
ಊರು ಬಿಟ್ಟು ಊರಿಗೆ ಬಂದ ಮೇಲೆ ಸಮಯ ಹೇಗೆ ಕಳೆಯುವುದು ಎಂಬುದು ಅನೇಕರ ಗೋಳು, ಮತ್ತೆ ಕೆಲವರಿಗೆ ಹೊರಗೆ ಹೋಗಲು ಸ್ನೇಹಿತರಿಲ್ಲ, ಹೊಸ ಸ್ನೇಹಿತರ ಮಾಡಿಕೊಳ್ಳಲು ಇಷ್ಟವಿಲ್ಲ, ಮುಂದೇನೋ ಹೇಗೋ ಎಂಬ ಗೊಂದಲ. ಉಳಿದ ಸಮಯವನ್ನು ಹೇಗೆ ಕಳೆಯುವುದು ಎಂಬ ಗೊಂದಲ ಇದೆಲ್ಲದರ ನಡುವೆ ಉದ್ಯೋಗ ಅರಸಿ ಬಂದ ಹಲವು ಟೆಕ್ಕಿಗಳು ಈಗಾಗಲೇ ಅವರಿಗೆ ಬೇಕಾದಷ್ಟು ವೇತನ ಇದ್ದರು. ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ದುಡಿಯುತ್ತಿದ್ದಾರೆ. ಹಗಲು ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುವ ಇವರು ರಾತ್ರಿಯಾಗುತ್ತಲೇ ಕ್ಯಾಬ್ ಚಾಲಕರಾಗುತ್ತಾರೆ. ಅನೇಕರು ಈಗಾಗಲೇ ತಮಗೆ ಕ್ಯಾಬ್ ಚಾಲಕರಾಗಿ ಟೆಕ್ ಕಂಪನಿಗಳಲ್ಲಿ ಕೆಲಸ ಮಾಡುವವರು ಸಿಕ್ಕಿದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ವಿಚಾರ ಹಂಚಿಕೊಂಡಿದ್ದಾರೆ. ಹಾಗಿದ್ರೆ ಟೆಕ್ಕಿಗಳು ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಿರೋದ್ಯಾಕೆ? ಅವರಿಗೆ ಸಿಗುವ ಸಂಬಳ ಸಾಕಾಗಲ್ವಾ? ಉಳಿದ ಸಮಯ ಮನೆಯಲ್ಲಿ ಒಬ್ಬಂಟಿಯಾಗಿ ಕಳೆಯಲು ಬೋರಾಗುತ್ತಾ? ಹೀಗೆ ರಾತ್ರಿಯ ವೇಳೆ ಕ್ಯಾಬ್ ಚಾಲಕರಾಗಿ ಡಬ್ಬಲ್ ಡಬ್ಬಲ್ ಕೆಲಸ ಮಾಡೋದಕ್ಕೆ ಕಾರಣ ಏನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...
27 ವರ್ಷದ ಅಭಿನವ್ ರವೀಂದ್ರನ್ ಎರಡು ವರ್ಷಗಳ ಹಿಂದೆ ವಿಜಯವಾಡದಿಂದ ಬೆಂಗಳೂರಿಗೆ ಬಂದಿದ್ದರು, ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅವರು ಸಾಫ್ಟ್‌ವೇರ್ ಟೆಸ್ಟರ್ ಆಗಿ ಕೆಲಸ ಮಾಡ್ತಿದ್ರು,. ಸುದ್ದಗುಂಟೆಪಾಳ್ಯದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ರವೀಂದ್ರನ್ ಅವರಿಗೆ ಮನೆಯ ವ್ಯಾಮೋಹ ತುಸು ಹೆಚ್ಚು. ಮನೆಯ ನೆನಪುಗಳ ಜೊತೆ ರೂಮ್‌ನಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುತ್ತಿದ್ದರು ಇದರ ಜೊತೆಗೆ ಒಂದೇ ರೀತಿಯ ಕೆಲಸ ಅವರಿಗೆ ಬೋರು ಹಿಡಿಸಿತ್ತು. ದಿನದ ಸಮಯವನ್ನು ಕಳೆಯುವುದಕ್ಕೆ ಅವರು ಕ್ಯಾಬ್‌ಗಳನ್ನು ಓಡಿಸಲು ಪ್ರಾರಂಭಿಸಿದರು.
ಇಂದು ಅವರು ಎರಡು ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ, ಹಗಲಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ರಾತ್ರಿಯಲ್ಲಿ ಕ್ಯಾಬ್ ಚಾಲಕ. ರವೀಂದ್ರನ್ ಬೆಂಗಳೂರು ಮೂಲದ ಆಟೋರಿಕ್ಷಾ ಮತ್ತು ಕ್ಯಾಬ್ ಅಪ್ಲಿಕೇಶನ್ ನಮ್ಮ ಯಾತ್ರಿಯಲ್ಲಿ ನೋಂದಾಯಿತ ಕ್ಯಾಬ್ ಚಾಲಕರಾಗಿದ್ದಾರೆ. ಅವರು ಪ್ರತಿ ರಾತ್ರಿ ಕ್ಯಾಬ್ ಚಾಲನೆ ಮಾಡುವುದಿಲ್ಲ, ವಾರದಲ್ಲಿ ಒಂದೆರಡು ದಿನ ಮಾತ್ರ ಅವರು ತಮಗೆ ತಿಳಿದ ನಿಗದಿತ ಮಾರ್ಗದಲ್ಲಿ ಕ್ಯಾಬ್ ಚಾಲಕರಾಗಿ ಹೋಗ್ತಾರೆ. ಹೆಚ್ಚಾಗಿ ಬೆಂಗಳೂರಿನಲ್ಲಿ ಅತ್ಯಂತ ಸುಗಮ ಮತ್ತು ಉತ್ತಮ ಸಂಬಳ ನೀಡುವ ವಿಮಾನ ನಿಲ್ದಾಣ ಮಾರ್ಗದಲ್ಲೇ ಅವರು ಕ್ಯಾಬ್ ಚಾಲಕರಾಗಿ ಕೆಲಸ ಮಾಡ್ತಾರೆ.
ಈ ಕೆಲಸ ಮಾಡ್ತಿರುವ ಏಕೈಕ ಟೆಕ್ಕಿ ರವೀಂದ್ರನ್ ಅಲ್ಲ. ಓಲಾ, ಉಬರ್, ರಾಪಿಡೊ ಮತ್ತು ನಮ್ಮ ಯಾತ್ರಿಯಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಉನ್ನತ ಐಟಿ ಕಂಪನಿಗಳ ಟೆಕ್ಕಿಗಳು ಈಗಾಗಲೇ ಕ್ಯಾಬಿ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಒಂಟಿತನ ಮತ್ತು ಏಕತಾನತೆಯನ್ನು ಹೋಗಲಾಡಿಸಲು ಮತ್ತು ಹೆಚ್ಚುವರಿ ಹಣವನ್ನು ಗಳಿಸಲು ಟೆಕ್ಕಿಗಳು ರಾತ್ರಿಯಲ್ಲಿ ಕ್ಯಾಬ್‌ಗಳನ್ನು ಓಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಆಟೋ ಮತ್ತು ಟ್ಯಾಕ್ಸಿ ಫೆಡರೇಶನ್‌ನ ಅಧ್ಯಕ್ಷ ಮತ್ತು ಓಲಾ ಉಬರ್ ಚಾಲಕರು ಮತ್ತು ಮಾಲೀಕರ ಸಂಘದ ಮುಖ್ಯಸ್ಥ ತನ್ವೀರ್ ಪಾಷಾ ಅವರನ್ನು ಮಾತನಾಡಿಸಿದಾಗ ಅವರು, ಬೆಂಗಳೂರಿನಲ್ಲಿ ಕ್ಯಾಬಿಗಳಾಗಿ ಕೆಲಸ ಮಾಡುವ ಟೆಕ್ಕಿಗಳ ಬಗ್ಗೆ ತನಗೆ ತಿಳಿದಿದೆ. ಆದರೆ ವೈಯಕ್ತಿಕವಾಗಿ, ನನಗೆ ಯಾರ ಪರಿಚಯವಿಲ್ಲ ಏಕೆಂದರೆ ಟೆಕ್ಕಿಗಳು ಸಾಮಾನ್ಯವಾಗಿ ಯೂನಿಯನ್‌ನಲ್ಲಿ ನೋಂದಾಯಿಸಿಕೊಳ್ಳುವುದಿಲ್ಲ ಏಕೆಂದರೆ ಅವರಿಗೆ ಅದರ ಬೆಂಬಲದ ಅಗತ್ಯವಿಲ್ಲ. ಅವರಿಗೆ ಈಗಾಗಲೇ ನಿಯಮಗಳ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಕೆಲಸವಿದೆ. ಅವರು ಅದನ್ನು ಸೈಡ್ ಬ್ಯುಸಿನೆಸ್ ಆಗಿ ಮಾಡುತ್ತಾರೆ ಆದ್ದರಿಂದ ಅವರು ಚಾಲಕರಾಗಿ ಉತ್ತಮ ಸೇವೆಯನ್ನು ಒದಗಿಸುತ್ತಿದ್ದರೆ, ನಾವು ಅದನ್ನು ಸ್ವಾಗತಿಸುತ್ತೇವೆ ಎಂದು ಪಾಷಾ ಹೇಳಿದರು.
ಈ ರೀತಿ ಕೇವಲ ಬೆಂಗಳೂರು ನಗರವೊಂದೇ ಅಲ್ಲ. ದೆಹಲಿ ಮತ್ತು ಮುಂಬೈನಲ್ಲಿಯೂ ಕ್ಯಾಬ್ ಚಾಲಕರಾಗಿ ಕಾರ್ಪೊರೇಟ್ ಮತ್ತು ಐಟಿ ಹಿನ್ನೆಲೆಯಿಂದ ಬಂದ ಜನ ಕೆಲಸ ಮಾಡುತ್ತಿದ್ದಾರೆ. ಟೆಕ್ಕಿಗಳು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿರುವ ಬಗ್ಗೆ ಅನೇಕರು ಸೋಶಿಯಲ್ ಮೀಡಿಯಾಗಳಲ್ಲಿ ಈ ಹಿಂದೆ ಪೋಸ್ಟ್ ಮಾಡಿದ್ದು, ಕೂಡ ವೈರಲ್ ಆಗಿತ್ತು. ಒಟ್ಟಿನಲ್ಲಿ ಟೆಕ್ಕಿಗಳು ಸಮಯ ಕಳೆಯುವುದಕ್ಕಾಗಿ ಹೊಸ ಹೊಸ ಜನರ ಪರಿಚಯಕ್ಕಾಗಿ ಹೊಸ ಅನುಭವಕ್ಕಾಗಿ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಒಂದು ಟೀ ಕುಡಿಯಲು ಹೋಗಿ 75 ಲಕ್ಷ ಕಳೆದುಕೊಂಡ ಉದ್ಯಮಿ
ಇದನ್ನೂ ಓದಿ: ಕರ್ನೂಲ್ ಬಸ್ ದುರಂತ: ಆಕೆಗೆ ಬೆಂಗಳೂರಲ್ಲಿ ಕೆಲಸ ಸಿಗಬಾರ್ದಿತ್ತು : ಮಗಳ ಸಾವಿಗೆ ರೋದಿಸಿದ ಅಪ್ಪ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ