Peanut Debt : ಕಡ್ಲೇಕಾಯ್ ಸಾಲ ತೀರ್ಸೋಕೆ ಅಮೇರಿಕಾದಿಂದ ಬಂದ್ರು!

By Suvarna NewsFirst Published Jan 2, 2022, 8:49 PM IST
Highlights

ಕ್ಲಡೇಕಾಯಿ ತಿಂದ ಸಾಲವನ್ನು ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ
2010ರಲ್ಲಿ ಪಡೆದ ಕಡ್ಲೇಕಾಯ್ ಸಾಲವನ್ನು 12 ವರ್ಷಗಳ ಬಳಿಕ ತೀರಿಸಿದರು
ಆಂಧ್ರದ ಕಾಕಿನಾಡದಲ್ಲಿ ನಡೆದ ಘಟನೆ
 

ಕಾಕಿನಾಡ (ಜ. 2): ಕೋಟಿಗಟ್ಟಲೆ ಸಾಲ ಪಡೆದು ಹೇಳ್ದೆ, ಕೇಳ್ದೆ ದೇಶವನ್ನು ಬಿಟ್ಟು ಪರಾರಿಯಾಗಿರುವ ಸಾಕಷ್ಟು ಜನ ನಮ್ಮಲ್ಲಿದ್ದಾರೆ. ಆದರೆ, ಕೇವಲ ಕಡ್ಲೇಕಾಯ್ ಸಾಲವನ್ನು(Peanut Debt)  ತೀರಿಸುವ ಸಲುವಾಗಿ ಅಮೇರಿಕದಿಂದ (America) ಬಂದವನ್ನು ಕೇಳಿದ್ದೀರಾ? ಇಂಥದ್ದೊಂದು ನೆನಪಿಟ್ಟುಕೊಳ್ಳುವಂಥ ಘಟನೆಗೆ ಸಾಕ್ಷಿಯಾಗಿರುವುದು ಆಂಧ್ರಪ್ರದೇಶ (Andra Pradesh) ಕಾಕಿನಾಡ (Kakinada). 2010ರಲ್ಲಿ ಯು ಕೊತ್ತಪಲ್ಲಿಯ ಬೀಚ್ ನಲ್ಲಿ (U Kothapalli ) ನಡೆದ ಸನ್ನಿವೇಶವಿದು. ಹತ್ತು ವರ್ಷ ವಯಸ್ಸಿನ ನೇಮಾನಿ ಪ್ರಣವ್ ಹಾಗೂ ಆತನ ಸಹೋದರಿ ಸುಚಿತಾ ತಮ್ಮ ಪಾಲಕರೊಂದಿಗೆ ಬೀಚ್ ಗೆ ತೆರಳಿದ್ದರು. ಬೀಚ್ ನಲ್ಲಿ ಸುತ್ತಾಡಿ ಸಾಕಷ್ಟು ಸಮಯದ ಬಳಿಕ ಅಲ್ಲಿಯೇ ಹಲವು ವರ್ಷಗಳಿಂದ ಕಡಲೇಕಾಯಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಗಿಂಜಾಳ ಪೆದ್ದ ಸತ್ತಯ್ಯ (Ginjala Pedda Sattaiah) ಎನ್ನುವವರ ಬಳಿ ಕಡಲೆಕಾಯಿಯನ್ನು ಖರೀದಿ ಮಾಡಿದ್ದರು.

ತೆಗೆದುಕೊಂಡ ಕಲಡೆಕಾಯಿಗೆ ಹಣ ನೀಡಲು ಪ್ರಣವ್ ಅವರ ತಂದೆ ಮೋಹನ್ ಜೇಬಿಗೆ ಕೈ ಹಾಕಿದಾಗಲೇ ಪರ್ಸ್ ಮನೆಯಲ್ಲೇ ಬಿಟ್ಟುಬಂದಿದ್ದು ಗೊತ್ತಾಗಿದೆ. ಆದರೆ, ಅಷ್ಟರಲ್ಲಾಗಲೇ ಮಕ್ಕಳು ಕಡಲೆಕಾಯಿ ತಿನ್ನಲು ಆರಂಭಿಸಿದ್ದರು. ಮೋಹನ್ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೆದ್ದ ಸತ್ತಯ್ಯ, "ಸ್ವಾಮಿ ಮಕ್ಕಳು ಕಡ್ಲೆಕಾಯಿ ತಿನ್ತಾ ಇದ್ದಾರೆ. ಇನ್ಯಾವಾಗ್ಲಾದ್ರೂ ಬಂದಾಗ ಕೊಟ್ರಾಯ್ತು ಬಿಡಿ, ಪರವಾಗಿಲ್ಲ' ಎಂದಿದ್ದಾರೆ.

ಆದರೆ, ಮೋಹನ್ ಅವರಿಗೆ ಹಾಗೇ ಹೋಗಲು ಮನಸ್ಸಾಗಲಿಲ್ಲ. ಹಣ ಕೊಡುವುದಾಗಿ ಭರವಸೆ ನೀಡಿ, ತಮ್ಮ ಬಳಿಯಿದ್ದ ಕ್ಯಾಮೆರಾದಲ್ಲಿ ಅವರ ಫೋಟೋ ತೆಗೆದುಕೊಂಡಿದ್ದರು. ಮೂಲತಃ ಅಮೆರಿಕದಲ್ಲಿಯೇ ವಾಸವಾಗಿದ್ದ ಮೋಹನ್ ಆ ಬಳಿಕ ಬೇರೆ ವಿಚಾರದಲ್ಲಿ ಮಗ್ನರಾಗಿ ಈ ಸಾಲವನ್ನು ಮರೆತುಬಿಟ್ಟಿದ್ದರು. ಬಳಿಕ ಹೆಂಡತಿ ಮಕ್ಕಳೊಂದಿಗೆ ಅಮೆರಿಕಕ್ಕೆ ತೆರಳಿದ್ದರು.

Complaint Filed Against Vicky Kaushal: ಫೇಕ್ ನಂಬರ್‌ ಪ್ಲೇಟ್, ವಿಕ್ಕಿ ವಿರುದ್ಧ ಕೇಸ್
ಬಳಿಕ ಕಾಕಿನಾಡಕ್ಕೆ ಹಲವು ಬಾರಿ ಬಂದರೂ ಸತ್ತಯ್ಯ ಅವರನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಆ ಬಡವನ ಸಾಲ ತೀರಿಸಲೇ ಬೇಕು ಎನ್ನುವ ಉತ್ಸಾಹ ಹೊಂದಿದ್ದ ಮೋಹನ್, ಸತ್ತಯ್ಯ ಅವರನ್ನು ಪತ್ತೆ ಮಾಡಲುಕಾಕಿನಾಡ ನಗರದ ಶಾಸಕ ಚಂದ್ರಶೇಖರ್ ರೆಡ್ಡಿ( D Chandrasekhar Reddy, MLA of Kakinada City) ಅವರ ಸಹಾಯವನ್ನು ಕೋರಿದ್ದರು. ಮೋಹನ್ ಅವರಿಂದ ಸತ್ತಯ್ಯನ ಫೋಟೋ ಪಡೆದುಕೊಂಡ ಚಂದ್ರಶೇಖರ್ ರೆಡ್ಡಿ ಅದನ್ನು ಫೇಸ್ ಬುಕ್ ನಲ್ಲಿ (Facebook) ಪೋಸ್ಟ್ ಮಾಡಿದ್ದು ಮಾತ್ರವಲ್ಲ ತಮ್ಮ ಸಹಾಯಕ ಗೋವಿಂದರಾಜುಲುವಿಗೆ ಸತ್ತಯ್ಯನನ್ನು ಪತ್ತೆ ಮಾಡುವಂತೆ ಸೂಚನೆ ಕೂಡ ನೀಡಿದ್ದರು.

Fact Check: CRPF 2011 vs 2021: ಸೋಷಿಯಲ್‌ ಮೀಡಿಯಾ ಪೋಸ್ಟ್ ಸತ್ಯಾಸತ್ಯತೆ ಏನು?
ಸಾಕಷ್ಟು ಹುಡುಕಾಟದ ಬಳಿಕವೂ ಇವರ ಪತ್ತೆ ಸಾಧ್ಯವಾಗಿರಲಿಲ್ಲ. ಈ ನಡುವೆ ಸತ್ತಯ್ಯನ ಹುಟ್ಟೂರಾದ ನಾಗಲಪಲ್ಲಿಯ ಜನ ಶಾಸಕರ ಫೇಸ್ ಬುಕ್ ಖಾತೆಯಲ್ಲಿ ಸತ್ತಯ್ಯನ ಚಿತ್ರವನ್ನು ನೋಡಿ ಶಾಸಕರ ಸಹಾಯಕನಿಗೆ ಫೋನ್ ಮಾಡಿದ್ದಾರೆ. ಇದರ ಮಾಹಿತಿ ತಿಳಿದ ತಕ್ಷಣವೇ ಮೋಹನ್ ತಮ್ಮ ಮಕ್ಕಳಿಬ್ಬರನ್ನು ಕಾಕಿನಾಡಕ್ಕೆ ತೆರಳುವಂತೆ ಸೂಚನೆ ನೀಡಿದರು. ಈಗ 21 ವರ್ಷದ ವ್ಯಕ್ತಿಯಾಗಿರುವ ಪ್ರಣವ್ ಅಮೆರಿಕದಲ್ಲಿ ಪದವಿ ಓದುತ್ತಿದ್ದು ತನ್ನ ಸಹೋದರಿಯೊಂದಿಗೆ ಕಾಕಿನಾಡಕ್ಕೆ ಭೇಟಿ ನೀಡಿದ್ದು ಮಾತ್ರವಲ್ಲದೆ, ಗುರುವಾರ ನಾಗಲಪಲ್ಲಿಗೆ ತೆರಳಿ ಕುಟುಂಬವನ್ನು ಭೇಟಿ ಮಾಡಿದ್ದರು. ಈ ವೇಳೆ ಗಿಂಜಾಳ ಪೆದ್ದ ಸತ್ತಯ್ಯ ನಿಧನರಾದ ಸುದ್ದಿ ಕೇಳಿದ ಅಣ್ಣ-ತಂಗಿ ಕುಟುಂಬದವರನ್ನು ಸಂತೈಸಿದ್ದು ಮಾತ್ರವಲ್ಲದೆ, ಹಿಂದಿನ ಎಲ್ಲಾ ಕಥೆಗಳನ್ನು ಅವರಿಗೆ ತಿಳಿಸಿ 25 ಸಾವಿರ ರೂಪಾಯಿಯನ್ನು ನೀಡಿದರು.

click me!