
ಬೆಂಗಳೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ಉದ್ಯಮಿಯೊಬ್ಬರು ಮಾರ್ಗಮಧ್ಯೆ ಟೀ ಕುಡಿಯಲು ಇಳಿದಿದ್ದರಿಂದ ಭಾರಿ ಬೆಲೆ ತೆರಬೇಕಾಗಿ ಬಂದಿದೆ. 53 ವರ್ಷದ ಉದ್ಯಮಿ ಮುಬಾರಕ್ ಎಂಬುವವರು ಕೇರಳದ ಇಡಪ್ಪಲ್ ನಿವಾಸಿಯಾಗಿದ್ದು, ಶನಿವಾರ ಮುಂಜಾನೆ ಬೆಂಗಳೂರಿನಿಂದ ಕೇರಳಕ್ಕೆ ಆಗಮಿಸುತ್ತಿದ್ದರು. ಮಾರ್ಗಮಧ್ಯೆ ಮುಂಜಾನೆ 4.30ರ ಸುಮಾರಿಗೆ ಕೇರಳದ ಮನೌತಿ ಎಂಬಲ್ಲಿ ಅವರು ತಮ್ಮ ವಾಹನವನ್ನು ನಿಲ್ಲಿಸಿ ಟೀ ಕುಡಿಯುವುದಕ್ಕೆ ಮುಂದಾಗಿದ್ದಾರೆ. ಈ ವೇಳೆ ಕಳ್ಳರು ಕೈಚಳಕ ತೋರಿಸಿದ್ದು, ಅವರ ಬಳಿ ಇದ್ದ 75 ಲಕ್ಷ ಹಣವಿದ್ದ ಸೂಟ್‌ಕೇಸ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಮುಬಾರಕ್ ಅವರಿಗೆ ಈ ವಿಚಾರ ಅರಿವಾಗುವಷ್ಟರಲ್ಲಿ ಕಳ್ಳರು ಬ್ಯಾಗನ್ನು ಎತ್ತಿಕೊಂಡು ಎಸ್ಕೇಪ್ ಆಗಿದ್ದು, ಇವರು ಹಿಂಬಾಲಿಸಿದರು ಕಳ್ಳರು ಕೈಗೆ ಸಿಗದೇ 75 ಲಕ್ಷ ರೂಪಾಯಿ ಇದ್ದ ಸೂಟ್‌ಕೇಸ್‌ನೊಂದಿಗೆ ಪರಾರಿಯಾಗಿದ್ದಾರೆ.
ಮುಬಾರಕ್ ಅವರು ತಮ್ಮ ಬಳಿ ಇದ್ದ ಹಣದ ಬ್ಯಾಗನ್ನು ಮೆಡಿಕಲ್ ಶಾಪೊಂದರ ಮುಂದೆ ಇರಿಸಿ ಟೀ ಕುಡಿಯಲು ಹೋಗಿದ್ದಾರೆ. ಈ ವೇಳೆ ಅಪರಿಚಿತರರು ಯಾರೋ ಬ್ಯಾಗನ್ನು ಎತ್ತಿಕೊಂಡು ಹೋಗಿದ್ದಾರೆ. ಈ ಅಪರಿಚಿತರು ತೆಗೆದುಕೊಂಡು ಹೋಗುತ್ತಿರುವ ಬ್ಯಾಗ್ ತಮ್ಮದು ಎಂದು ಅರಿವಾಗುವಷ್ಟರಲ್ಲಿ ಕಳ್ಳರು ಅವರ ಬ್ಯಾಗ್ ಎತ್ತಿಕೊಂಡು ಓಡಿದ್ದಾರೆ. ಈ ವೇಳೆ ಅವರು ಕಳ್ಳರನ್ನು ಬೆನ್ನಟ್ಟುವ ಪ್ರಯತ್ನ ಮಾಡಿದರೂ ಅವರಿಂದ ತಮ್ಮ ಹಣವಿದ್ದ ಬ್ಯಾಗನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ಸಾಧ್ಯವಾಗಲಿಲ್ಲ.
ಅಪರಿಚಿತ ಮಾಮೂಲಿ ಸಾಮಾನ್ಯ ವ್ಯಕ್ತಿಯಂತೆ ಸ್ಥಳಕ್ಕೆ ಬಂದು ಮುಬಾರಕ್ ಅವರ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾನೆ. ಮುಬಾರಕ್ ಅವರು ಹಿಂದೆ ಮುಂದೆ ನೋಡುವಷ್ಟರಲ್ಲಿ ಬ್ಯಾಗ್ ಮಾಯವಾಗಿದೆ. ಮುಬಾರಕ್ ಅವರು ಆತಂಕದಿಂದ ಕಳ್ಳನ ಹಿಂದೆ ಓಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ ಕಳ್ಳ ತನ್ನ ಇನ್ನೋವಾ ಕಾರು ಏರಿ ತನ್ನ ಗ್ಯಾಂಗ್‌ನೊಂದಿಗೆ ಪರಾರಿಯಾಗಿದ್ದಾನೆ. ಈ ಘಟನೆಯಲ್ಲಿ ಕಳ್ಳ ಮುಬಾರಕ್ ಅವರನ್ನು ತಳ್ಳಿದ್ದರಿಂದ ಅವರಿಗೆ ಸ್ವಲ್ಪ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕೃತ್ಯವನ್ನು ಗಮನಿಸಿದರೆ ಬಹುಃಶ ಉದ್ಯಮಿಗೆ ತಿಳಿದಿರುವವರೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಕರ್ನೂಲ್ ಬಸ್ ದುರಂತ: ಆಕೆಗೆ ಬೆಂಗಳೂರಲ್ಲಿ ಕೆಲಸ ಸಿಗಬಾರ್ದಿತ್ತು : ಮಗಳ ಸಾವಿಗೆ ರೋದಿಸಿದ ಅಪ್ಪ
ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆಯ ವೇಳೆ ಅನಾಹುತ: ಶಿಕಾರಿಪುರ ಮಾಜಿ ಶಾಸಕನ ತಿವಿದು ಕೆಳಕ್ಕೆ ಬೀಳಿಸಿದ ಹೋರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ