ಸೈನಿಕರ ಸ್ಮಾರಕಕ್ಕೆ ಅಪಮಾನ; ಸುಳಿವು ನೀಡಿದ್ರೆ 5 ಲಕ್ಷ, ರಾಜೀವ್ ಚಂದ್ರಶೇಖರ್ ಘೋಷಣೆ

By Suvarna NewsFirst Published Nov 18, 2020, 4:22 PM IST
Highlights

ಸೈನಿಕರ ಸ್ಮಾರಕ್ಕೆ ಹಾನಿ/ ಆರೋಪಿಗಳ ಸುಳಿವು ನೀಡಿದವರಿಗೆ ಐದು ಲಕ್ಷ ಬಹುಮಾನ/ ಸಂಸದ ರಾಜೀವ್ ಚಂದ್ರಶೇಖರ್ ಘೋಷಣೆ/ ಮುಂಬೈನಲ್ಲಿ ನಡೆದ ಘಟನೆ

ಬೆಂಗಳೂರು(ನ. 18)  ಮುಂಬೈನ ಅಮರ್ ಜವಾನ್ ಸೈನಿಕ ಸ್ಮಾರಕಕ್ಕೆ ಅಪಮಾನ ಮಾಡಿದ ಅಪರಾಧಿಗಳ ಬಗ್ಗೆ ಸುಳಿವು ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುತ್ತೇನೆ ಎಂದು ಸಂಸದ ರಾಜೀವ್ ಚಂದ್ರಶೇಖರ್  ಘೋಷಿಸಿದ್ದಾರೆ.

ಆಗಸ್ಟ್ 11 ರಂದು ಮುಂಬೈನ ಆಜಾದ್ ಮೈದಾನದಲ್ಲಿ ನಡೆದ ಹಿಂಸಾಚಾರದ ವೇಳೆ ಸ್ಮಾರಕಕ್ಕೆ ಹಾನಿ ಮಾಡಲಾಗಿತ್ತು.  ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತ ಇದ್ದಾರೆ.

ಕಪ್ಪು ಹಣಕ್ಕೆ ಬ್ರೇಕ್ ಹಾಕಿದ ನೋಟ್ ಬ್ಯಾನ್; ರಾಜೀವ್ ವಿವರಣೆ

ಸ್ಮಾರಕವನ್ನು ಧ್ವಂಸಗೊಳಿಸಿದ ಜನರು ಯಾವುದೇ ನಂಬಿಕೆ ಅಥವಾ ಧರ್ಮಕ್ಕೆ ಸೇರಿದವರಲ್ಲ ಎನ್ನುವುದು ಸ್ಪಷ್ಟವಾಗಿದೆ.  ಈ ಕೆಲಸ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕಿದೆ ಎಂದು ಚಂದ್ರಶೇಖರ್ ಆಗ್ರಹಿಸಿದ್ದಾರೆ.

1857 ರ ಬ್ರಿಟಿಷ್ ಆಡಳಿತದ ವಿರುದ್ಧದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹುತಾತ್ಮರಾದ ಸಿಪಾಯ್ ಸಯ್ಯದ್ ಹುಸೇನ್ ಮತ್ತು ಸಿಪಾಯ್ ಮಂಗಲ್ ಗಡಿಯಾ ಅವರ ಗೌರವಾರ್ಥ ಸ್ಮಾರಕ ನಿರ್ಮಾಣ ಮಾಡಲಾಗಿದೆ.

ಇಂಥ ಕೆಲಸ ಮಾಡಿರುವ ದುಷ್ಕರ್ಮಿಗಳು  ದೇಶದ  ಲಕ್ಷಾಂತರ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ.  ಹೊರಗಿನ ದುಷ್ಟ ಶಕ್ತಿಗಳಿಂದ ದೇಶವನ್ನು ಕಾಪಾಡಲು ಮುಂದಾದವರ ಅಪಮಾನ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. 

 

click me!