ಬಿಜೆಪಿ ನಾಯಕನಿಂದ ಜೀವ ಬೆದರಿಕೆ ಆರೋಪ, ಕಾರ್ಯಕ್ರಮ ರದ್ದುಗೊಳಿಸಿದ ಹಾಸ್ಯ ಕಲಾವಿದ

By Mahmad RafikFirst Published Jul 1, 2024, 4:47 PM IST
Highlights

ಈ ಹಿಂದಿನ ಶೋನಲ್ಲಾದ ಅಶಾಂತಿ ಕಾರಣ ಹೈದರಾಬಾದ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡೇನಿಯಲ್ ಹೇಳಿಕೊಂಡಿದ್ದಾರೆ.

ಹೈದರಾಬಾದ್: ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಸಿಂಗ್ (BJP MLA T Raja Singh) ಅವರಿಂದ ಜೀವ ಬೆದರಿಕೆ ಆರೋಪ (Life threat Allegation)  ಕೇಳಿ ಬಂದ ಹಿನ್ನೆಲೆ ಹಾಸ್ಯ ಕಲಾವಿದ ಡೇನಿಯಲ್ ಫೆರ್ನಾಂಡಿಸ್ (Comedian Daniel Fernandes) ತಮ್ಮ ಕಾರ್ಯಕ್ರಮವನ್ನು ರದ್ದೊಗೊಳಿಸಿದ್ದಾರೆ. ಶನಿವಾರ ಹೈದರಬಾದ್ ನಗರದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಡೇನಿಯಲ್ ಫೆರ್ನಾಂಡಿಸ್ ಅವರ ಕಾರ್ಯಕ್ರಮ ಆಯೋಜನೆ ಆಗಿತ್ತು. ಜೈನ ಸಮುದಾಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಡೇನಿಯಲ್ ಫರ್ನಾಂಡಿಸ್ ಅವರಿಗೆ ಬಿಜೆಪಿ ಶಾಸಕ ಟಿ ರಾಜಾ ಬಹಿರಂಗವಾಗಿಯೇ ಬೆದರಿಕೆ ಹಾಕಿದ್ದರು.

ಈ ಕುರಿತು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಡೇನಿಯಲ್ ಫೆರ್ನಾಂಡಿಸ್, ಈ ಹಿಂದಿನ ಶೋನಲ್ಲಾದ ಅಶಾಂತಿ ಕಾರಣ ಹೈದರಾಬಾದ್ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಡೇನಿಯಲ್ ಹೇಳಿಕೊಂಡಿದ್ದಾರೆ. ಇದರ ಜೊತೆಯಲ್ಲಿಯೇ ಜನರ ಭಾವನೆಗಳಿಗೆ ನೋವುಂಟು ಮಾಡಿದ ಹೇಳಿಕೆಯ ವಿಡಿಯೋ ಕ್ಲಿಪ್ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

ಕೋಮು ಗಲಭೆ ಸೃಷ್ಟಿಸಲು 60 ಹಸು, ಎತ್ತುಗಳನ್ನ ಕೊಂದ 24 ಜನರ ಬಂಧನ!

ಬಿಜೆಪಿ ಶಾಸಕ ರಾಜಾ ಹೇಳಿಕೆಗೆ ತಿರುಗೇಟು

ಇದೇ ವೇಳೆ ತಮಗೆ ಇನ್ನೂ ಜೀವ ಬೆದರಿಕೆಯ ಸಂದೇಶಗಳು ಬರುತ್ತಿವೆ. ಹಾಗಾಗಿ ನನ್ನ ವೀಕ್ಷಕರು, ಸಿಬ್ಬಂದಿಗೆ ಭದ್ರತೆ ನೀಡುವ ಭರವಸೆಯನ್ನು ಯಾರೂ ನೀಡದ ಕಾರಣ ಕಾರ್ಯಕ್ರಮ ರದ್ದುಗೊಳಿಸಲಾಗುತ್ತಿದೆ. ಈ ಹಿಂದೆ ಹೇಳಿದ ನನ್ನ ಹೇಳಕೆಗಳಿಂದ ಯಾರರನ್ನೂ ಅಪಾಯಕ್ಕೆ ತಳ್ಳಲಾರೆ. ನಿಮಗೆ ಯಾವುದೇ ಕಲಾವಿದರ ಕೆಲಸ ಇಷ್ಟವಿಲ್ಲ ಅಂದ್ರೆ ಅಭ್ಯಂತರವಿಲ್ಲ. ಆದ್ರೆ ಆತನ ಕೆಲಸ ಇಷ್ಟವಿಲ್ಲ ಎಂದು ಕಲಾವಿದನನ್ನು ಹಿಂಸಿಸೋದನ್ನು ನಾನು ಒಪ್ಪಲ್ಲ ಎಂದು ಬಿಜೆಪಿ ಶಾಸಕ ರಾಜಾ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 

ಡೇನಿಯಲ್ ಫೆರ್ನಾಂಡಿಸ್‌ಗೆ ರಾಜಾ ಎಚ್ಚರಿಕೆ

ಡೇನಿಯಲ್ ಫೆರ್ನಾಂಡಿಸ್ ಅವರು ಹಾಸ್ಯ ಕಾರ್ಯಕ್ರಮದಲ್ಲಿ  ಜೈನ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಕೂಡಲೇ ಹೈದರಾಬಾದ್ ನಗರದಲ್ಲಿ ಆಯೋಜನೆ ಮಾಡಲಾಗಿರುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಬೇಕು. ಇಲ್ಲವಾದ್ರೆ ಇಲ್ಲಿಯ ಜನರ ಕೋಪವನ್ನು ನೋಡಬೇಕಾಗುತ್ತದೆ. ಭವಿಷ್ಯದಲ್ಲಿ ಹೈದರಾಬಾದ್ ಅಥವಾ ತೆಲಂಗಾಣಕ್ಕೆ ಬರುವ ಮೊದಲು 50 ಬಾರಿ ಯೋಚಿಸಬೇಕಾಗುತ್ತದೆ ಎಂದು ಟಿ ರಾಜಾ ಎಚ್ಚರಿಕೆ ನೀಡಿದ್ದರು. ಜೈನ ಸಮುದಾಯ ಅಥವಾ ಹಿಂದೂ ಧರ್ಮವನ್ನು ಗೇಲಿ ಮಾಡುವವರನ್ನು ನಾವು ಏನು ಮಾಡುತ್ತೇವೆ ಎಂಬುದು ಇತಿಹಾಸವನ್ನು ನೆನಪಿಸುತ್ತದೆ ಎಂದು ಹೇಳಿದ್ದರು. 

ಹಿಂದೂಗಳು ಹಿಂಸಾವಾದಿಗಳು ಎಂದ ರಾಹುಲ್‌ ಗಾಂಧಿ, 'ಇದು ಗಂಭೀರ ಟೀಕೆ..' ಎಚ್ಚರಿಸಿದ ಪ್ರಧಾನಿ ಮೋದಿ!

click me!