5 ವರ್ಷಗಳಿಂದ ಮಲಗಿದಲ್ಲಿಯೇ ಇದ್ದ, ಕೋವಿಶೀಲ್ಡ್‌ ಹಾಕಿಸಿಕೊಂಡ ಬಳಿಕ ಎದ್ದು ಓಡಾಡುವಂತಾದ...!

By Suvarna News  |  First Published Jan 14, 2022, 3:34 PM IST
  • ಕೋವಿಶೀಲ್ಡ್‌ನಿಂದ ಆಯ್ತಾ ಚಮತ್ಕಾರ
  • ಕೋವಿಶೀಲ್ಡ್‌ ಹಾಕಿಸಿಕೊಂಡ ಬಳಿಕ ಎದ್ದು ಓಡಾಡುವಂತಾದ ವ್ಯಕ್ತಿ
  • ಅಪಘಾತದಿಂದಾಗಿ ಹಾಸಿಗೆ ಹಿಡಿದಿದ್ದ ವ್ಯಕ್ತಿ

ನವದೆಹಲಿ: ಆರೋಗ್ಯವಿಲ್ಲದೇ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಯೊಬ್ಬರು ಕೋವಿಶೀಲ್ಡ್‌  ಲಸಿಕೆ ಹಾಕಿಸಿಕೊಂಡ ಬಳಿಕ ಮಾತಾಡುವ ಜೊತೆಗೆ ಎದ್ದು ಓಡಾಡುವಂತಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಜಾರ್ಖಂಡ್‌ನ 55 ವರ್ಷದ ವ್ಯಕ್ತಿ ಐದು ವರ್ಷಗಳ ಹಿಂದೆ  ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದರು. ಆದರೆ ಕೋವಿಶೀಲ್ಡ್‌ ಮೊದಲ ಡೋಸ್‌ ಹಾಕಿಸಿಕೊಂಡ ಬಳಿಕ ಅವರು ಎದ್ದು ಓಡಾಡುವಂತಾಗಿದ್ದು ಜೊತೆಗೆ ಮಾತನಾಡುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಈ ಪವಾಡವೆನಿಸುವ ಚೇತರಿಕೆಯಿಂದ ವೈದ್ಯರು ಅಚ್ಚರಿಗೊಳಗಾಗಿದ್ದಾರೆ. ಈ ಹಿನ್ನೆಲೆ ಈ ವಿಚಾರದ ಬಗ್ಗೆ ತನಿಖೆ ಮಾಡಲು ಸರ್ಕಾರವು ಮೂರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಿದೆ ಎಂದು ಅವರು ಹೇಳಿದರು. 

ಬೊಕಾರೊ ಜಿಲ್ಲೆಯ ( Bokaro district) ಪೀಟರ್‌ವಾರ್ ಬ್ಲಾಕ್‌ನ (Peterwar block) ಉತ್ತಸರಾ (Uttasara) ಪಂಚಾಯತ್ ವ್ಯಾಪ್ತಿಯ ಸಲ್ಗಾಡಿಹ್ (Salgadih) ಗ್ರಾಮದ ನಿವಾಸಿ ದುಲರ್‌ಚಂದ್ ಮುಂಡಾ ಐದು ವರ್ಷಗಳ ಹಿಂದೆ ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದರು ಮತ್ತು ಅವರಿಗೆ ನಡೆಯಲು ಮತ್ತು ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 

Tap to resize

Latest Videos

ಕೋವಿ​ಶೀಲ್ಡ್‌ ಪಡೆ​ದ​ವ​ರಿ​ಗೆ ಅನೇಕ ದೇಶ​ಗಳ ಕೆಂಪು​ಹಾ​ಸಿನ ಸ್ವಾಗ​ತ!

ಕೋವಿಡ್‌ ಲಸಿಕೆ ಅಭಿಯಾನದಡಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಜನವರಿ 4 ರಂದು ಅವರ ಮನೆಯಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಮುಂಡಾಗೆ ನೀಡಿದರು. ಮರುದಿನ, ಮುಂಡಾ ಅವರ ನಿಶ್ಚಲವಾಗಿದ್ದ ದೇಹದಲ್ಲಿ ಚಟುವಟಿಕೆಯ ಜೊತೆ ಅವರು ಮಾತನಾಡಲು ಆರಂಭಿಸಿದ್ದನ್ನು ನೋಡಿದ ಕುಟುಂಬ ಸದಸ್ಯರು ಅಚ್ಚರಿಗೊಳಗಾಗಿದ್ದರು ಎಂದು ಪೀಟರ್‌ವಾರ್ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಡಾ ಅಲ್ಬೆಲಾ ಕೆರ್ಕೆಟ್ಟಾ (Albela Kerketta) ಹೇಳಿದರು.

ಬೊಕಾರೊದ ಸಿವಿಲ್ ಸರ್ಜನ್ ಡಾ ಜಿತೇಂದ್ರ ಕುಮಾರ್ (Jitendra Kumar) ಅವರು  ಈ ಪವಾಡ ಸದೃಶ ಚೇತರಿಕೆಯನ್ನು ಪರೀಕ್ಷಿಸಲು ಮೂರು ಸದಸ್ಯರ ವೈದ್ಯಕೀಯ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು. ಅಪಘಾತದಿಂದಾಗಿ ಬೆನ್ನುಮೂಳೆಗೆ ಹೊಡೆತ ಬಿದ್ದ ಪರಿಣಾಮ ಮುಂಡಾ ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದರು ಎಂದು ವೈದ್ಯರು ಹೇಳಿದ್ದಾರೆ.

ಕೋವಿಶೀಲ್ಡ್‌ನ ಮೊದಲ ಡೋಸ್‌ ಸ್ವೀಕರಿಸಿದ ನಂತರ, ಅವರು ಎದ್ದು ನಡೆಯಲು ಪ್ರಾರಂಭಿಸಿದರು ಮಾತ್ರವಲ್ಲದೆ ಮಾತನಾಡಬಲ್ಲರು, ಇದು ಅವರ ಕುಟುಂಬವನ್ನು ಬೆರಗುಗೊಳಿಸುತ್ತಿದೆ . ನಾವು ಅವರ ಬಗೆಗಿನ ವರದಿಗಳನ್ನು ನೋಡಿದ್ದೇವೆ. ಇದು ತನಿಖೆಯ ವಿಷಯವಾಗಿದೆ ಎಂದು ಡಾ ಕೆರ್ಕೆಟ್ಟಾ ಹೇಳಿದರು.

ZyCoV-D vaccine| ಮಕ್ಕಳಿಗೆ ನೀಡುವ ಲಸಿಕೆ ದರ ಡೋಸ್‌ಗೆ 358 ರು.!

ತಮ್ಮ ಕುಟುಂಬದ ಆಧಾರಸ್ತಂಭವಾಗಿದ್ದ ಮುಂಡಾ ರಸ್ತೆ ಅಪಘಾತವೊಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. 'ಇದೊಂದು ಅಚ್ಚರಿಯ ಘಟನೆ. ನಾವು ಅವರ ವೈದ್ಯಕೀಯ ಇತಿಹಾಸವನ್ನು ವಿಶ್ಲೇಷಿಸುತ್ತೇವೆ' ಎಂದು ಸಿವಿಲ್ ಸರ್ಜನ್ ಡಾ. ಕುಮಾರ್ ಹೇಳಿದರು. ಆದರೆ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಸಲ್ಗಾಡಿಹ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗ್ರಾಮಸ್ಥರು ಇದನ್ನು ದೈವಿಕ ಶಕ್ತಿಯ ಪ್ರಭಾವ ಎಂದು ಕರೆದಿದ್ದಾರೆ. 

click me!