ಪಬ್‌ಜಿ ಆಡಿದವರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ಸಂಸ್ಥಾಪಕ!

Published : Apr 10, 2025, 04:09 PM ISTUpdated : Apr 10, 2025, 04:17 PM IST
ಪಬ್‌ಜಿ  ಆಡಿದವರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ಸಂಸ್ಥಾಪಕ!

ಸಾರಾಂಶ

ಕ್ರಾಫ್ಟನ್ ವಿರುದ್ಧ ದತ್ತಾಂಶ ಉಲ್ಲಂಘನೆ, ಒಪ್ಪಂದ ಉಲ್ಲಂಘನೆ ಮತ್ತು ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡ ಆರೋಪ ಕೇಳಿಬಂದಿದೆ. ಈ ಬಗ್ಗೆ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಬಾಂಬೆ ಹೈಕೋರ್ಟ್ ಏಪ್ರಿಲ್ 15, 2025 ರಂದು ವಿಚಾರಣೆ ನಡೆಸಲಿದೆ. ಈ ಆರೋಪಗಳಿಂದ BGMI ನಿಷೇಧದ ಸಾಧ್ಯತೆಯ ಬಗ್ಗೆ ಆತಂಕ ಉಂಟಾಗಿದೆ. ಕ್ರಾಫ್ಟನ್ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ನ್ಯಾಯಾಲಯದ ತೀರ್ಪಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದೆ.

PUBG ಮತ್ತು BGMI ಸೃಷ್ಟಿಕರ್ತ ಕ್ರಾಫ್ಟನ್  ಮೇಲೆ ಡೇಟಾ ಉಲ್ಲಂಘನೆ , ಒಪ್ಪಂದ ಉಲ್ಲಂಘನೆ ಮತ್ತು ಬಳಕೆದಾರರ ಡೇಟಾದ ಅನಧಿಕೃತ ಹಂಚಿಕೆ ಮತ್ತು ಮಾರಾಟದ ಆರೋಪ ಕೇಳಿ ಬಂದಿದೆ. ಇದು ಭಾರತದಲ್ಲಿ ಡಿಜಿಟಲ್ ಗೌಪ್ಯತೆಯ ಭದ್ರತೆ ಬಗ್ಗೆ ಕಳವಳವನ್ನುಂಟು ಮಾಡಿದೆ. ಸೆಪ್ಟೆಂಬರ್ 5, 2024 ರಂದು ಮಹಾರಾಷ್ಟ್ರದ ಅಕ್ಲುಜ್ ಪೊಲೀಸ್ ಠಾಣೆಯಲ್ಲಿ ಕ್ರಾಫ್ಟನ್  ವಿರುದ್ಧ FIR ದಾಖಲಾಗಿದ್ದು,  ಬಾಂಬೆ ಹೈಕೋರ್ಟ್ ಏಪ್ರಿಲ್ 15, 2025 ರಂದು ವಿಚಾರಣೆ ನಡೆಸಲಿದೆ.

ಇದರ ಜೊತೆಗೆ ಕ್ರಾಫ್ಟನ್ ವಿರುದ್ಧದ ಈ ಆರೋಪಗಳಿಂದ BGMI ನಿಷೇಧದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೆಪ್ಟೆಂಬರ್ 2, 2020 ರಂದು ಭಾರತದಲ್ಲಿ PUBG ಮೊಬೈಲ್ ಅನ್ನು ನಿಷೇಧಿಸಿದ್ದರಿಂದ, BGMI ನಿಷೇಧದ ಸಾಧ್ಯತೆಯು ದೂರವಿಲ್ಲವಾದ್ದರಿಂದ ಭಾರತದಾದ್ಯಂತ ಆನ್‌ಲೈನ್ ಆಟಗಾರರು ಆತಂಕದಲ್ಲಿದ್ದಾರೆ. 

PUBG ಗೇಮ್‌ ಎಫೆಕ್ಟ್‌?: ಒಂದೇ ರೀತಿ ಕೈ ಕುಯ್ದುಕೊಂಡ 10 ವಿದ್ಯಾರ್ಥಿನಿಯರು!

ಈ ತಿಂಗಳ ಆರಂಭದಲ್ಲಿ ಮಹಾರಾಷ್ಟ್ರದ ನಿವಾಸಿ ಸಂತೋಷ್ ತೋರಣೆ ಎಂಬವರು ಕ್ರಾಫ್ಟನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಾಲ್ವರು ಕಾರ್ಯನಿರ್ವಾಹಕರ ವಿರುದ್ಧ ಟೆಲಿಗ್ರಾಮ್‌ನಲ್ಲಿ ಬಾಹ್ಯ ವ್ಯಕ್ತಿಗಳಿಗೆ ಟೊರೇನ್ ಅವರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಸೇವಾ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಿದ್ದರು. ಕಂಪನಿಯು ಪ್ರತಿ ಬಳಕೆದಾರರಿಗೆ ಅವರ ಒಪ್ಪಿಗೆಯನ್ನು ಪಡೆಯದೆ 2,000 ರೂ.ಗೆ ಡೇಟಾವನ್ನು ಮಾರಾಟ ಮಾಡಿದೆ. ಈ ಹಿಂದೆ ಕೂಡ ಸಂತೋಷ್ ಈ ಬಗ್ಗೆ ಹಲವು ಬಾರಿ ಹೋರಾಟ ನಡೆಸಿ ದೂರು ಕೊಟ್ಟಿದ್ದಾರೆ. ಆದರೆ ಯಾವುದು ಕೂಡ ವಿಚಾರಣೆಗೆ ಬಂದಿರಲಿಲ್ಲ ಆದರೆ ಈ ಬಾರಿ ಬಾಂಬೆ ಹೈಕೋರ್ಟ್ ಏಪ್ರಿಲ್ 15ರಂದು ವಿಚಾರಣೆ ನಡೆಸಲು ಒಪ್ಪಿಗೆ ಸೂಚಿಸಿದೆ.

BGMI ಎಂಬುದು ಭಾರತೀಯ ಮಾರುಕಟ್ಟೆಗಾಗಿ ಕ್ರಾಫ್ಟನ್ ಅಭಿವೃದ್ಧಿಪಡಿಸಿರುವ PUBG ಮೊಬೈಲ್ ಆವೃತ್ತಿಯಾಗಿದ್ದು, ಭಾರತ ಸರ್ಕಾರದ ಕಠಿಣ ನಿಷೇಧವನ್ನು ತಪ್ಪಿಸಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಹೊಸ FIR ನಲ್ಲಿ ಕ್ರಾಫ್ಟನ್ ತನ್ನ ಬಳಕೆದಾರರ ಡೇಟಾವನ್ನು ಬಹಿರಂಗಪಡಿಸಿ, ಅವುಗಳನ್ನು ಕಡಿಮೆ ಬೆಲೆಗೆ  ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ. 

ಇದು ಸೀಮಾ ಹೈದರ್‌ ಉಲ್ಟಾ ಕೇಸ್‌: ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿ ಭೇಟಿಯಾಗಲು ಪಾಕ್‌ಗೆ ಹೋದ ಭಾರತೀಯ ಮಹಿಳೆ

ದೂರು ಕೊಟ್ಟಿರುವ ಸಂತೋಷ್ ತೋರಣೆ ಇದು ಸ್ಪಷ್ಟವಾಗಿ ಸೇವಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು  ಆರೋಪಿಸಿದ್ದಾರೆ. ಇದರ ವಿರುದ್ಧ ಅವರು ಕೆಲವು ವರ್ಷಗಳಿಂದ ಹೋರಾಡುತ್ತಿದ್ದಾರೆ. ಈ ಬಗ್ಗೆ ಸಾಕ್ಷ್ಯಗಳನ್ನು ನೀಡಿದ ಬಳಿಕ ಜ್ಯುಡಿಷಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ಆಗಸ್ಟ್ 28, 2024 ರಂದು ಪ್ರಕರಣವನ್ನು ತನಿಖೆ ಮಾಡುವಂತೆ ಅಕ್ಲುಜ್ ಪೊಲೀಸರಿಗೆ ನಿರ್ದೇಶನ ನೀಡಿದರು. CrPC ಯ ಸೆಕ್ಷನ್ 156(2) ರ ಅಡಿಯಲ್ಲಿ ಕ್ರಾಫ್ಟನ್ ಇಂಡಿಯಾ ಬಾಂಬೆ ಹೈಕೋರ್ಟ್‌ನಲ್ಲಿ ತನಿಖೆಯನ್ನು ನಿಲ್ಲಿಸುವಂತೆ ಕೋರಿ ಎರಡು ರಿಟ್ ಅರ್ಜಿಗಳನ್ನು ಸಲ್ಲಿಸಿದೆ.

ಈ ಆರೋಪಕ್ಕೆ ಸ್ಪಷ್ಟನೆ ನೀಡಲು ಪ್ರಯತ್ನಿಸಿರುವ ಕ್ರಾಫ್ಟನ್ ಇಂಡಿಯಾ ಪ್ರೈ. ಲಿಮಿಟೆಡ್ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ ಮತ್ತು ಬಿಜಿಎಂಐ ಸಮುದಾಯಕ್ಕೆ ಡೇಟಾ ಸುರಕ್ಷತೆಯು ಅವರ ಆದ್ಯತೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.  ಡೇಟಾ ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ನಾವು ಬದ್ಧರಾಗಿದ್ದೇವೆ.  ಪ್ರಸ್ತುತ  ಈ ವಿಷ್ಯ ಕೋರ್ಟ್‌ನಲ್ಲಿದೆ. ಹೀಗಾಗಿ ಕಾನೂನು ಪ್ರಕ್ರಿಯೆಯು ಮುಕ್ತಾಯಗೊಳ್ಳುವವರೆಗೆ ಕಾಯುವುದು ಉತ್ತಮ ಎಂಬುದು ನಮ್ಮ ಅಭಿಲಾಷೆ. ಅಲ್ಲಿವರೆಗೆ ನಾವು ಯಾವುದೇ ಅಗತ್ಯ ಸ್ಪಷ್ಟೀಕರಣಗಳನ್ನು  ನೀಡುವುದಿಲ್ಲ ಎಂದು ಗೇಮ್ ಡೆವಲಪರ್ ಹೇಳಿದ್ದಾರೆ.

ಇನ್ನು ಡೇಟಾ ಸೋರಿಕೆಯಂತಹ ಅಪರಾಧಗಳಲ್ಲಿ ತೊಡಗಿರುವ ಪ್ರಕರಣದಲ್ಲಿ ಟೆಲಿಗ್ರಾಮ್ ಭಾಗವಾಗುತ್ತಿರುವುದು ಇದೇ ಮೊದಲಲ್ಲ. ಹೆಚ್ಚಿನ ಗಾತ್ರದ ಫೈಲ್ ಹಂಚಿಕೊಳ್ಳಲು, ಪೈರೇಟೆಡ್ ವಿಷಯವನ್ನು ಹಂಚಿಕೊಳ್ಳಲು ಟೆಲಿಗ್ರಾಮ್ ಮುಖ್ಯ ವೇದಿಕೆಯಾಗಿ ಬಳಕೆಯಾಗುತ್ತಿದೆ. ಇದು ಜನರು ಇತರ ಬಳಕೆದಾರರೊಂದಿಗೆ ಚಲನಚಿತ್ರ ಅಥವಾ ವೀಡಿಯೊ ಫೈಲ್‌ಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ಸ್ಥಳೀಯ ನಿಯಮಗಳನ್ನು ಪಾಲಿಸುವ ಬಗ್ಗೆ ಬಿಜಿಎಂಐ ಈಗಾಗಲೇ ಪ್ರಶ್ನೆಗಳನ್ನು ಎದುರಿಸುತ್ತಿದೆ ಮತ್ತು ಈ ರೀತಿಯ ಪ್ರಕರಣಗಳು ಕ್ರಾಫ್ಟನ್ ಅನ್ನು ಅಧಿಕಾರಿಗಳ ಗಮನಕ್ಕೆ ತರುತ್ತವೆ.

ಆರೋಪದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. BGMI ನಿಷೇಧವು ಮುಂದಿನ ದಿನಗಳಲ್ಲಿ ಜಾರಿಗೆ ಬರಲೂ ಬಹುದು, ಇಲ್ಲದಿರಲೂಬಹುದು ಈ ಬಗ್ಗೆ  ಖಚಿತ ಮಾಹಿತಿ ಇಲ್ಲ. BGMI ನ ಭವಿಷ್ಯವು  ನೆತ್ತಿಯ ಮೇಲಿನ ತೂಗುಗತ್ತಿಯಂತಿದೆ. ಆಟಗಾರರು ಏಪ್ರಿಲ್ 15  ನ್ಯಾಯಾಲಯದ ವಿಚಾರಣೆ ಏನಿರಬಹುದು ಎಂದು ಕಾತರದಿಂದ ಕಾಯುತ್ತಿದ್ದಾರೆ. BGMI ಭಾರತದಲ್ಲಿ ಇಸ್ಪೋರ್ಟ್ಸ್ ಕ್ಷೇತ್ರದ ದೊಡ್ಡ ಭಾಗವಾಗಿ ಬೆಳೆದಿದೆ. ಸಂಭಾವ್ಯ BGMI ನಿಷೇಧವು ಭಾರೀ ನಷ್ಟವನ್ನುಂಟು ಮಾಡಬಹುದು ಮತ್ತು ಭಾರತದಲ್ಲಿ ಗೇಮಿಂಗ್ ಉದ್ಯಮಕ್ಕೆ ದೊಡ್ಡ ಹಿನ್ನಡೆಯನ್ನುಂಟು ಮಾಡಬಹುದು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!