ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯ ಇಂದು ತೀರ್ಪು ನೀಡಿದೆ.
ತಿರುವನಂತಪುರಂ(ಜ.14): ಕೇರಳದ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯ ಇಂದು ತೀರ್ಪು ನೀಡಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಿ.ಗೋಪಕುಮಾರ್ ಅವರನೇತೃತ್ವದಲ್ಲಿ ವಿಚಾರಣೆ ನಡೆದಿತ್ತು.
2018ರ ಜೂನ್ 28ರಂದು ಸನ್ಯಾಸಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಜಲಂಧರ್‌ನ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ ಆರೋಪಿಯಾಗಿದ್ದರು. 83 ಸಾಕ್ಷಿಗಳು ಮತ್ತು 30 ಕ್ಕೂ ಹೆಚ್ಚು ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಸಲಾಯಿತು. ಆರೋಪಿ ಮಾಜಿ ಬಿಷಪ್ ಫ್ರಾಂಕೋ ಮುಳಕ್ಕಲ್ ಅವರನ್ನು ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು. ಈ ಪ್ರಕರಣದಲ್ಲಿ ಚಾರ್ಜ್ ಶೀಟ್ ಅನ್ನು ಏಪ್ರಿಲ್ 2019 ರಂದು ಸಲ್ಲಿಸಲಾಯಿತು. ಆದರೆ, 40 ದಿನಗಳ ನಂತರ ಜಾಮೀನು ಸಿಕ್ಕಿತ್ತು. ಈ ಮಹತ್ವದ ಪ್ರಕರಣದ ವಿಚಾರಣೆ ವೇಳೆ ಶುಕ್ರವಾರ ಕೊಟ್ಟಾಯಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಬಿಷಪ್ ತನ್ನ ವಿರುದ್ಧದ ಆರೋಪಗಳೆಲ್ಲವೂ ಸುಳ್ಳು ಎಂದಿದ್ದರು.
Save our Sister forum ಜಂಟಿ ಸಂಚಾಲಕ ಶೈಜು ಆಂಟೋನಿ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದು ನಂಬಲು ಸಾಧ್ಯವಾಗದ ವಿಚಾರ. ಆದರೆ ನಾವಿಲ್ಲಿಗೇ ನಿಲ್ಲುವುದಿಲ್ಲ, ಫ್ರಾಂಕೋಗೆ ಶಿಕ್ಷೆ ಕೊಡಿಸಲು ಶೇ. 100ರಷ್ಟು ಶ್ರಮ ಹಾಕುತ್ತೇವೆ. ನಾವು ಯಾವುದೇ ಕಾನೂನು ಸಾಧ್ಯತೆಯನ್ನು ಬಿಡುವುದಿಲ್ಲ. ಮುಂದೆಯೂ ಹೋರಾಡುತ್ತೇವೆ ಎಂದಿದ್ದಾರೆ.
2 ವರ್ಷಗಳಲ್ಲಿ 14 ಬಾರಿ ಅತ್ಯಾಚಾರ
ಕೇರಳದ ಸನ್ಯಾಸಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಲಂಧರ್ ಡಯಾಸಿಸ್ ಮಾಜಿ ಪಾದ್ರಿ ಫ್ರಾಂಕೋ ಮುಲ್ಲಾಕಲ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತ್ತು. ತಂಡವು 80 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ 83 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಜೂನ್ 2018 ರಲ್ಲಿ, ಸನ್ಯಾಸಿನಿಯೊಬ್ಬರು ರೋಮನ್ ಕ್ಯಾಥೋಲಿಕ್ ಧರ್ಮದ ಜಲಂಧರ್ ಡಯಾಸಿಸ್ನ ಆಗಿನ ಪಾದ್ರಿ ಫ್ರಾಂಕೋ ಮುಲಕ್ಕಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು. ಆರೋಪಪಟ್ಟಿಯಲ್ಲಿ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿ, ಮೂವರು ಬಿಷಪ್‌ಗಳು, 11 ಪಾದ್ರಿಗಳು ಮತ್ತು 22 ಸನ್ಯಾಸಿನಿಯರನ್ನು ಹೆಸರಿಸಲಾಗಿದೆ. ಎಫ್‌ಐಆರ್ ರದ್ದುಗೊಳಿಸುವಂತೆ ಫ್ರಾಂಕೋ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು, ಆದರೆ ಎರಡೂ ನ್ಯಾಯಾಲಯಗಳು ನಿರಾಕರಿಸಿದವು.
ಪ್ರಕರಣದ ಹಿನ್ನೆಲೆ: 2 ವರ್ಷ 14 ಬಾರಿ ಅತ್ಯಾಚಾರ
ಕೇರಳದ ಸನ್ಯಾಸಿನಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜಲಂಧರ್ ಧರ್ಮ ಪ್ರಾಂತ್ಯದ ಮಾಜಿ ಪಾದ್ರಿ ಫ್ರಾಂಕೋ ಮುಲ್ಲಾಕಲ್ ವಿರುದ್ಧ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತ್ತು. ತಂಡವು 80 ಪುಟಗಳ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಇದರಲ್ಲಿ 83 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರೊಂದಿಗೆ ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಸಾಕ್ಷ್ಯವಾಗಿ ಸಲ್ಲಿಸಲಾಗಿದೆ. ಜೂನ್ 2018 ರಲ್ಲಿ, ಸನ್ಯಾಸಿನಿಯೊಬ್ಬರು ರೋಮನ್ ಕ್ಯಾಥೋಲಿಕ್ ಧರ್ಮದ ಜಲಂಧರ್ ಡಯಾಸಿಸ್ನ ಆಗಿನ ಪಾದ್ರಿ ಫ್ರಾಂಕೋ ಮುಲಕ್ಕಲ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದರು. ಆರೋಪಪಟ್ಟಿಯಲ್ಲಿ ಸಿರೋ-ಮಲಬಾರ್ ಕ್ಯಾಥೋಲಿಕ್ ಚರ್ಚ್‌ನ ಕಾರ್ಡಿನಲ್ ಮಾರ್ ಜಾರ್ಜ್ ಅಲೆಂಚೇರಿ, ಮೂವರು ಬಿಷಪ್‌ಗಳು, 11 ಪಾದ್ರಿಗಳು ಮತ್ತು 22 ಸನ್ಯಾಸಿನಿಯರನ್ನು ಹೆಸರಿಸಲಾಗಿದೆ. ಎಫ್‌ಐಆರ್ ರದ್ದುಗೊಳಿಸುವಂತೆ ಫ್ರಾಂಕೋ ಕೇರಳ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು, ಆದರೆ ಎರಡೂ ನ್ಯಾಯಾಲಯಗಳು ನಿರಾಕರಿಸಿದ್ದವು.
ಹಿಮಾಚಲ ಪ್ರದೇಶದ ಅತಿಥಿ ಗೃಹದಲ್ಲಿ ಮೊದಲ ಅತ್ಯಾಚಾರ
2014ರಲ್ಲಿ ಹಿಮಾಚಲ ಪ್ರದೇಶದ ಅತಿಥಿ ಗೃಹದಲ್ಲಿ ಫ್ರಾಂಕೋ ತನ್ನ ಮೇಲೆ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದರು. ಆರೋಪಿ 2 ವರ್ಷಗಳಲ್ಲಿ 14 ಬಾರಿ ಅತ್ಯಾಚಾರವೆಸಗಿದ್ದಾರೆ. ಆದರೆ, 3 ವರ್ಷಗಳ ಹಿಂದೆ ಸಂತ್ರಸ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದಾದ ನಂತರ ವಿಷಯ ಮತ್ತಷ್ಟು ಗಂಭೀರತೆ ಪಡೆದಿತ್ತು.
ಚಾಟ್ ಮತ್ತು ವೀಡಿಯೋ ಕರೆ
ಆರೋಪಿಯಿಂದ ಸನ್ಯಾಸಿನಿ ತುಂಬಾ ಹೆದರಿದ್ದಳು. ಬಿಷಪ್ ಎರಡು ವರ್ಷಗಳ ಕಾಲ ಅಂದರೆ 2015 ರಿಂದ 2017 ರವರೆಗೆ ಚಾಟ್ ಮತ್ತು ವೀಡಿಯೊ ಕರೆ ಮಾಡುತ್ತಿದ್ದರು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಅವರು ಬಿಷಪ್‌ಗೆ ಹೆದರುತ್ತಿದ್ದರು, ಆದ್ದರಿಂದ ಅವರು ಮೌನವಾಗಿದ್ದರು. ಸೆಪ್ಟೆಂಬರ್ 2018 ರಲ್ಲಿ, ಸನ್ಯಾಸಿನಿಯು ತನ್ನ ಸಾಕ್ಷ್ಯದಲ್ಲಿ 2017 ರಲ್ಲಿ ಬಿಷಪ್ ಕಾನ್ವೆಂಟ್ ಸುತ್ತಲೂ ಚಲಿಸುವಾಗ ಒಳಗೆ ಇದ್ದರು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಬಿಷಪ್ ಅವರನ್ನು ತಬ್ಬಿ ಮುತ್ತಿಟ್ಟಿದ್ದರು.