ಪ್ರತಿಪಕ್ಷಗಳು ತಮ್ಮ ಮೇಲೆ ಹೊರಿಸಿರುವ ದೊಡ್ಡ ಆರೋಪವೆಂದರೆ ಅದು ನನ್ನ ಬಳಿ 250 ಬಟ್ಟೆ ಇದೆ ಎಂದು. ಆದರೆ 250 ಕೋಟಿ ರು. ಲೂಟಿಕೋರರಿಗಿಂದ 250 ಬಟ್ಟೆ ಹೊಂದಿದವರು ಮೇಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭುವನೇಶ್ವರ: ‘ಪ್ರತಿಪಕ್ಷಗಳು ತಮ್ಮ ಮೇಲೆ ಹೊರಿಸಿರುವ ದೊಡ್ಡ ಆರೋಪವೆಂದರೆ ಅದು ನನ್ನ ಬಳಿ 250 ಬಟ್ಟೆ ಇದೆ ಎಂದು. ಆದರೆ 250 ಕೋಟಿ ರು. ಲೂಟಿಕೋರರಿಗಿಂದ 250 ಬಟ್ಟೆ ಹೊಂದಿದವರು ಮೇಲು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು, ‘ನನ್ನ ಬಳಿ 250 ಜೊತೆ ಬಟ್ಟೆ ಇರುವುದಾಗಿ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ನಾಯಕ ಅಮರಸಿಂಹ ಚೌಧರಿ ಆರೋಪಿಸಿದ್ದರು. ಬಳಿಕ ನಾನು ಜನರ ಮುಂದೆ 250 ಕೋಟಿ ರು. ಲೂಟಿ ಹೊಡೆಯುವವರು ಮತ್ತು 250 ಜೊತೆ ಬಟ್ಟೆ ಹೊಂದಿದವರಲ್ಲಿ ಯಾರು ಬೇಕು ಎಂದು ಪ್ರಶ್ನಿಸಿದೆ. ಆಗ ಜನರು 250 ಜೊತೆ ಬಟ್ಟೆ ಹೊಂದಿರುವವರೇ ಮೇಲು ಎಂದು ಉತ್ತರಿಸಿದರು. ಆದರೂ ನಾನು ಅಮರಸಿಂಹ ಅವರ ಆರೋಪವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ವ್ಯಂಗ್ಯವಾಡಿದರು.
undefined
ಮಣಿಶಂಕರ್ ಅಯ್ಯರ್ 'ಪಾಕ್ ಅಣುಬಾಂಬ್' ಮಾತಿಗೆ ಪ್ರಧಾನಿ ಮೋದಿ ತಿರುಗೇಟು!
ಇತ್ತೀಚೆಗೆ ರಾಹುಲ್ ಗಾಂಧಿಯೂ ಸಹ ಪ್ರಧಾನಿಯಾಗಿ ಮೋದಿ 1.6 ಲಕ್ಷ ರು. ಪಗಾರ ಪಡೆದು ಹೆಚ್ಚಿನ ಪಾಲು ದುಬಾರಿ ವಸ್ತ್ರ ಖರೀದಿಗೇ ಬಳಸುತ್ತಾರೆ ಎಂದು ಆರೋಪಿಸಿದ್ದರು.
ಸ್ವಾಮಿ ಜಗನ್ನಾಥನೇ ಮೋದಿಯ ಭಕ್ತ: ಸಂಬಿತ್ ಪಾತ್ರ ವಿವಾದ
ಭುವನೇಶ್ವರ: ‘ಪುರಿ ಜಗನ್ನಾಥ ಸ್ವಾಮಿಯೇ ಪ್ರಧಾನಿ ಮೋದಿಯ ಭಕ್ತ’ ಎನ್ನುವ ಮೂಲಕ ಪುರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರ ವಿವಾದ ಸೃಷ್ಟಿಸಿದ್ದಾರೆ. ಮತದಾನದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘ಮಹಾಪ್ರಭು ಜಗನ್ನಾಥ ಮೋದಿಯ ಭಕ್ತ’ ಎಂದು ಹೇಳಿದರು. ಈ ಕುರಿತು ಕಾಂಗ್ರೆಸ್ ಹಾಗೂ ಬಿಜೆಡಿ ತೀವ್ರ ವಾಗ್ದಾಳಿ ನಡೆಸಿವೆ. ‘ಸಂಬಿತ್ ಪಾತ್ರ ಒಡಿಶಾ ಅಸ್ಮಿತೆಗೆ ಧಕ್ಕೆ ತಂದಿದ್ದು, ರಾಷ್ಟ್ರೀಯ ಮಾಧ್ಯಮದಲ್ಲಿ ಕೈ ಮುಗಿದು ಕ್ಷಮೆಯಾಚಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದ್ದರೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ‘ಒಡಿಯಾ ಜನರ ಭಾವನೆಗೆ ಈ ಹೇಳಿಕೆಯಿಂದ ಧಕ್ಕೆ ಆಗಿದೆ’ ಎಂದಿದ್ದಾರೆ.
ಲೋಕ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಲಿದೆ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್