Latest Videos

ಕಚೇರಿಗೆ ತಡವಾದರೆ 200 ರೂ ದಂಡ, ಹೊಸ ನಿಯಮ ಜಾರಿಗೊಳಿಸಿದ ಸಂಸ್ಥಾಪಕನಿಗೆ 1,000 ರೂ ಫೈನ್!

By Chethan KumarFirst Published Jun 21, 2024, 10:47 AM IST
Highlights

ಖಾಸಗಿ ಕಂಪನಿ ಸಂಸ್ಥಾಪಕ ತನ್ನ ಕಂಪನಿಯ ನೌಕರರ ತಕ್ಕ ಸಮಯಕ್ಕೆ ಕಚೇರಿಗೆ ಹಾಜರಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಠಿಣ ನಿಯಮ ಜಾರಿಗೊಳಿಸಿದ್ದಾರೆ. ತಡವಾದರೆ 200 ರೂಪಾಯಿ ದಂಡ. ಆದರೆ 5 ಬಾರಿ ಕಚೇರಿಗೆ ತಡವಾಗಿ ಬಂದ ಸಂಸ್ಥಾಪಕನೇ 1,000 ರೂಪಾಯಿ ದಂಡ ಪಾವತಿಸಿದ್ದಾರೆ.
 

ಮುಂಬೈ(ಜೂ.21) ಉತ್ಪಾದಕ ಕಂಪನಿಗಳಲ್ಲಿ ನೌಕರರು ಸ್ವಲ್ಪ ತಡವಾದರೂ ಉತ್ಪಾದನೆ ಪ್ರಮಾಣ ಕಡಿಮೆಯಾಗುತ್ತದೆ. ಇದಕ್ಕಾಗಿ ನೌಕರರು ತಕ್ಕ ಸಮಯಕ್ಕೆ ಹಾಜರಾಗುವಂತೆ ಸೂಚಿಸಲಾಗುತ್ತದೆ. ತಡವಾದರೆ ಹಾಫ್ ಡೇ ಸ್ಯಾಲರಿ ಕಟ್ ಸೇರಿದಂತೆ ಹಲವು ಕಠಿಣ ನಿಯಮಗಳು ಹಲವು ಕಂಪನಿಗಳಲ್ಲಿದೆ. ಹೀಗೆ ಮುಂಬೈನ ಬ್ಯೂಟಿ ಬ್ರ್ಯಾಂಡ್ ಎವರ್ ಕಂಪನಿ ಸಂಸ್ಥಾಪಕ ಕೌಶಾಲ್ ಶಾ, ಕಚೇರಿಗೆ ತಡವಾಗಿ ಬಂದರೆ 200 ರೂಪಾಯಿ ದಂಡ ನಿಯಮ ಜಾರಿಗೊಳಿಸಿದ್ದಾರೆ. ಆದರೆ 5 ಬಾರಿ ಸಂಸ್ಥಾಪಕ ಕೌಶಾಲ್ ಶಾ ತಡವಾಗಿ ಕಚೇರಿಗೆ ಆಗಮಿಸಿ ಇದೀಗ 1,000 ರೂಪಾಯಿ ದಂಡ ಪಾವತಿಸಿದ್ದಾರೆ.

ತಾವೇ ನಿಯಮ ಜಾರಿಗೊಳಿಸಿ ಕೊನೆಗ ತಾವೇ ದಂಡ ಪಾವತಿಸಿದ ಕೌಶಾಲ್ ಶಾ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ಎವರ್ ಬ್ಯೂಟಿ ಕಂಪನಿಯಲ್ಲಿ ನೌಕರರು 10 ರಿಂದ 11 ಗಂಟೆಗೆ ಆಗಮಿಸುತ್ತಿದ್ದರು. ಬಳಿಕ ಒಂದಷ್ಟು ಕೆಲಸ ನಡುವಿನ ಬ್ರೇಕ್ ಹೀಗೆ ಉತ್ಪಾದಕತೆ ದಿನದಿಂದ ದಿನಕ್ಕೆ ಕುಂಠಿಟವಾಗಿತ್ತು. ಇತರ ಕಂಪನಿಗಳಿಗೆ ಹೋಲಿಸಿದರೆ ಉತ್ಪಾದಕ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿತ್ತು. 

'ಫೇಕ್‌ ವರ್ಕ್‌' ಮಾಡ್ತಿದ್ದ ಆಲಸಿ ಉದ್ಯೋಗಿಗಳ ವಿರುದ್ಧ ಕ್ರಮ ತೆಗೆದುಕೊಂಡ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌!

ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಂಸ್ಥಾಪಕ ಕೌಶಾಲ್ ಶಾ, ಎಲ್ಲರೂ 9.30ಕ್ಕೆ ಕಚೇರಿಗೆ ಹಾಜರಾಗಬೇಕು. 9.30 ಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದಿದ್ದರೆ 200 ರೂಪಾಯಿ ದಂಡ ಪಾವತಿಸಬೇಕು. ಈ ಕಠಿಣ ನಿಯಮವನ್ನು ಕೌಶಾಲ್ ಶಾ ಜಾರಿಗೊಳಿಸಿದ್ದಾರೆ. ಆದರೆ ಒಂದು ತಿಂಗಳಲ್ಲಿ ಸ್ವತಃ ಕೌಶಾಲ್ ಜಾ 5 ಬಾರಿ ತಡವಾಗಿ ಆಗಮಿಸಿದ್ದಾರೆ. ಹೀಗಾಗಿ ಒಟ್ಟು 1,000 ರೂಪಾಯಿ ದಂಡವನ್ನು ಪಾವತಿಸಿದ್ದಾರೆ. 

ಕಳೆದ ವಾರದ ಕೇಚರಿಯಲ್ಲಿ ಉತ್ಪಾದಕತೆ ಪ್ರಮಾಣ ಹೆಚ್ಚಿಸಲು ಕಠಿಣ ನಿಯಮವನ್ನು ನಾನು ಜಾರಿಗೊಳಿಸಿದೆ. ನಾವು 10 ರಿಂದ 11 ಗಂಟೆಗೆ ಕಚೇರಿಗೆ ಆಗಮಿಸುತ್ತಿದ್ದೆವು. ಹೀಗಾಗಿ ಎಲ್ಲರೂ 9.30ಕ್ಕೆ ಕಡ್ಡಾಯವಾಗಿ ಹಾಜರಾಗಬೇಕು. ತಡವಾದರೆ 200 ರೂಪಾಯಿ ತಂಡದ ನಿಯಮ ಜಾರಿ ಮಾಡಿದ್ದೇನೆ. ಇದೀಗ 5ನೇ ಬಾರಿಗೆ ದಂಡ ಪಾವತಿಸುತ್ತಿದ್ದೇನೆ ಎಂದು ಸಂಸ್ಥಾಪಕ ಕೌಶಾಲ್ ಶಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

 

Last week,

To increase the productivity in office,

I made a strict rule for everyone to be in the office by 9:30 am (earlier we used to come by 10-11)

and if we‘re late, we pay Rs.200 as penalty.

This is me paying it for the 5th time🫠 pic.twitter.com/4qYi6kTP17

— Kaushal (@_kaushalshah)

 

ಈ ಪೋಸ್ಟ್ ಬೆನ್ನಲ್ಲೇ ಹಲವರು ಕಂಪನಿ ಸಂಸ್ಥಾಪಕ ತನ್ನ ದಂಡದ ಮೊತ್ತವನ್ನು ತನ್ನದೇ ಖಾತೆಗೆ ಪಾವತಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ಈ ಇದೇ ರೀತಿ ಕಮೆಂಟ್ ಮಾಡಿದ ಬೆನ್ನಲ್ಲೇ ಕೌಶಾಲ್ ಶಾ ಸ್ಪಷ್ಟನೆ ನೀಡಿದ್ದಾರೆ. ದಂಡ ಪಾವತಿಸಲು ಪ್ರತ್ಯೇಕ ಖಾತೆ ಇದೆ. ಈ ಖಾತೆಯಲ್ಲಿ ಸಂಗ್ರಹವಾದ ದಂಡದ ಮೊತ್ತವನ್ನು ನೌಕಕರ ಚಟುವಟಿಕೆಗೆ ಬಳಸಲಾಗುತ್ತದೆ. ಟೀಂ ಲಂಚ್ ಸೇರಿದಂತೆ ಉದ್ಯೋಗಿಗಳಿಗೆ ಹಲವು ಚಟುವಟಿಕೆಗಳಿಗೆ ಈ ಹಣ ಬಳಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಡ್ತಿ ಕೊಡ್ತಿಲ್ಲ ಅಂತ ಕೆಲಸ ಬಿಟ್ಟ ಯುವತಿ; ಮತ್ತದೇ ಕಂಪನಿಗೆ ಮುಂಚಿಗಿಂತ ಎರಡು ಪಟ್ಟು ಸಂಬಳಕ್ಕೆ ಆಯ್ಕೆ!
 

click me!