(ನ.18) ದೆಹಲಿ ಪೊಲೀಸರ ವಿಶೇಷ ತಂಡ ಸೋಮವಾರ ಜೈಶ್ ಎ ಮೊಹಮ್ಮದ್‌ನ ಇಬ್ಬರು ಉಗ್ರರನ್ನು ಬಂಧಿಸಿ ಬಹುದೊಡ್ಡ ಅಪಾಯವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಉಗ್ರರು ಮುಂಬೈನಲ್ಲಿ ದಾಳಿ ನಡೆಸಿದ್ದ ಅಜ್ಮಲ್ ಕಸಬ್‌ನಂತೆ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳನ್ನು ಟಾರ್ಗೆಟ್ ಮಾಡಲು ತಂತ್ರ ರೂಪಿಸಿದ್ದರು. ಆದರೀಗ ದೆಹಲಿ ಪೊಲೀಸರ ಸಮಯ ಪ್ರಜ್ಞೆಯಿಂದ ಇಬ್ಬರು ಕಸಬ್‌ ಜೈಲು ಪಾಲಾಗಿದ್ದಾರೆ.

ಪೊಲೀಸರು ಇವರಿಬ್ಬರನ್ನೂ ದೆಹಲಿಯ ಸರಾಯ್ ಕಾಲೆ ಖಾಂದಿಂದ ಬಂಧಿಸಿದ್ದಾರೆ. ಈ ಇಬ್ಬರೂ ತೀವ್ರಗಾಮಿಗಳಿಗೆ ದೆಹಲಿಯಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಆದೇಶಿಸಲಾಗಿತ್ತು. ಇಬ್ಬರೂ ಕಣಿವೆ ನಾಡು ಕಾಶ್ಮೀರದವರಾಗಿದ್ದಾರೆ.

Tap to resize

Latest Videos

ಉಗ್ರರು, ರಾಷ್ಟ್ರ ವಿರೋಧಿಗಳಿಂದ ತುಂಬಿರುವ ಬಂಗಾಳ ಕಾಶ್ಮೀರಕ್ಕಿಂತ ಕಡೆಯಾಗಿದೆ

ಇಲ್ಲಿದೆ ನೋಡಿ ಉಗ್ರರ ಮಾಹಿತಿ: 

ಅಬ್ದುಲ್ ಲತೀಫ್ ಮೀರ್, 22 ವರ್ಷದ ಶಂಕಿತ ಉಗ್ರ ಕಾಶ್ಮೀರದ ಬರಾಮುಲ್ಲಾದ ನಿವಾಸಿ. ಆತ ಶ್ರಿನಗರದ ದಾರುಲ್ ಉಲೂಮ್ ಬಿಲಾಲಿಯಾ ಶಕ್ ಮದರಸಾದಿಂದ ಹಾಫಿಜ್ ಶಿಕ್ಷಣ ಪಡೆದುಕೊಂಡಿದ್ದಾನೆ. ಮತ್ತೊಬ್ಬ ಶಂಕಿತ ಉಗ್ರ ಮೊಹಮ್ಮದ್ ಅಶ್ರಫ್ ಖಾತ್ನಾ, 20 ವರ್ಷದ ಈತ ಕೂಡಾ ಶ್ರೀನಗರದ ಮದರಸಾದಲ್ಲೇ ಶಿಇಕ್ಷಣ ಪಡೆದಿದ್ದಾನೆ. ಇಬ್ಬರೂ ಸೋಶಿಯಲ್ ಮೀಡಿಯಾ ಮೂಲಕ ತೀವ್ರಗಾಮಿಗಳಾಗಿದ್ದಾರೆ. ಇಬ್ಬರನ್ನೂ ಪಾಕಿಸ್ತಾನ ಹ್ಯಾಂಂಡ್ಲರ್‌ಗಳು ಇವರನ್ನು ಈ ಕೃತ್ಯದೆಡೆ ದೂಡಿದ್ದಾರೆ. ನಾಆಲ್ಕು ತಿಂಗಳ ಹಿಂದೆ ಇಬ್ಬರೊಂದಿಗೆ ಲಾಹೋರ್‌ನಲ್ಲಿ ವಾಸಿಸುವ ಜೈಶ್‌ನ ರಿಕ್ರೂಟರ್ ಅಫ್ತಾಬ್ ಮಲಿಕ್ ಮೆಸೆಂಜರ್ ಆಪ್ ಮೂಲಕ ಸಂಪರ್ಕಿಸಿದ್ದಾರೆ. ಬಳಿಕ ಸೋಶಿಯಲ್ ಮೀಡಿಯಾಆ ಆಪ್ ಮೂಲಕ ಫೋನ್‌ನಲ್ಲಿ ಮಾತುಕತೆ ಆರಂಭಿಸಿದ್ದರು.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನಕ್ಕೆ ದೀಪಾವಳಿ ಗಿಫ್ಟ್ ನೀಡಿದ ಭಾರತೀಯ ಸೇನೆ!

ಕಸಬ್‌ನಂತೆ ದಾಳಿ ನಡೆಸಲು ಪ್ಲಾನ್

ಬಂಧಿತ ಉಗ್ರರ ಲೀಡರ್‌ ಇಬ್ಬರನ್ನೂ ಪಾಕಿಸ್ತಾನಕ್ಕೆ ಆಆತ್ಮಹತ್ಯಾ ದಾಳಿ ನಡೆಸುವ ತರಬೇತಿಗೆ ಕರೆಸಿಕೊಂಡಿದ್ದರು. ಹೀಗಿದ್ದರೂ ಇವರಿಬ್ಬರು ಮೂತರು ಬಾರಿ ಗಡಿ ದಾಟುವಲ್ಲಿ ವಿಫಲರಾಗಿದ್ದರು. ಇದಾದ ಬಳಿಕ ಇವರನ್ನು ದೇವನಂದ್‌ನಲ್ಲಿ ತರಬೇತಿಗೆ ಕರೆಸಿಕೊಂಡರು. ಹೀಗಾಗಿ ಇಬ್ಬರೂ ಕಾಶ್ಮೀರ ಬಿಟ್ಟು ಉತ್ತರ ಪ್ರದೇಶಕ್ಕೆ ಬಂದರು. ಇದಾದ ಬಳಿಕ ಅವರನ್ನು PoKಗೆ ಕಳುಹಿಸಲಾಯ್ತು. ಪಾಕಿಸ್ತಾನದಲ್ಲಿ ಅವರಿಗೆ ದೆಹಲಿಯ ರಸ್ತೆಗಳಲ್ಲಿ ಸ್ಫೋಟ ನಡೆಸಲು ತಿಳಿಸಲಾಗಿತ್ತು.

ಉಗ್ರರ ಬಳಿ ಸಿಕ್ಕಿದ್ದೇನು?

ಪೊಲೀಸರಿಗೆ ಇಬ್ಬರ ಬಳಿ ಗಡಿ ದಾಟುವ ವಿಡಿಯೋ, ಗಡಿಯಾಚೆ ತಲುಪಿ ತಮ್ಮ ಲೀಡರ್‌ಗಳನ್ನು ಭೇಟಿಯಾಗಿ ದಾಳಿಯ ಯೋಜನೆ ರೂಪಿಸುವ Audio ಹಾಗೂ ಜಿಹಾದಿ ಸಾಹಿತ್ಯ ಸಿಕ್ಕಿದೆ. 
 

click me!