ಭಾರತ - ಪಾಕ್‌ ಗಡಿಯಲ್ಲಿ ಬೆಂಗ್ಳೂರು ಗಣಪಗೆ ಪೂಜೆ

Kannadaprabha News   | Kannada Prabha
Published : Sep 01, 2025, 05:48 AM IST
Vastu tips for Ganesha idol placement

ಸಾರಾಂಶ

ಜಮ್ಮು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ತೀತ್ವಾಲ್‌ನಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ್ದ ಮಣ್ಣಿನ ಗಣಪತಿ ಇರಿಸಿ ವಿಜೃಂಭಣೆಯ ಗಣೇಶೋತ್ಸವನ್ನು ಶಾಂತಿಯುತವಾಗಿ ಆಚರಿಸಲಾಯಿತು.

ಜಮ್ಮು: ಜಮ್ಮು ಕಾಶ್ಮೀರದಲ್ಲಿ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ತೀತ್ವಾಲ್‌ನಲ್ಲಿ ಬೆಂಗಳೂರಿನಲ್ಲಿ ತಯಾರಿಸಿದ್ದ ಮಣ್ಣಿನ ಗಣಪತಿ ಇರಿಸಿ ವಿಜೃಂಭಣೆಯ ಗಣೇಶೋತ್ಸವನ್ನು ಶಾಂತಿಯುತವಾಗಿ ಆಚರಿಸಲಾಯಿತು.

ಬೆಂಗಳೂರಿನ ಶೃಂಗೇರಿ ಶಂಕರಮಠದಿಂದ ಒಯ್ದಿದ್ದ ಗಣಪತಿ ಮಣ್ಣಿನ ವಿಗ್ರಹವನ್ನು ಕುಪ್ವಾರಾ ಜಿಲ್ಲೆಯ ತೀತ್ವಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಆಪರೇಷನ್‌ ಸಿಂದೂರದ ಮಾದರಿಯಲ್ಲಿದ್ದ ಗಣೇಶನನ್ನು ಗ್ರಾಮದಲ್ಲಿ ನಿರ್ಮಿಸಿದ್ದ ಶೃಂಗೇರಿ ಮಠದ ಶಾರದಾ ಮಂದಿರದಲ್ಲಿ ಪ್ರತಿಷ್ಠಾಪಿಸಿ ವೇದ, ಮಂತ್ರ ಘೋಷಗಳ ನಡುವೆ ಪೂಜಾಕೈಂಕರ್ಯ ನೆರವೇರಿಸಲಾಯಿತು.

ಬಳಿಕ ಸ್ವತಃ ಕುಪ್ವಾರಾ ಜಿಲ್ಲಾಧಿಕಾರ ಶ್ರೀಕಾಂತ್‌ ಬಾಳಾ ಸಾಹೇಬ್‌ ಸೂಸೆ ಅವರು ಗಣಪತಿಯ ವಿಗ್ರಹವನ್ನು ತಲೆ ಮೇಲೆ ಹೊತ್ತು ಮೆರವಣಿಗೆ ಮಾಡಿದರು. ಈ ವೇಳೆ ಸೇನೆಯ ಅಧಿಕಾರಿಗಳು ಸಹ ಸಾಥ್‌ ನೀಡಿದರು. ಭಾರತ ಪಾಕಿಸ್ತಾನದ ನಡುವೆ ಸಂಪರ್ಕಕ್ಕೆ ಇರುವ ಕ್ರಾಸಿಂಗ್ ಬ್ರಿಡ್ಜ್ ಮೇಲೆ ಮೆರವಣಿಗೆ ತೆರಳಿ ಶಾಂತಿ ಮಂತ್ರ ಪಠಣದ ನಂತರ ‘ಜೈ ಹಿಂದ್, ಭಾರತ ಮಾತಾ ಜೈ, ಗಣಪತಿ ಬಪ್ಪ ಮೋರಿಯ, ಜೈ ಗಣೇಶ ಘೋಷಣೆಗಳ ನಡುವೆ ಕಿಶನ್ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು