ಇಸ್ರೇಲ್‌ನಲ್ಲಿ ಸಿಲುಕಿದ್ದ ಏರ್‌ ಇಂಡಿಯಾ ಸಿಬ್ಬಂದಿ ರಕ್ಷಣೆ: ಅ.14ರವರೆಗೆ ವಿಮಾನ ಸಂಚಾರ ರದ್ದು

By Kannadaprabha News  |  First Published Oct 9, 2023, 9:15 AM IST

ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಅ.14 ರವರೆಗೆವಿಮಾನಯಾನ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ. ಇದೇ ವೇಳೆ ತನ್ನ ವಿಮಾನ ರದ್ದಾದ ಕಾರಣ ಇಸ್ರೇಲ್‌ನಲ್ಲಿ ಸಿಲುಕಿದ್ದ ತನ್ನೆಲ್ಲ ಸಿಬ್ಬಂದಿಯನ್ನು ಇಥಿಯೋಪಿಯಾ ಏರ್‌ಲೈನ್ಸ್‌ ಮೂಲಕ ಏರ್‌ ಇಂಡಿಯಾ ತೆರವು ಮಾಡಿದೆ.


ನವದೆಹಲಿ: ಇಸ್ರೇಲ್‌ ಹಾಗೂ ಹಮಾಸ್‌ ಉಗ್ರರ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಅ.14 ರವರೆಗೆವಿಮಾನಯಾನ ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಭಾನುವಾರ ತಿಳಿಸಿದೆ. ಇದೇ ವೇಳೆ ತನ್ನ ವಿಮಾನ ರದ್ದಾದ ಕಾರಣ ಇಸ್ರೇಲ್‌ನಲ್ಲಿ ಸಿಲುಕಿದ್ದ ತನ್ನೆಲ್ಲ ಸಿಬ್ಬಂದಿಯನ್ನು ಇಥಿಯೋಪಿಯಾ ಏರ್‌ಲೈನ್ಸ್‌ ಮೂಲಕ ಏರ್‌ ಇಂಡಿಯಾ ತೆರವು ಮಾಡಿದೆ.

ಏರ್‌ ಇಂಡಿಯಾ ದಿಲ್ಲಿಯಿಂದ ಟೆಲ್ ಅವೀವ್‌ಗೆ ವಾರಕ್ಕೆ 5 ದಿನ ವಿಮಾನ ಸಂಚಾರ ನಡೆಸುತ್ತವೆ. ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ- ಇವು ವಿಮಾನ ಸಂಚಾರದ ದಿನಗಳಾಗಿವೆ. ‘ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ ವಿಮಾನ ಸಂಚಾರ ರದ್ದು ಮಾಡಲಾಗಿದೆ. ಈ ಅವಧಿಯಲ್ಲಿ ಬುಕಿಂಗ್ ದೃಢಪಡಿಸಿದ ಪ್ರಯಾಣಿಕರಿಗೆ ಏರ್‌ಲನ್‌ನಿಂದ ಸಾಧ್ಯವಿರುವ ಎಲ್ಲ ನೆರವನ್ನು ನಾವು ನೀಡುತ್ತೇವೆ’ ಎಂದು ಏರ್‌ ಇಂಡಿಯಾ (Air India) ವಕ್ತಾರರು ತಿಳಿಸಿದ್ದಾರೆ.

Tap to resize

Latest Videos

ನೋಡ ನೋಡುತ್ತಿದ್ದಂತೆ ಎಲ್ಲ ಮಣ್ಣಾದವು... ಅಫ್ಘಾನಿಸ್ತಾನ ಭೂಕಂಪ ಸಾವಿನ ಸಂಖ್ಯೆ 2000ಕ್ಕೇರಿಕೆ

ನೆರವು ಬೇಕಿದ್ದರೆ ಭಾರತದ ದೂತಾವಾಸ ಸಂಪರ್ಕಿಸಿ

ಕೊಚ್ಚಿ: ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರು ಯಾವುದೇ ನೆರವು ಬೇಕಿದ್ದರೆ, ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಂಪರ್ಕಿಸಬಹುದು. ಅವರಿಗೆ ಎಲ್ಲಾ ಅಗತ್ಯ ನೆರವು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್‌ (V. Muralidharan), ‘ಎಲ್ಲಾ ಭಾರತೀಯರಿಗೂ ನೀವಿರುವ ಸ್ಥಳದಲ್ಲೇ ಸುರಕ್ಷಿತವಾಗಿರಿ ಮತ್ತು ಭಾರತೀಯ ರಾಯಭಾರ ಕಚೇರಿ ಜೊತೆ ಸಂಪರ್ಕದಲ್ಲಿರಿ ಎಂದು ನಾವು ಮನವಿ ಮಾಡುತ್ತೇವೆ. ಯಾವುದೇ ನೆರವು ಬೇಕಿದ್ದರೆ ಭಾರತೀಯರು ಯಾವುದೇ ಸಮಯದಲ್ಲಿ ರಾಯಭಾರ ಕಚೇರಿ ನೆರವು ಕೋರಬಹುದು’ ಎಂದು ಹೇಳಿದ್ದಾರೆ.

ವಿದೇಶದ ಅತಿ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ: ಆ.18ರಿಂದ ಭಕ್ತರಿಗೆ ಮುಕ್ತ ಪ್ರವೇಶ

ಭಾರತ ಇಸ್ರೇಲ್‌ ರಾಜಧಾನಿ ಟೆಲ್‌ ಅವಿವ್‌ನಲ್ಲಿ(Tel aviva) ತನ್ನ ರಾಯಭಾರ ಕಚೇರಿ ಹೊಂದಿದೆ. ಜೊತೆಗೆ ಪ್ಯಾಲೆಸ್ತೀನ್‌ನಲ್ಲೂ ತನ್ನ ಪ್ರತಿನಿಧಿ ಕಚೇರಿ ಹೊಂದಿದೆ. ಇಸ್ರೇಲ್‌ನಲ್ಲಿ 18000 ಭಾರತೀಯರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುತೇಕರು ಐಟಿ(IT) , ನರ್ಸ್‌ (Nurse), ವಜ್ರದ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಮತ್ತು ವಿದ್ಯಾರ್ಥಿಗಳಾಗಿದ್ದಾರೆ.

ಯಾವುದಿದು ಹಮಾಸ್‌ ಉಗ್ರ ಸಂಘಟನೆ?

ಪ್ಯಾಲೆಸ್ತೀನ್‌ನ ಉಗ್ರ ಸಂಘಟನೆ ಹಾಗೂ ರಾಜಕೀಯ ಪಕ್ಷ. ಇಸ್ಲಾಮಿಕ್‌ ಮೌಲ್ವಿಯೊಬ್ಬರು 1987ರಲ್ಲಿ ಈ ಸಂಘಟನೆ ಹುಟ್ಟು ಹಾಕಿದರು. ಗಾಜಾ ಪಟ್ಟಿಯಲ್ಲಿ 20 ಲಕ್ಷ ಪ್ಯಾಲೆಸ್ತೀಯರನ್ನು ಈ ಸಂಘಟನೆ ಆಳುತ್ತಿದೆ. ಇಸ್ರೇಲ್‌ ವಿರುದ್ಧ ಶಸ್ತ್ರಸಜ್ಜಿತ ಹೋರಾಟದಲ್ಲಿ ನಿರತವಾಗಿದೆ. 12ಕ್ಕೂ ಹೆಚ್ಚು ದೇಶಗಳು ಹಮಾಸ್‌ ಅನ್ನು ಉಗ್ರ ಸಂಘಟನೆ ಎಂದು ಘೋಷಣೆ ಮಾಡಿವೆ. ಕೆಲವೊಂದು ದೇಶಗಳು ಹಮಾಸ್‌ನ ಮಿಲಿಟರಿ ವಿಭಾಗಕ್ಕೆ ಮಾತ್ರ ಆ ಪಟ್ಟ ಕಟ್ಟಿವೆ. ಇರಾನ್‌ ಸರ್ಕಾರ ಹಮಾಸ್‌ಗೆ ಹಣಕಾಸು ಹಾಗೂ ಸಾಮಗ್ರಿ ನೆರವು ನೀಡುತ್ತದೆ. ಈ ಸಂಘಟನೆಯ ಉನ್ನತ ನಾಯಕರಿಗೆ ಟರ್ಕಿ ಆಶ್ರಯ ನೀಡಿದೆ ಎನ್ನಲಾಗಿದೆ

ಅಯ್ಯೋ ದೇವ್ರೆ... ಸತ್ತವರ ಶವ ಹೂಳೋ ಬದ್ಲು ತಿನ್ತಿದ್ರಾ ಯುರೋಪಿಯನ್ನರು?

click me!