ಭಾರತದ ಮೇಲೆ ಚೀನಾ ದಾಳಿ ಎಂದ ವಿದೇಶೀ ಮಾಧ್ಯಮ: ಸುಳ್ಳು ಯಾಕ್ರೀ ಹೇಳ್ತೀರಾ? ಭಾರತೀಯ ಸೇನೆಯ ಉತ್ತರ!

Published : Nov 18, 2020, 01:59 PM ISTUpdated : Nov 18, 2020, 03:05 PM IST
ಭಾರತದ ಮೇಲೆ ಚೀನಾ ದಾಳಿ ಎಂದ ವಿದೇಶೀ ಮಾಧ್ಯಮ: ಸುಳ್ಳು ಯಾಕ್ರೀ ಹೇಳ್ತೀರಾ? ಭಾರತೀಯ ಸೇನೆಯ ಉತ್ತರ!

ಸಾರಾಂಶ

ಭಾರತದ ಮೇಲೆ ಚೀನಾ ದಾಳಿ| ವಿದೇಶೀ ಮಾಧ್ಯಮಗಳ ವರದಿ| ಇದು ಸುಳ್ಳು ಎಂದ ಭಾರತೀಯ ಸೇನೆ| ಇಲ್ಲಿದೆ ಈ ವಿವಾದದ ಸಂಪೂರ್ಣ ವಿವರ

ನವದೆಹಲಿ(ನ.18) ಭಾರತ ಹಾಗ ಚೀನಾ ನಡುವಿನ ಬಿಕ್ಕಟ್ಟು ಹೆಚ್ಚುತ್ತಿರುವ ಬೆನ್ನಲ್ಲೇ ವಿದೇಶೀ ಮಾಧ್ಯಮಗಳು ಭಾರತದ ಮೇಲೆ ಚೀನಾ ದಾಳಿ ನಡೆಸಿದೆ ಎಂಬ ಸುಳ್ಳು ಸುದ್ದಿ ಬಿತ್ತರಿಸುತ್ತಿವೆ. ಇಂತಹ ಅನೇಕ ಸುಳ್ಳು ಸುದ್ದಿಗಳನ್ನು ಕಾಲ ಕಾಲಕ್ಕೆ ಭಾರತ ಸರ್ಕಾರ ಹಾಗೂ ಭಾರತೀಯ ಸೇನೆ ನಿರಾಕರಿಸುತ್ತಲೇ ಬಂದಿದೆ. ಹೀಗಿರುವಾಗಲೇ ಯುಕೆಯ 'ದ ಟೈಮ್ಸ್ ' ಪೂರ್ವ ಲಡಾಖ್‌ನಲ್ಲಿ ಭಾರತೀಯ ಯೋಧರ ಮೇಲೆ ಚೀನಾ ದಾಳಿ ನಡೆಸಿದ ಎಂಬ ಫೇಕ್ ನ್ಯೂಸ್ ಪ್ರಕಟಿಸಿದೆ. ಬ್ರಿಟನ್‌ನ ಮಾಧ್ಯಮ ಪಿಎಲ್‌ಎಯ ಭೀಕರ ಕೃತ್ಯವನ್ನು ಬಹಿರಂಗಪಡಿಸುತ್ತಾ ಮಾಡಿರುವ ವರದಿಯಲ್ಲಿ ಇಲ್ಲಿನ ಎರಡು ಪ್ರಮುಖ ಶಿಖರಗಳಲ್ಲಿ ಬೀಡುಬಿಟ್ಟಿದ್ದ ಭಾರತೀಯ ಸೈನಿಕರ ಮೇಲೆ ಚೀನಾ ಮೈಕ್ರೋವೆಬ್ ಅಸ್ತ್ರದ ಮೂಲಕ ದಾಳಿ ನಡೆಸಿದ ಎಂಬ ಸುಳ್ಳು ಮಾಹಿತಿ ನೀಡಿದೆ.

Fact Check : ಆರ್‌ಜೆಡಿ ಕಚೇರಿಯಲ್ಲಿ ಸಿಹಿ ತಿನಿಸು ಕಸದ ಬುಟ್ಟಿಗೆ?

ಸೋಶಿಯಲ್ ಮೀಡಿಯಾದಲ್ಲಿ ಈ ವರದಿ ವೈರಲ್ ಆಗುತ್ತಿದ್ದಂತೆಯೇ ಭಾರತೀಯ ಸೇನೆ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ. ಅಷ್ಟಕ್ಕೂ ಏನಿದು ವಿವಾದ? ಇಲ್ಲಿದೆ ಸಂಪೂರ್ಣ ಮಾಹಿತಿ

ಲಡಾಖ್‌ನಲ್ಲಿ ಚೀನಾ ದಾಳಿ ನಡೆಸಿದ ಎಂಬ ವರದಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಈ ವರದಿಯಲ್ಲಿ ಚೀನಾ ಸೇನೆ ಲಡಾಖ್‌ನ ಎರಡು ಶಿಖರದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಯೋಧರನ್ನು ಹಿಂದೆ ಸರಿಸಲು ಮೈಕ್ರೋವೆಬ್ ಅಸ್ತ್ರ ಬಳಸಿದೆ ಎಂದು ತಿಳಿಸಲಾಗಿದೆ.

ಬ್ರಿಟಿಷ್ ಪತ್ರಿಕೆ ದ ಟೈಮ್ಸ್‌ ಪ್ರಕಟಿಸಿದ ವರದಿಯನ್ವಯ ಪ್ರೊಫೆಸರ್ ಜಿನ್ ಉಪನ್ಯಾಸವೊಂದರಲ್ಲಿ ಮೈಕ್ರೋವೆಬ್ ಅಸ್ತ್ರ ಪ್ರಯೋಗಿಸಿದ ಬಗ್ಗೆ ಉಲ್ಲೇಖಿಸಿದ್ದಾರೆನ್ನಲಾಗಿದೆ. ಅಲ್ಲದೇ ಚೀನಾ ಭಾರತೀಯ ಯೋಧರ ಮೇಲೆ ಈ ಅಸ್ತ್ರ ಪ್ರಯೋಗಿಸಿ, ಎರಡು ಶಿಖರದ ಮೇಲೆ ಕಂಟ್ರೋಲ್ ಪಡೆದಿದೆ. ಅಲ್ಲದೇ ಭಾರತ ಈ ದಾಳಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಚೀನಾ ಯೋಧರು ಶಿಖರದ ಕೆಳಭಾಗದಿಂದ ಮೇಲೆಡ ಇದ್ದ ಸೈನಿಕರ ಮೇಲೆ ದಾಳಿ ನಡೆಸಿದ್ದರೆಂದೂ ಜಿನ್ ತಮ್ಮ ಉಪನ್ಯಾಸದಲ್ಲಿ ಉಲ್ಲೇಖಿಸಿದ್ದರು.

ಬೈಡೆನ್‌ ಪ್ರಮಾಣ ಕಾರ‍್ಯಕ್ರಮಕ್ಕೆ ಮನಮೋಹನ್ ಸಿಂಗ್ ಮುಖ್ಯ ಅತಿಥಿ?

The Australian ವೆಬ್‌ಸೈಟ್ ಕೂಡಾ ಇಂತಹುದೇ ವರದಿ ಪ್ರಕಟಿಸಿದೆ.

ಆದರೆ ಈ ವರದಿ ಎಷ್ಟು ಸತ್ಯ ಎಂಬುವುದು ತಿಳಿದುಕೊಳ್ಳಲೇಬೇಕು. ನಿಜವೆಂದಾದರೆ ಯಾಕಿಷ್ಟು ಸದ್ದು ಮಾಡಿಲ್ಲ? ಎಂಬ ಪ್ರಶ್ನೆಯೂ ಮೂಡುತ್ತದೆ. ಈ ವರದಿ ಹಿಂದಿನ ಸತ್ಯಾಸತ್ಯತೆ ತಿಳಿಯಲು ಯತ್ನಿಸಿದಾಗ ವಿದೇಶೀ ಮಾಧ್ಯಮಗಳ ಈ ವರದಿ ಸುಳ್ಳು ಎಂಬುವುದು ದೃಢವಾಗಿದೆ. ಭಾರತೀಯ ಸೇನೆ ಮಂಗಳವಾರ ಚೀನಾದ ಉಪನ್ಯಾಸಕ ಕೊಟ್ಟ ಮಾಹಿತಿ ಸುಳ್ಳು. ಇಂತಹ ಯಾವುದೇ ದಾಳಿ ನಡೆದಿಲ್ಲ ಎಂದಿದೆ.

ಪಿಐಬಿ ಕೂಡಾ ಚೀನಾ ಭಾರತದ ಮೇಲೆ ದಾಳಿ ನಡೆಸಿದೆ ಎಂಬ ವರದಿಯನ್ನು ಖಂಡಿಸಿದೆ. ಭಾರತೀಯ ಸೇನಾ ಅಧಿಕಾರಿಗಳೊಂದಿಗೆ ಮಾತನಾಡಿ, ಇಂತಹ ಯಾವುದೇ ದಾಳಿ ನಡೆದಿಲ್ಲ ಎಂದು ಖಚಿತಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !
ಇನ್ನೂ 3 ದಿನ ತಗ್ಗುವುದಿಲ್ಲ ಇಂಡಿಗೋಳು! - ನಿನ್ನೆ ಮತ್ತೆ 650 ವಿಮಾನ ರದ್ದು