ಬಾಲಿವುಡ್‌ ಹಾಡಿಗೆ ಬಾಂಗ್ಲಾದೇಶಿ ನವ ಜೋಡಿಯ ಜಬರ್‌ದಸ್ತ್‌ ಸ್ಟೆಪ್ಸ್‌

Suvarna News   | Asianet News
Published : Jan 02, 2022, 09:13 PM IST
ಬಾಲಿವುಡ್‌ ಹಾಡಿಗೆ ಬಾಂಗ್ಲಾದೇಶಿ ನವ ಜೋಡಿಯ ಜಬರ್‌ದಸ್ತ್‌ ಸ್ಟೆಪ್ಸ್‌

ಸಾರಾಂಶ

ಬಾಂಗ್ಲಾದೇಶಿ ನವ ಜೋಡಿಯ ಜಬರ್‌ದಸ್ತ್‌ ಸ್ಟೆಪ್ಸ್‌ ಅರಿಶಿಣ ಶಾಸ್ತ್ರದಂದು ಸಖತ್‌ ಆಗಿ ಕುಣಿದ ಜೋಡಿ ಮಾಧುರಿ ದೀಕ್ಷಿತ್‌ ನಟನೆಯ ದೇವದಾಸ್‌ ಹಾಡಿಗೆ ಹೆಜ್ಜೆ

ಇತ್ತೀಚೆಗೆ ತಮ್ಮದೇ ಮದುವೆಯಲ್ಲಿ ನವ ವಧು ವರರು ಸಖತ್‌ ಆಗಿ ಡಾನ್ಸ್‌ ಮಾಡುವುದು ಸಾಮಾನ್ಯವೆನಿಸಿದೆ. ಮದುವೆಯಲ್ಲಿ ಡಾನ್ಸ್‌ ಇಲ್ಲದೇ ಇದರೆ ಮದುವೆ ಸಂಪೂರ್ಣ ಎನಿಸುವುದಿಲ್ಲ ಎಂಬಲ್ಲಿವರೆಗೆ ಇಂದು ಡಾನ್ಸ್‌ ಪ್ರಮುಖ ಪಾತ್ರ ವಹಿಸಿದೆ. ಬಾಂಗ್ಲಾ ಮೂಲದ ನವ ವಧು ಹಾಗೂ ವರ ಬಾಲಿವುಡ್‌ನ ನಟಿ ಮಾಧುರಿ ದೀಕ್ಷಿತ್‌ ನರ್ತಿಸಿರುವ, 'ಕಾಹೆ ಛೇಡ್‌ ಮೊಹೆ' ಎಂಬ ಹಾಡಿಗೆ ಸಖತ್‌ ಆಗಿ ಡಾನ್ಸ್‌ ಮಾಡುವ ಮೂಲಕ ವೇದಿಕೆಯಲ್ಲಿ ಬೆಂಕಿ ಎಬ್ಬಿಸಿದ್ದಾರೆ. ತಮ್ಮ ಮದುವೆಯ ಅರಿಶಿಣ ಶಾಸ್ತ್ರ (haldi ceremony) ಕಾರ್ಯಕ್ರಮದಲ್ಲಿ  ಇವರು ಮಾಡಿದ ಡಾನ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ವಧು ಹಾಗೂ ವರ ಇಬ್ಬರೂ ಒಬ್ಬರಿಗೊಬ್ಬರು ಸ್ಪರ್ಧೆ ನೀಡುವಂತೆ ಡಾನ್ಸ್‌ ಮಾಡುತ್ತಿರುವ ದೃಶ್ಯ ಈ ವಿಡಿಯೋದಲ್ಲಿ ಕಾಣಿಸುತ್ತಿದೆ. ಅಲಿಯಾ( Aaliya) ಎಂಬವರು ಕಳೆದ ವಾರ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 2002 ರ ದೇವದಾಸ್‌ ಸಿನಿಮಾದ ಹಾಡಿಗೆ ಇವರು ನೃತ್ಯ ಮಾಡಿದ್ದಾರೆ. ಅಲ್ಲದೇ ಇವರು ಯಾವುದೇ ಅಭ್ಯಾಸವಿಲ್ಲದೇ ಈ ನೃತ್ಯ ಮಾಡಿದ್ದಾರೆ ಎನ್ನಲಾಗಿದ್ದು, ಅಶ್ಚರ್ಯವೆಂದರೆ ಇಬ್ಬರ ಹೆಜ್ಜೆ ಕೂಡ ಪರಸ್ಪರ ಒಂದೇ ರೀತಿ ಇದ್ದು ಮ್ಯಾಚ್‌ ಆಗುತ್ತಿತ್ತು. ವಿಡಿಯೋದಲ್ಲಿ ಸುತ್ತಲಿರುವವರು ಈ ಡಾನ್ಸ್‌ ನೋಡಿ ಚಪ್ಪಾಳೆ ತಟ್ಟಿ ಬೊಬ್ಬೆ ಹೊಡೆದು ಅವರಿಬ್ಬರಿಗೆ ಪ್ರೋತ್ಸಾಹ ನೀಡುತ್ತಿರುವುದು ಕಾಣಿಸುತ್ತಿದೆ. 

 

ಭಾರತೀಯ ಮದುವೆಗಳು ಹಾಡು ಹಾಗೂ ಸಂಗೀತಾ ಇವುಗಳಿಲ್ಲದೇ ಎಂದಿಗೂ ಕೊನೆಗೊಳ್ಳುವುದೇ ಇಲ್ಲ. ನಾವು ಬೇರೆಯವರ ಮದುವೆಗೆ ಅತಿಥಿಗಳಾಗಿ ಹೋಗುವುದಾದರೆ ಅದೊಂದು ಎಲ್ಲಾ ಚಿಂತೆಗಳನ್ನು ಮರೆತು ಆರಾಮವಾಗಿ ಸಂಭ್ರಮಿಸಲು ಇರುವ ಒಂದು ಉತ್ತಮ ಅವಕಾಶ. ಮದುವೆಯಲ್ಲಿ ಜನರು ಡಾನ್ಸ್‌ ಮಾಡುವ ದೃಶ್ಯಾವಳಿಗಳನ್ನು ನಾವು ಈಗಾಗಲೇ ಬೇಕಾದಷ್ಟು ನೋಡಿದ್ದೇವೆ. ಆದರೆ ಇತ್ತೀಚೆಗೆ ಮದುವೆಯ ಕೇಂದ್ರ ಬಿಂದುವಾಗಿರುವ ವಧು ಹಾಗೂ ವರರೇ ಬಿಂದಾಸ್ ಆಗಿ ಸ್ಟೆಪ್‌ ಹಾಕುವ ಮೂಲಕ ಮದುವೆ ಮಂಟಪ ಪ್ರವೇಶಿಸಿ ತಮ್ಮ ಮದುವೆಯನ್ನು ಸ್ಮರಣೀಯವಾಗಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚು ಇದು ಅವರ ಬದುಕಿನ ವಿಶೇಷ ದಿನವಾಗಿರುತ್ತದೆ. ಇದೇ ರೀತಿ ವಧು ಹಾಗೂ ವರ ಬಿಂದಾಸ್‌ ಆಗಿ ತಮ್ಮ ಮದುವೆ ದಿನ ಮಾಡಿದ ಡಾನ್ಸ್‌  ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಬಾಲಿವುಡ್‌ (Bollywood)ನ ಸೇ ಶವ ಶವ ಹಾಡಿಗೆ ಈ ಜೋಡಿ ಡಾನ್ಸ್‌ ಮಾಡಿದೆ.

ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌
ಡಾನ್ಸ್‌, ಹಾಡು ಮುಂತಾದವುಗಳಿಗೆ ಯಾವುದೇ ಜಾತಿ, ಭಾಷೆ, ವಯಸ್ಸು, ದೇಶದ ಗಡಿಗಳ ಹಂಗಿಲ್ಲ. ನಿಮಗೆ ನೃತ್ಯ ಗೊತ್ತಿದ್ದರೇ ಸಾಕು ಎಲ್ಲಿ ಯಾವ ಹಾಡಿಗೆ ಬೇಕಾದರೂ ನೀವು ಕುಣಿಯಬಹುದು. ಆದರೆ ಕೆಲವು ಹಾಡುಗಳು ಅವುಗಳಿಗೆ ನೀಡಿರುವ ಸಂಗೀತಾ ಇದುವರೆಗೆ ಡಾನ್ಸ್‌ ಮಾಡದವರನ್ನು ಎಗ್ಗು ಸಿಗ್ಗಿಲ್ಲದೇ ಕುಣಿಸುತ್ತವೆ. 

ಜಬರ್‌ದಸ್ತ್‌ ಡಾನ್ಸ್‌ನಿಂದ ನೋರಾ ಫತೇಹಿಯನ್ನು ಇಂಪ್ರೆಸ್ ಮಾಡಿದ ತಾಂಜೇನಿಯಾ ತರುಣ

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಅವರ 'ಬ್ಯಾಂಗ್ ಬ್ಯಾಂಗ್' (Bang Bang) ಹಾಡಿಗೆ ಮಹಿಳೆಯೊಬ್ಬರು ಎರ್ರಾಬಿರ್ರಿ ಕುಣಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ನಗು, ಖುಷಿ ಅಚ್ಚರಿ ಮೂಡಿಸುತ್ತಿದೆ. ಬಹುಶಃ ಇದು ಪಾರ್ಟಿಯೊಂದರ ದೃಶ್ಯಾವಳಿಯಾಗಿದ್ದು, ವೀಡಿಯೊದಲ್ಲಿ ಮಹಿಳೆ ಕೆಂಪು ಸೀರೆಯನ್ನು ಧರಿಸಿ ಗುಂಪಿನ ಮಧ್ಯೆ ಎದ್ದು ಬಿದ್ದು ಸಖತ್‌ ಎನರ್ಜಿಟಿಕ್‌ ಆಗಿ ಡಾನ್ಸ್‌ ಮಾಡುತ್ತಿದ್ದಾರೆ. ಇವರ ಡಾನ್ಸ್‌ಗೆ ಸುತ್ತಲು ಡಾನ್ಸ್‌  ಮಾಡುತ್ತಿದ್ದವರು ಕೂಡ ಸ್ವಲ್ಪ ಕಾಲ ತಮ್ಮ ಡಾನ್ಸ್‌ ನಿಲ್ಲಿಸಿ ಇವರಿಗೆ ಚಪ್ಪಾಳೆ ತಟ್ಟಿದ್ದಾರೆ. ಮತ್ತೆ  ಕೆಲವರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

Cute Video: ಮೆರವಣಿಗೆ ಬರುತ್ತಿದ್ದ ವರನ ನೋಡಿ ಕಿಟಕಿಯಿಂದಲೇ ವಧುವಿನ ಡಾನ್ಸ್‌...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?