ಕಾರ್‌ನಲ್ಲೇ ಗುಪ್ತ್‌ ಗುಪ್ತ್‌, ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಮಹಿಳಾ ಪೇದೆ!

Published : Jul 01, 2024, 06:03 PM IST
ಕಾರ್‌ನಲ್ಲೇ ಗುಪ್ತ್‌ ಗುಪ್ತ್‌, ರೆಡ್‌ಹ್ಯಾಂಡ್‌ಆಗಿ ಸಿಕ್ಕಿಬಿದ್ದ ಮಹಿಳಾ ಪೇದೆ!

ಸಾರಾಂಶ

ಕಾರ್‌ನಲ್ಲಿಯೇ ರೆಡ್ ಹ್ಯಾಂಡ್‌ ಆಗಿ ಮಹಿಳಾ ಪೇದೆ ಸಿಕ್ಕಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಜೊತೆಯಲ್ಲಿದ್ದ ಯುವರಾಜ್ ಸಿಂಗ್ ಎಂಬಾತನನ್ನು ಸಹ ಬಂಧಿಸಲಾಗಿದೆ.

ಕಛ್‌: ಗುಜರಾತಿನ ಕಛ್‌ ಪೊಲೀಸರು ಸಿಐಡಿ ವಿಭಾಗದ ಸುಂದರ ಮಹಿಳಾ ಪೊಲೀಸ್ ಪೇದೆಯನ್ನು ಬಂಧಿಸಿದ್ದಾರೆ. ಮಹಿಳೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರಂಭದಲ್ಲಿ ಪೊಲೀಸ್ ಪೇದೆ ಮದ್ಯ ಸಾಕಾಣಿಕೆ ಮಾಡ್ತಾಳೆ ಅಂದ್ರೆ ಯಾರೂ ನಂಬಿರಲಿಲ್ಲ. ಗುಜರಾತಿನ ಪೊಲೀಸರಿಗೆ ಮದ್ಯ ಸಾಗಾಟದ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಚೆಕ್‌ಪೋಸ್ಟ್‌ನಲ್ಲಿ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸಲಾಗಿತ್ತು. 

ಭವೂಚಾ ಪ್ರದೇಶದಲ್ಲಿ ಬಿಳಿ ಬಣ್ಣದ ಥಾರ್ ಪೊಲೀಸರು ನಿಲ್ಲಿಸುವಂತೆ ಸೂಚನೆ ನೀಡಿದರೂ ವೇಗವಾಗಿ ಚಾಲನೆ ಮಾಡಿಕೊಂಡು ಪರಾರಿಯಾಗಿದ್ದನು. ಪೊಲೀಸರು ಬಿಳಿ ಬಣ್ಣದ ಥಾರ್ ಮಾಹಿತಿಯನ್ನು ಮುಂದಿನ ಚೆಕ್‌ಪೋಸ್ಟ್‌ಗೆ ರವಾನಿಸಿದ್ದರು. ಥಾರ್ ಚಾಲಕ ಪೊಲೀಸರ ಮೇಲೆಯೇ ವಾಹನ ಹತ್ತಿಸಲು ಮುಂದಾಗಿದ್ದನು ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ. 

ಪಾಕಿಸ್ತಾನಿ ತಾಯಿ-ಮಗಳಿಗೆ ಹೈದರಾಬಾದ್‌ನಲ್ಲಿ ತಾಲಿಬಾನ್‌ ಮಾದರಿಯ ಶಿಕ್ಷೆ; ನರಕ ತೋರಿಸಿದ ಕುಟುಂಬಸ್ಥರು

ವಾಹನ ಪರಿಶೀಲನೆಗೆ ಮುಂದಾದ ಪೊಲೀಸರಿಗೆ ಶಾಕ್ 

ಮುಂದಿನ ಚೆಕ್‌ಪೋಸ್ಟ್‌ನಲ್ಲಿ ಥಾರ್ (ಕಾರ್) ನಿಲ್ಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಥಾರ್ ಪರಿಶೀಲನೆಗೆ ಮುಂದಾದಾಗ ಪೊಲೀಸರಿಗೆ ಪೂರ್ವ ಕಚ್‌ ಸಿಬಿಐ ಘಟಕದಲ್ಲಿ ಕೆಲಸ ಮಾಡುವ ಮಹಿಳಾ ಪೇದೆ ಕಾಣಿಸಿಕೊಂಡಿದ್ದಾರೆ. ಮಹಿಳಾ ಪೇದೆ ಜೊತೆ ಅಕ್ರಮ ಮದ್ಯ ಸಾಗಾಟಗಾರ ಯುವರಾಜ್ ಸಿಂಗ್ ಎಂಬಾತನೂ ಇದ್ದನು. ಪೊಲೀಸರು ಥಾರ್‌ನಲ್ಲಿದ್ದ ಮದ್ಯದ ಬಾಟೆಲ್ ಹಾಗೂ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಮಹಿಳಾ ಪೊಲೀಸ್ ಪೇದೆಯನ್ನು ಬಂಧಿಸಲಾಗಿದೆ.

ಅಕ್ರಮ ಮದ್ಯ ಸಾಗಾಟದಲ್ಲಿ ಬಂಧನಕ್ಕೊಳಗಾಗಿರುವ ಮಹಿಳಾ ಪೇದೆಯನ್ನು ನೀತಾ ಚೌಧರಿ ಎಂದು ಗುರುತಿಸಲಾಗಿದೆ. ನೀತಾ ಚೌಧರಿ ಪೂರ್ವ ಕಛ್‌ನಲ್ಲಿರೋ ಗಾಂಧಿದಾಮದ ಸಿಬಿಐ ಕ್ರೈಂ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು ಎಂದು ಪೊಲೀಸರು ದೃಢಪಡಿಸಿದ್ದಾರೆ. ನೀತಾ ಚೌಧರಿ ಮತ್ತು ಯುವರಾಜ್ ಸಿಂಗ್ ವಿರುದ್ಧ ಕೊಲೆ  ಯತ್ನ ಹಾಗೂ ಅಕ್ರಮ ಮದ್ಯ ಸಾಗಾಟದಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮದ್ವೆಯಾಗಿದ್ರೂ ಇಬ್ಬರ ಜೊತೆ ಸರಸ ಸಲ್ಲಾಪ; ಅಡ್ಡಿಯಾದ ಗಂಡನಿಗೆ ಚಟ್ಟ ಕಟ್ಟಿದ್ಳು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು