
ನವದೆಹಲಿ (ಏ.10) : ಗಂಭೀರ ಅಪರಾಧಗಳಲ್ಲಿ ಕೋರ್ಟುಗಳಿಂದ ದೋಷಾರೋಪಕ್ಕೆ ಗುರಿಯಾಗಿರುವ ವ್ಯಕ್ತಿಗಳ ಚುನಾವಣಾ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಎಂಬ ಅರ್ಜಿಯ ಕುರಿತಾಗಿ ಸುಪ್ರೀಂ ಕೋರ್ಟು(Supreme court), ಕೇಂದ್ರ ಸರ್ಕಾರಿದಿಂದ ಪ್ರತಿಕ್ರಿಯೆ ಬಯಸಿದೆ. ಉತ್ತರಿಸಲು 4 ವಾರಗಳ ಕಾಲಾವಕಾಶ ನೀಡಿದೆ.
ವಕೀಲ ಅಶ್ವಿನಿ ಉಪಾಧ್ಯಾಯ(Ashvin upadhyaya) ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(Public Interest Litigation)ಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ‘ಗಂಭೀರ ಅಪರಾಧಗಳು ಯಾವುವು ಎಂಬುದನ್ನು ಮೊದಲು ಸರ್ಕಾರ ಗುರುತಿಸಬೇಕು. ಅದನ್ನು ನೋಡಿಕೊಂಡು ಮುಂದಿನ ವಿಚಾರಣೆ ನಡೆಸೋಣ. 4 ವಾರಗಳಲ್ಲಿ ಕೇಂದ್ರ ಸರ್ಕಾರ ಉತ್ತರಿಸಬೇಕು’ ಎಂದು ಹೇಳಿ ಜುಲೈಗೆ ವಿಚಾರಣೆ ಮುಂದೂಡಿತು.
ಸುಪ್ರೀಂಕೋರ್ಟ್ ವಿರೋಧ ಪಕ್ಷಗಳಿಗೆ ಹೊಡೆತ ನೀಡಿದೆ: ತನಿಖಾ ಸಂಸ್ಥೆಗಳ ದುರ್ಬಳಕೆ ಆರೋಪಕ್ಕೆ ಚಾಟಿ ಬೀಸಿದ ಮೋದಿ
ಗಂಭೀರ ಆರೋಪಗಳನ್ನು(Persons Charge Sheeted) ಹೊತ್ತಿರುವವರ ವಿರುದ್ಧ ಮೊದಲು ತನಿಖೆ ನಡೆಯುತ್ತದೆ ಹಾಗೂ ನಂತರ ಅವರ ವಿರುದ್ಧ ಪೊಲೀಸರು ಆರೋಪಪಟ್ಟಿಸಲ್ಲಿಸುತ್ತಾರೆ. ಇದನ್ನು ಪರಿಶೀಲಿಸುವ ಕೋರ್ಟು ದೋಷಾರೋಪಗಳನ್ನು ಹೊರಿಸಿ ವಿಚಾರಣೆ ಆರಂಭಿಸುತ್ತದೆ. ಈ ಹಂತದಿಂದಲೇ ಇಂಥವರನ್ನು ಚುನಾವಣಾ ಸ್ಪರ್ಧೆಯಿಂದ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 539 ವಿಜೇತರ ಪೈಕಿ 233 ಮಂದಿ ತಮ್ಮ ವಿರುದ್ಧ ಕ್ರಿಮಿನಲ್ ಕೇಸುಗಳಿವೆ ಎಂದು ದಾಖಲಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ