Asianet Suvarna News Asianet Suvarna News

ಮಹಾಲಕ್ಷ್ಮಿ ಭೀಕರ ಹತ್ಯೆ ಪ್ರಕರಣದಲ್ಲಿ ಟ್ವಿಸ್ಟ್, ಶಂಕಿತ ಆರೋಪಿ ಮೃತದೇಹ ಒಡಿಶಾದಲ್ಲಿ ಪತ್ತೆ!

ಬೆಂಗಳೂರಿನಲ್ಲಿ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣದ ತನಿಖೆಯಲ್ಲಿ ಅತೀ ದೊಡ್ಡ ಹಿನ್ನಡೆಯಾಗಿದೆ. ತಲೆಮರೆಸಿಕೊಂಡಿದ್ದ ಶಂಕಿತ ಆರೋಪಿ ಒಡಿಶಾದಲ್ಲಿ ಬದುಕು ಅಂತ್ಯಗೊಳಿಸಿರುವ ಮಾಹಿತಿ ಲಭ್ಯವಾಗಿದೆ. 

Bengaluru mahalakshmi case Suspected accuse body found in Odisha ckm
Author
First Published Sep 25, 2024, 8:59 PM IST | Last Updated Sep 25, 2024, 8:59 PM IST

ಬೆಂಗಳೂರು(ಸೆ.25) ಮಹಾಲಕ್ಷ್ಮಿ ಹತ್ಯೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಶಂಕಿತ ಆರೋಪಿ ಒಡಿಶಾದಲ್ಲಿ ಬದುಕು ಅಂತ್ಯಗೊಳಿಸಿದ್ದಾನೆ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ  ವಾಸವಿದ್ದ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಹತ್ಯೆ ಮಾಡಿ 40 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ ಶಂಕಿತ ಆರೋಪಿ,  ಸಹದ್ಯೋಗಿ ಮುಕ್ತಿ ರಂಜನ್ ರಾಯ್ ಇದೀಗ ಒಡಿಶಾದಲ್ಲಿ ಬದುಕು ಅಂತ್ಯಗೊಳಿಸಿದ್ದಾನೆ. ಬೆಂಗಳೂರಿನ ತನಿಖಾ ತಂಡ ಇದೀಗ ಒಡಿಶಾಗೆ ಪ್ರಯಾಣ ಬೆಳೆಸಿದೆ.

ಮಹಾಲಕ್ಷ್ಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹತ್ಯೆ ಹಿಂದಿನ ಆರೋಪಿ ಒಡಿಶಾ ಮೂಲದ ಮುಕ್ತಿ ರಂಜನ್ ರಾಯ್ ಅನ್ನೋದು ಪತ್ತೆ ಹಚ್ಚಿದ್ದರು. ಮಹಾಲಕ್ಷ್ಮಿಯ ಸಹೋದ್ಯೋಗಿಯಾಗಿದ್ದ ಮುಕ್ತಿ ರಂಜನ್ ರಾಯ್ ಬರ್ಬರವಾಗಿ ಹತ್ಯೆ ಮಾಡಿ ದೇಹವನ್ನು 40 ತುಂಡುಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ. ಈ ಕುರಿತು ಕೆಲ ಸಾಕ್ಷ್ಯಗಳು ಪೊಲೀಸರಿಗೆ ಲಭ್ಯವಾಗಿತ್ತು. ಈತನ ಹುಡುಕಾಟ ಆರಂಭಿಸಿದ ಪೊಲೀಸರು ಪಶ್ಚಿಮ ಬಂಗಾಳಕ್ಕೂ ತೆರಳಿ ಹುಡಕಾಟ ನಡೆಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿ ಮುಕ್ತಿ ರಂಜನ್ ಬದುಕುಅಂತ್ಯಗೊಳಿಸಿದ್ದಾನೆ. ಈ ಮೂಲಕ ಈ ಪ್ರಕರಣದ ಪ್ರಮುಖ ಆರೋಪಿ ಹಾಗೂ ಸಾಕ್ಷ್ಯವೊಂದು ನಾಶವಾಗಿದೆ.

ಬೆಂಗಳೂರು ವೈಯಾಲಿಕಾವಲ್ ನೇಪಾಳಿ ಕನ್ನಡತಿ ಮಹಾಲಕ್ಷ್ಮಿ ಕೊಲೆ ಆರೋಪಿ ಇವನೇ ನೋಡಿ..!

ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮುಕ್ತಿ ರಂಜನ್ ರಾಯ್, ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ಮಹಾಲಕ್ಷ್ಮಿಯನ್ನು ಪ್ರೀತಿಸುತ್ತಿದ್ದ. ಇದಕ್ಕಿದ್ದಂತೆ ಮಹಾಲಕ್ಷ್ಮಿ ಕೊಲೆಯಾಗಿದ್ದಳು. ಇತ್ತ ಹೆಬ್ಬಗೋಡಿಯಲ್ಲಿ ತಮ್ಮನ ಜೊತೆ ವಾಸವಿದ್ದ ಮುಕ್ತಿ ರಂಜನ್ ಪರಾರಿಯಾಗಿದ್ದ. ಹೀಗಾಗಿ ಪೊಲೀಸರು ಈತನ ಹುಡುಕಾಟದಲ್ಲಿರುವಾಗಲೇ ಪ್ರಕರಣ ತಿರುುವು ಪಡೆದುಕೊಂಡಿದೆ.

ಮಹಾಲಕ್ಷ್ಮಿ ಹತ್ಯೆ ಮಾಡಿ ಪರಾರಿಯಾಗಿದ್ದ ಮುಕ್ತಿ ರಂಜನ್ ಫೋನ್ ಕೂಡ ಬಳಸುತ್ತಿರಲಿಲ್ಲ. ಹೀಗಾಗಿ ಈತನ ಪತ್ತೆ ಹಚ್ಚುವುದು ಪೊಲೀಸರಿಗೆ ತಲೆನೋವಾಗಿತ್ತು. ಈತನ ಒಡಿಶಾದ ವಿಳಾಸದಲ್ಲಿ ಹುಡುಕಾಟ ನಡೆಸಲಾಗಿತ್ತು. ಈ ವೇಳೆ ಈತ ತವರಿಗೆ ತೆರಳದೆ ಪಶ್ಚಿಮ ಬಂಗಾಳ ತೆರಳಿರುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ತನಿಖಾ ತಂಡ ಪಶ್ಚಿಮ ಬಂಗಾಳಕ್ಕೂ ತೆರಳಿತ್ತು. 

ಇದರ ನಡುವೆ ಪಶ್ಚಿಮ ಬಂಗಾಳದಿಂದ ಈತ ಒಡಿಶಾಗೆ ತೆರಳಿದ್ದ ಅನ್ನೋ ಅನಧಿಕೃತ ಮಾಹಿತಿಗಳು ಲಭ್ಯವಾಗಿತ್ತು. ಈ ಕುರಿತು ತನಿಖಾ ತಂಡ ತೀವ್ರ ವಿಚಾರಣೆ ಕೈಗೊಂಡಿತ್ತು. ಈ ವಿಚಾರಣೆ ನಡುವೆ ಶಂಕಿತ ಆರೋಪಿ ಮೃತದೇಹ ಪತ್ತೆಯಾಗಿದೆ. ತಾನು ಜೈಲು ಸೇರುವುದು ಪಕ್ಕಾ ಎಂದು ಖಚಿತವಾಗುತ್ತಿದ್ದಂತೆ ಬೇರೆ ದಾರಿ ಕಾಣದೆ ಬದುಕು ಅಂತ್ಯಗೊಳಿಸಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

ನಿಗೂಢವಾಗೇ ಉಳಿದ ಮಹಾಲಕ್ಷ್ಮಿ ಮರ್ಡರ್​​ ಕೇಸ್​​! ಹಂತಕ ಪೊಲೀಸರನ್ನ ಹೇಗೆಲ್ಲಾ ದಿಕ್ಕು ತಪ್ಪಿಸಿದ್ದ ಗೊತ್ತಾ?
 

Latest Videos
Follow Us:
Download App:
  • android
  • ios