ಭಾರತದ ‘ಎಜುಕೇಟ್ ಗರ್ಲ್ಸ್‌’ ಸಂಸ್ಥೆಗೆ ರಾಮನ್ ಮ್ಯಾಗ್ಸಸೇ ಪ್ರಶಸ್ತಿ

Kannadaprabha News   | Kannada Prabha
Published : Sep 01, 2025, 05:14 AM IST
educate girls ngo wins 2025 ramon magsaysay award

ಸಾರಾಂಶ

ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೇ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂಲಕ ಈ ಪುರಸ್ಕಾರ ಪಡೆದ ದೇಶದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡಿದೆ.

ಮುಂಬೈ : ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ‘ಎಜುಕೇಟ್‌ ಗರ್ಲ್ಸ್‌’ ಸಂಸ್ಥೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ರಾಮನ್ ಮ್ಯಾಗ್ಸಸೇ ಪ್ರಶಸ್ತಿಗೆ ಭಾಜನವಾಗಿದೆ. ಈ ಮೂಲಕ ಈ ಪುರಸ್ಕಾರ ಪಡೆದ ದೇಶದ ಮೊದಲ ಸಂಸ್ಥೆ ಎನ್ನುವ ಹೆಗ್ಗಳಿಕೆ ಗಳಿಸಿಕೊಂಡಿದೆ.

ಏಷ್ಯಾದ ನೊಬೆಲ್ ಎಂದು ಕರೆಯಲ್ಪಡುವ ಈ ಪುರಸ್ಕಾರವನ್ನು ನಿಸ್ವಾರ್ಥ ಸೇವೆ ಮಾಡಿದವರನ್ನು ಗುರುತಿಸಿ ನೀಡಲಾಗುತ್ತದೆ. ಫಿಲಿಪ್ಪೀನ್ಸ್‌ ಮೂಲದ ರಾಮನ್ ಮ್ಯಾಗ್ಸಸೇ ಅವಾರ್ಡ್‌ ಫೌಂಡೇಶನ್‌ ಈ ಪ್ರಶಸ್ತಿ ನೀಡುತ್ತದೆ.

ಎಜುಕೇಟ್‌ ಗರ್ಲ್ಸ್‌ ಸಂಸ್ಥೆ, ಹೆಣ್ಣು ಮಕ್ಕಳು ಶಿಕ್ಷಣದ ಮೂಲಕ ಸಾಮಾಜಿಕ ತಾರತಮ್ಯವನ್ನು ಹೊಗಲಾಡಿಸಲು ಸಾಧ್ಯ ಎನ್ನುವ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಈ ಸಂಸ್ಥೆ ಜೊತೆಗೆ ಮಾಲ್ಡೀವ್ಸ್‌ನ ಶಾಹಿನಾ ಅಲಿ ಮತ್ತು ಫಿಲಿಪ್ಪೀನ್ಸ್‌ನ ಫ್ಲೇವಿಯಾನೊ ಆಂಟೋನಿಯೊ ಎಲ್‌ ವಿಲ್ಲಾನುಯೆವಾ ಕೂಡಾ ಈ ವರ್ಷದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

30000 ಹಳ್ಳಿಗಳಲ್ಲಿ ಶಿಕ್ಷಣದ ಸೇವೆ

2007ರಲ್ಲಿ ಆರಂಭವಾದ ಎಜುಕೇಟ್ ಗರ್ಲ್ಸ್‌ ಸಫೀನಾ ಹುಸೈನ್‌ರ ಕನಸು. ರಾಜಸ್ಥಾನದಲ್ಲಿ ಆರಂಭವಾದ ಸಂಸ್ಥೆ, ಶಿಕ್ಷಣ ಅಗತ್ಯವಿರುವ ಸಮುದಾಯಗಳನ್ನು ಗುರುತಿಸಿ, ಅದರಲ್ಲಿ ಶಿಕ್ಷಣದಿಂದ ಹೊರಗುಳಿದ ಬಾಲಕಿಯರಿಗೆ ಶಿಕ್ಷಣ ನೀಡಲು ನೆರವಾಗಿದೆ. 50 ಗ್ರಾಮದಲ್ಲಿ ಆರಂಭವಾಗಿ ಇಂದು 30 ಸಾವಿರಕ್ಕೂ ಹೆಚ್ಚು ಹಳ್ಳಿ ತಲುಪಿದೆ. 20 ಲಕ್ಷಕ್ಕೂ ಹೆಚ್ಚು ಬಾಲಕಿಯರು ಇದರ ಪ್ರಯೋಜನ ಪಡೆದಿದ್ದಾರೆ. ಸದ್ಯ ಈ ಸಂಸ್ಥೆ ರಾಜಸ್ಥಾನದ ಮಾತ್ರವಲ್ಲದೇ ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾಗೂ ತನ್ನ ವ್ಯಾಪ್ತಿ ವಿಸ್ತರಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ
ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ