ದೇಶದಲ್ಲಿ ಭಾರೀ ದುಷ್ಕೃತ್ಯಕ್ಕೆ ಸಜ್ಜಾಗಿದ್ದ ಜಾಲವೊಂದನ್ನು ಬೇಧಿಸಿರುವ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಐಸಿಸ್‌ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಬಂಧಿಸಿದೆ.
ಅಹಮದಾಬಾದ್: ದೇಶದಲ್ಲಿ ಭಾರೀ ದುಷ್ಕೃತ್ಯಕ್ಕೆ ಸಜ್ಜಾಗಿದ್ದ ಜಾಲವೊಂದನ್ನು ಬೇಧಿಸಿರುವ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್), ಐಸಿಸ್‌ಗೆ ಸೇರಿದ ನಾಲ್ವರು ಶಂಕಿತ ಉಗ್ರರನ್ನು ಸೋಮವಾರ ಬಂಧಿಸಿದೆ. ಇದರೊಂದಿಗೆ ಸಂಭವನೀಯ ದುರಂತವೊಂದು ತಪ್ಪಿದೆ. ಬಂಧಿತರೆಲ್ಲರೂ ಶ್ರೀಲಂಕಾ ಮೂಲದ ಪ್ರಜೆಗಳಾಗಿದ್ದಾರೆ.
ಪಾಕಿಸ್ತಾನ ಮೂಲದ ಏಜೆಂಟ್ ಸೂಚನೆ ಅನ್ವಯ ಕಾರ್ಯನಿರ್ವಹಿಸುತ್ತಿದ್ದ ಈ ನಾಲ್ವರು ಐಸಿಸ್ (ಇಸ್ಲಾಮಿಕ್ ಸ್ಟೇಟ್) ಶಂಕಿತ ಉಗ್ರರು, ಭಾರತದಲ್ಲಿ ದೊಡ್ಡ ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಇದಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಪೂರೈಸುವ ಭರವಸೆಯನ್ನು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ನೀಡಿದ್ದ. ಈ ನಡುವೆ ಯಾರ ಸೂಚನೆ ಅನ್ವಯ ಇವರೆಲ್ಲರೂ ಕಾರ್ಯನಿರ್ವಹಿಸುತ್ತಿದ್ದರೋ ಆತನ ಭೇಟಿಗೆಂದೇ ಈ ನಾಲ್ವರು ಶ್ರೀಲಂಕಾದಿಂದ ಚೆನ್ನೈ ಮಾರ್ಗವಾಗಿ ಅಹಮದಾಬಾದ್‌ಗೆ ಆಗಮಿಸಿದ್ದರು. ಈ ಭೇಟಿ ವೇಳೆ ಎಲ್ಲಿ? ಯಾವಾಗ? ಹೇಗೆ ದುಷ್ಕೃತ್ಯ ನಡೆಸಬೇಕು ಎಂಬ ಸಂದೇಶವನ್ನು ಹ್ಯಾಂಡ್ಲರ್ ಈ ನಾಲ್ವರಿಗೂ ರವಾನಿಸುವನಿದ್ದ. ಅಲ್ಲದೆ, ಶಸ್ತ್ರಾಸ್ತ್ರ ನೀಡುವುದಾಗಿ ಹೇಳಿದ್ದ.
ಪ್ರಧಾನಿ ಮೋದಿಯವರನ್ನ ಹೊಗಳಿದ್ದಕ್ಕೆ ಕಾಶ್ಮೀರದಲ್ಲಿ ಮಾಜಿ ಸರಪಂಚ್‌ನ ಹತ್ಯೆ?
ಆದರೆ ಈ ಕುರಿತು ಖಚಿತ ಮಾಹಿತಿ ಪಡೆದ ಎಟಿಎಸ್ ಸಿಬ್ಬಂದಿ, ಸೋಮವಾರ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿ ನಾಲ್ವರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 12ರಂದು ಅಹಮದಾಬಾದ್ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಬಾಂಬ್ ಕರೆ ಮಾಡಲಾಗಿತ್ತು. ಆದರೆ ಪರಿಶೀಲನೆ ವೇಳೆ ಅದೊಂದು ಹುಸಿ ಕರೆ ಎಂದು ಸಾಬೀತಾಗಿತ್ತು. ಅದರ ಬೆನ್ನಲ್ಲೇ ಶಂಕಿತ ಉಗ್ರರು ಬಲೆಗೆ ಬಿದ್ದಿದ್ದಾರೆ. ಕಳೆದ ವರ್ಷದ ಆಗಸ್ಟ್‌ನಲ್ಲೂ ಎಟಿಎಸ್ ಸಿಬ್ಬಂದಿ, ರಾಜ್‌ಕೋಟ್ ಬಳಿ ಅಲ್‌ಖೈದಾ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದ್ದರು.
ಖಲಿಸ್ತಾನಿ ಉಗ್ರ ನಿಜ್ಜರ್‌ಹತ್ಯೆ ಮಾಡಿದ್ದ ಸುಪಾರಿ ಹಂತಕರನ್ನ ಬಂಧಿಸಿದ ಕೆನಡಾ