ಬೈಸಾಕಿ ಹಬ್ಬದಂದೇ ದುರಂತ, ಉಧಮ್‌ಪುರ್ ಪಾದಾಚಾರಿ ಸೇತುವೆ ಕುಸಿತದಿಂದ 80 ಮಂದಿಗೆ ಗಾಯ!

Published : Apr 14, 2023, 06:02 PM IST
ಬೈಸಾಕಿ ಹಬ್ಬದಂದೇ ದುರಂತ, ಉಧಮ್‌ಪುರ್ ಪಾದಾಚಾರಿ ಸೇತುವೆ ಕುಸಿತದಿಂದ 80 ಮಂದಿಗೆ ಗಾಯ!

ಸಾರಾಂಶ

ಗುಜರಾತ್‌ನ ಮೊರ್ಬಿ ಸೇತುವೆ ದುರಂತದ ಬಳಿಕ ಇದೀಗ ಅದೇ ರೀತಿ ಮತ್ತೊಂದು ಸೇತುವೆ ದುರಂತ ನಡೆದಿದೆ ಉಧಮಪುರದಲ್ಲಿ ಬೈಸಾಕಿ ಹಬ್ಬದಂದು ಪಾದಾಚಾರಿ ಸೇತುವೆ ಕುಸಿದು 80ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಧಮಪುರ್(ಏ.14): ದೇಶದ ಬಹುತೇಕ ಭಾಗದಲ್ಲಿ ಬೈಸಾಕಿ ಹಬ್ಬ ಆಚರಿಸಲಾಗುತ್ತಿದೆ.ಹೆಚ್ಚಾಗಿ ಉತ್ತರ ಭಾರತದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿದೆ. ಆದರೆ ಇದೇ ದಿನ ಪಾದಾಚಾರಿ ಸೇತುವೆ ಕುಸಿದು 80ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಮಪುರದಲ್ಲಿ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪಾದಾಚಾರಿ ಸೇತುವೆಗೆ ನುಗ್ಗಿದ್ದಾರೆ. ಇದರಿಂದ ಸೇತುವೆ ಮುರಿದು ಕೆಳಕ್ಕೆ ಬಿದ್ದಿದೆ. ಅವಘಡದ ಸಂದರ್ಭದಲ್ಲಿ ಸೇತುವೆ ಮೇಲಿದ್ದ ಹಲವರು ಗಂಭೀರ ಗಾಯಗೊಂಡಿದ್ದಾರೆ. ಇದೀಗ ಭಾರತೀಯ ಸೇನೆ, ಪೊಲೀಸ್ ಹಾಗೂ ರಕ್ಷಾ ತಂಡಗಳು ಸ್ಥಳಕ್ಕೆ ಆಗಮಿಸಿ, ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಬೇನಿ ಸಂಗಮ್ ಪಾದಾಚಾರಿ ಸೇತುವೆ ಕುಸಿದಿದೆ. 20 ರಿಂದ 25ರ ಮಂದಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಇದೀಗ ಪೊಲೀಸರು, ರಕ್ಷಣಾ ತಂಡಗಳು ಸ್ಥಳದಲ್ಲಿ ನಿಂತು ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಗಾಯಗೊಂಡ ಹಲವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಣ್ಣ ಪ್ರಮಾಣದಲ್ಲಿ ಗಾಯಗೊಂಡವನ್ನು ಚೆನಾನಿಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

 

 

Bihar: ಉದ್ಘಾಟನೆಗೂ ಮುನ್ನವೇ ಎರಡು ತುಂಡಾದ 13 ಕೋಟಿ ರೂ. ವೆಚ್ಚದ ಸೇತುವೆ

ಪಾದಾಚಾರಿ ಸೇತುವೆ ಕುಸಿತ ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಮೊರ್ಬಿ ತೂಗು ಸೇತುವೆ ನೆನಪಿಸುತ್ತಿದೆ. ಗುಜರಾತ್‌ನ ಮೋರ್ಬಿ ತೂಗುಸೇತುವೆ ದುರಂತದಲ್ಲಿ  135 ಜನರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಸಾವು ಬದುಕಿನ ನಡುವೆ ಹೋರಾಡಿದ 170 ಜನರನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 2 ವರ್ಷದ ಪುಟಾಣಿಯಿಂದ ಹಿಡಿದು ಶಾಲಾ ಮಟ್ಟದ ವರೆಗಿನ 47 ಮಕ್ಕಳೂ ದುರ್ಮರಣಕ್ಕೀಡಾಗಿದ್ದಾರೆ. 143 ವರ್ಷಗಳಷ್ಟುಹಳೆಯ ಸೇತುವೆ ಕುಸಿತಕ್ಕೆ, ಒಂದೇ ಬಾರಿಗೆ ಸೇತುವೆ ಮೇಲೆ ಭಾರೀ ಪ್ರಮಾಣದ ಜನರು ನುಗ್ಗಿದ್ದು ಮತ್ತು ಜನರ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಸೇತುವೆ ನಿರ್ವಹಣೆ ಹೊಣೆ ಹೊತ್ತ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸೇತುವೆಯ ನಿರ್ವಹಣೆ ಹೊಣೆ ಹೊತ್ತಿದ್ದ ಒರೇವಾ ಗ್ರೂಪ್‌ನ ನಾಲ್ವರು ಸಿಬ್ಬಂದಿ ಸೇರಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

Morbi Accident: 'ಜಾಸ್ತಿ ಜಾಣತನ ತೋರಿಸ್ಬೇಡಿ..' ಗುಜರಾತ್‌ ಸರ್ಕಾರಕ್ಕೆ ಹೈಕೋರ್ಟ್‌ ಛೀಮಾರಿ!

ದೀಪಾವಳಿ ರಜೆ ಹಾಗೂ ಛಠ್‌ ಪೂಜೆ ಸಂಭ್ರಮದ ಕಾರಣ ಹೆಚ್ಚಿನ ಜನರು ಜೀರ್ಣೋದ್ಧಾರಗೊಂಡ ಸೇತುವೆ ನೋಡಲು ಭಾನುವಾರ ಸಂಜೆ ಜಮಾಯಿಸಿದ್ದರು. 20-25 ಜನರು ಒಮ್ಮೆಲೆ ಪ್ರವೇಶಿಸಲು ಅನುಮತಿ ನೀಡಬಹುದಾದ ಸೇತುವೆ ಮೇಲೆ 500 ಜನರು ಸೇರಿದ್ದು ಮತ್ತು ಕೆಲ ಯುವಕರು ಸೇತುವೆಯ ಕಬ್ಬಿಣದ ಬಲವಾಗಿ ಒದ್ದಿದ್ದು ಸೇತುವೆ ಕುಸಿದು ಬೀಳಲು ಕಾರಣ ಎನ್ನಲಾಗಿದೆ.ಮೊರ್ಬಿ ತೂಗುಸೇತುವೆ 143 ವರ್ಷ ಹಳೆಯ  ಸೇತುವೆ ಆಗಿತ್ತು. ಇದನ್ನು ನವೀಕರಣ ಹೆಸರಿನಲ್ಲಿ ಬಣ್ಣ ಬಳಿದು ಹೊಸದಾಗಿ ಮಾಡಲಾಗಿತ್ತು. ಆಧರೆ ಯಾವುದೇ ನವೀಕರಣ ಮಾಡಿರಲಿಲ್ಲ. ಇಲ್ಲಿಗೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಕುರಿತು ಯಾವುದೇ ಆಲೋಚನೆ ಮಾಡಿಲ್ಲ. ಹೀಗಾಗಿ ಈ ದುರಂತ ಸಂಭವಿಸಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ