ಬಾಲಸೋರ್‌ ರೈಲು ದುರಂತ: 28 ಶವಗಳ ಗುರುತು ಪತ್ತೆಯಾಗದೇ, ರೈಲ್ವೆ ಇಲಾಖೆಯಿಂದ ಅಂತ್ಯಕ್ರಿಯೆ ಮಾಡಲು ತೀರ್ಮಾನ

By Sathish Kumar KH  |  First Published Oct 9, 2023, 11:00 AM IST

ಭುವನೇಶ್ವರದ ಬಾಲಸೋರ್‌ ರೈಲು ದುರಂತ ಘಟನೆ ನಡೆದು ನಾಲ್ಕು ತಿಂಗಳು ಕಳೆದರೂ 28 ಶವಗಳ ಗುರುತೇ ಪತ್ತೆಯಾಗಿಲ್ಲ. ಈಗ ರೈಲ್ವೆ ಇಲಾಖೆಯೇ ಅಂತ್ಯಕ್ರಿಯೆ ಮಾಡಲು ತೀರ್ಮಾನಿಸಿದೆ.


ಭುವನೇಶ್ವರ (ಅ.09): ದೇಶದಲ್ಲಿ ನಡೆದ ಅತ್ಯಂತ ದೊಡ್ಡ ರೈಲು ದುರಂತಗಳಲ್ಲಿ ಒಂದಾಗಿರುವ ಭುವನೇಶ್ವರ ಬಳಿಯ ಬಾಲಸೋರ್‌ ರೈಲು ದುರಂತದಲ್ಲಿ 293 ಮಂದಿ ಸಾವನ್ನಪ್ಪಿದ್ದರು. ಈ ಘಟನೆ ಜೂ.2ರಂದು ನಡೆದಿದ್ದು, ಈವರೆಗೆ ನಾಲ್ಕು ತಿಂಗಳೂ ಕಳೆದರೂ 28 ಶವಗಳ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುತಿ ಸಿಗದ ಶವಗಳನ್ನು ವೀಡಿಯೋ ಚಿತ್ರೀಕರಣದ ಮೂಲಕ ವೈಜ್ಞಾನಿಕವಾಗಿ ಅಂತ್ಯಕ್ರಿಯೆ ಮಾಡಲು ಸರ್ಕಾರ ಮುಂದಾಗಿದೆ.

ಕಳೆದ ನಾಲ್ಕು ತಿಂಗಳ ಹಿಂದೆ ಒಡಿಶಾದ ಬಾಲಸೋರ್‌ನಲ್ಲಿ ಜೂನ್ 2 ರಂದು ಮೂರು ರೈಲುಗಳು ಡಿಕ್ಕಿ ಹೊಡೆದಿದ್ದರಿಂದ ಶತಮಾನದ ಅತ್ಯಂತ ಭೀಕರ ರೈಲು ದುರಂತ ಸಂಭವಿಸಿತ್ತು. ಎರಡು ದಶಕಗಳ ಅತಿದೊಡ್ಡ ಅಪಘಾತದಲ್ಲಿ 293 ಜನರು ಸಾವು ಕಂಡಿದ್ದರೆ, 1 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಅಪಘಾತದ ಕುರಿತು ಒಂದೆಡೆ ಸಿಬಿಐ ತನಿಖೆ ನಡೆಸಿದೆ. ಇನ್ನು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಕೂಡ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ನೀಡಿದೆ. ಆದರೆ, ಮೃತ ದೇಹಗಳನ್ನು ವಿಲೇವಾರಿ ಮಾಡುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿತ್ತು.

Tap to resize

Latest Videos

ಸಿಗ್ನಲಿಂಗ್‌ ವ್ಯವಸ್ಥೆಯ ದೋಷವೇ ಬಾಲಸೋರ್‌ ರೈಲು ದುರಂತಕ್ಕೆ ಕಾರಣ: ಸಿಆರ್‌ಎಸ್‌ ವರದಿ

ರೈಲು ಅಪಘಾತದಲ್ಲಿ ಮೃತ 293 ಜನರಲ್ಲಿ ಅಕ್ಟೋಬರ್‌ ತಿಂಗಳವರೆಗೂ ಒಟ್ಟು 265 ಶವಗಳನ್ನು ಪತ್ತೆ ಮಾಡಿದ್ದು, ವಾರಸುದಾರರನ್ನು ಗುರುತಿಸಲಾಗಿದೆ. ಆದರೆ, ಘಟನ ನಡೆದು ಈವರೆಗೆ ನಾಲ್ಕು ತಿಂಗಳು ಕಳೆದರೂ 28 ಶವಗಳನ್ನು ಗುರುತಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಎಷ್ಟೇ ಪ್ರಕಟಣೆ ಕೊಟ್ಟರೂ ಯಾರೊಬ್ಬ ವಾರಸುದಾರರೂ ರೈಲ್ವೆ ಇಲಾಖೆಯನ್ನು ಸಂಪರ್ಕ ಮಾಡಿಲ್ಲ. ಇನ್ನು ಬೆರಳಚ್ಚು ಮೂಲಕ ಗುರುತಿಸಲು ಪ್ರಯತ್ನ ಮಾಡಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದಲೇ ಅ.10 (ಮಂಗಳವಾರ) ಭುವನೇಶ್ವರ ಮುನಿಸಿಪಲ್ ಕಾರ್ಪೊರೇಷನ್ ವಿಯಿಂದ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ.

ಎಲ್ಲ ಶವಗಳ ಡಿಎನ್‌ಎ ಸ್ಯಾಂಪಲ್ಸ್‌ ಸಂಗ್ರಹ: ಇನ್ನು ಶವಗಳ ಅಂತ್ಯಕ್ರಿಯೆಗೂ ಮುನ್ನ ವೈಜ್ಞಾನಿಕವಾಗಿ ದೇಹಗಳ ಮಾಹಿತಿ ಸಂಗ್ರಹಣೆಗೆ ಕ್ರಮವಹಿಸಲಾಗಿದೆ. ದೇಹದ ಮೇಲಿನ ಎಲ್ಲ ಗುರುತುಗಳನ್ನು, ಡಿಎನ್‌ಎ ಸ್ಯಾಂಪಲ್‌ಗಳನ್ನು ಹಾಗೂ ವ್ಯಕ್ತಿಗೆ ಸಂಬಂಧಿಸಿದ ಎಲ್ಲ ವೈಜ್ಞಾನಿಕ ಮಾಹಿತಿಗಳನ್ನು ಸಂಗ್ರಹಿಸಿ ವೀಡಿಯೋ ಚಿತ್ರೀಕರಣದ ಮೂಲಕ ಅಂತ್ಯಕ್ರಿಯೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಯಾರೇ ವಾರಸುದಾರರು ಬಂದರೂ ಕೂಡ ಅವರಿಗೆ ಶವದ ಫೋಟೋ ಹಾಗೂ ಡಿಎನ್‌ಎ ಮಾದರಿಗಳನ್ನು ವೈಜ್ಞಾನಿಕವಾಗಿ ಹೋಲಿಕೆ ಮಾಡಿ ವಾರಸುದಾರರಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಒಡಿಶಾ ರೈಲು ಅಪಘಾತದಲ್ಲಿ ಬದುಕುಳಿದ್ರೂ ಶವಗಳ ಜತೆ ಹಲವು ದಿನ ಕಾಲ ಕಳೆದ: ಉಳಿದಿದ್ದೇ ಪವಾಡ..

ಶವಗಳ ವಾರಸುದಾರರು 139 ರೈಲ್ವೆ ಸಹಾಯವಾಣಿಗೆ ಕರೆ ಮಾಡಿ: ರೈಲ್ವೆ ಇಲಾ​ಖೆಯು, ಸಹಾಯ​ವಾಣಿ ಸಂಖ್ಯೆ 139ಗೆ ಕರೆ ಮಾಡಿ ಮೃತರ ಗುರುತು ಪತ್ತೆ ಮಾಡುವ ಬಗ್ಗೆ ಬಂಧು​ಗಳು ಮಾತ​ನಾ​ಡ​ಬ​ಹುದು ಎಂದು ಮನವಿ ಮಾಡಿದೆ. ಇನ್ನು ಮೃತದೇಹ ತಮ್ಮದೆಂದು ಬರುವ ಮುನ್ನ ಸಂಬಂಧಿತ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ರೈಲ್ವೆ ಇಲಾಖೆಯಿಂದ ಮನವಿ ಮಾಡಲಾಗಿದೆ. ಇನ್ನು ವಾರಸುದಾರರು ಇಲ್ಲದಿದ್ದರೆ ಈ ಪ್ರಕರಣವನ್ನು ಬಹುತೇಕವಾಗಿ ಅಂತ್ಯಗೊಳಿಸಲು ಸರ್ಕಾರ ತೀರ್ಮಾನಿಸಲಾಗಿದೆ.

click me!