Breaking: ದೆಹಲಿ ಅಕ್ರಮ ಮದ್ಯ ನೀತಿ ಹಗರಣ, ಸಿಬಿಐನಿಂದ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಮನ್ಸ್‌!

Published : Apr 14, 2023, 05:41 PM ISTUpdated : Apr 14, 2023, 06:10 PM IST
Breaking: ದೆಹಲಿ ಅಕ್ರಮ ಮದ್ಯ ನೀತಿ ಹಗರಣ, ಸಿಬಿಐನಿಂದ ದೆಹಲಿ ಸಿಎಂ ಕೇಜ್ರಿವಾಲ್‌ಗೆ ಸಮನ್ಸ್‌!

ಸಾರಾಂಶ

ದೆಹಲಿ ಅಕ್ರಮ ಮದ್ಯ ನೀತಿ ಹಗರಣ ಕೊನೆಗೂ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕಾಲ ಬುಡಕ್ಕೆ ಬಂದಿದೆ. ಸಿಬಿಐ ಶುಕ್ರವಾರ ಅರವಿಂದ್‌ ಕೇಜ್ರಿವಾಲ್‌ಗೆ ಸಮನ್ಸ್‌ ಜಾರಿ ಮಾಡಿದ್ದು ಏಪ್ರಿಲ್‌ 16ಕ್ಕೆ ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.  

ನವದೆಹಲಿ (ಏ.14): ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸಿಬಿಐ ನೋಟಿಸ್ ಜಾರಿ ಮಾಡಿದೆ. ಏಪ್ರಿಲ್‌ 16 ರಂದು ಸಿಬಿಐ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ವಿಚಾರಣೆಗೆ ಬರಬೇಕು ಎಂದು ಸಮನ್ಸ್‌ನಲ್ಲಿ ತಿಳಿಸಲಾಗಿದೆ. ಆಮ್ ಆದ್ಮಿ ಪಕ್ಷಕ್ಕೆ ಸಂಬಂಧಿಸಿದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ಈ ವರದಿ ಮಾಡಿದೆ. ಈ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈಗಾಗಲೇ ಇಡಿ ವಶದಲ್ಲಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಯೋಜಕ ಅರವಿಂದ್‌ ಕೇಜ್ರಿವಾಲ್‌ಗೆ ಸಮನ್ಸ್‌ ನೀಡಲಾಗಿದೆ. ಇದೀಗ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಈ ಕುರಿತು ಇಂದು ಸಂಜೆ 6 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜಯ್ ಸಿಂಗ್ ಟ್ವೀಟ್ ಮಾಡಿ ಇದೊಂದು ಕೆಟ್ಟ ಕೃತ್ಯ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ, “ದೌರ್ಜನ್ಯಗಳು ಖಂಡಿತವಾಗಿಯೂ ಕೊನೆಗೊಳ್ಳುತ್ತವೆ, ಅರವಿಂದ್ ಕೇಜ್ರಿವಾಲ್ ಅವರನ್ನು ಸಿಬಿಐಗೆ ಕರೆಸುವ ವಿಷಯದಲ್ಲಿ ನಾನು ಸಂಜೆ 6 ಗಂಟೆಗೆ ಪತ್ರಿಕಾಗೋಷ್ಠಿ ನಡೆಸುತ್ತೇನೆ ಎಂದು ಬರೆದಿದ್ದಾರೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ಈಗಾಗಲೇ ಜೈಲಿನಲ್ಲಿದ್ದಾರೆ. ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಬಂಧಿಸಿತ್ತು. ಆ ಬಳಿಕ ಮನೀಶ್ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಜೈಲಿನಲ್ಲಿಟ್ಟು ವಿಚಾರಣೆ ಆರಂಭಿಸಿದೆ. ಸಿಬಿಐ ಬಂಧನದಿಂದ ಜಾಮೀನು ಪಡೆದ ಬೆನ್ನಲ್ಲಿಯೇ ಇಡಿ ಅವರನ್ನು ವಶಕ್ಕೆ ಪಡೆದು ಬಂಧಿಸಿತ್ತು. ಈ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರು ಜಾಮೀನು ಕೋರಿ ರೌಸ್ ಅವೆನ್ಯೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಇನ್ನೂ ಸ್ವೀಕಾರ ಮಾಡಿಲ್ಲ.

ಸಿಬಿಐ ಬಂಧನದ ಬಳಿಕ ಇದೀಗ ಇಡಿ ಸರದಿ, ಸಿಸೋಡಿಯಾ ಮತ್ತೆ ಅರೆಸ್ಟ್ ಆಗಲಿದ್ದಾರೆ, ಆಪ್ ಭವಿಷ್ಯ!

ಏನಿದು ಅಕ್ರಮ ಮದ್ಯ ನೀತಿ ಪ್ರಕರಣ: 2021ರ ನವೆಂಬರ್‌ 17 ರಂದು ದೆಹಲಿ ಸರ್ಕಾರ ಹೊಸ ಮದ್ಯ ನೀತಿ ಪ್ರಕರಣವನ್ನು ಅನುಷ್ಠಾನ ಮಾಡಿತ್ತು.ಈ ನೀತಿಯ ಅನುಷ್ಠಾನದ ನಂತರ, ಆದಾಯ ಹೆಚ್ಚಳದ ಜೊತೆಗೆ ಮಾಫಿಯಾ ಆಡಳಿತವನ್ನು ಕೊನೆಗೊಳಿಸಲಿದ್ದೇವೆ ಎಂದು ದೆಹಲಿ ಸರ್ಕಾರ ಹೇಳಿತ್ತು. ಆದರೆ, ಸಂಪೂರ್ಣ ಅದರ ವಿರುದ್ಧವಾಗಿ ನಡೆದಿತ್ತು. ದೆಹಲಿ ಸರ್ಕಾರಕ್ಕೆ ಆದಾಯ ನಷ್ಟವಾಗಿದ್ದು ಮಾತ್ರವಲ್ಲದೆ, ಅಕ್ರಮದ ವಾಸನೆ ಬಡಿದಿದ್ದವು. ಜುಲೈ 2022 ರಲ್ಲಿ, ದೆಹಲಿಯ ಆಗಿನ ಮುಖ್ಯ ಕಾರ್ಯದರ್ಶಿ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ವರದಿಯನ್ನು ಈ ಕುರಿತಾಗಿ ಸಲ್ಲಿಸಲಾಗಿತ್ತು. ಇದರಲ್ಲಿ ಮನೀಶ್ ಸಿಸೋಡಿಯಾ ಮದ್ಯದ ವ್ಯಾಪಾರಿಗಳಿಗೆ ಅನಗತ್ಯ ಪ್ರಯೋಜನಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 

ಮನೀಶ್ ಸಿಸೋಡಿಯಾಗೆ ತಿಹಾರ್ ಜೈಲೇ ಗತಿ, ಜಾಮೀನು ಅರ್ಜಿ ವಿಚಾರಣೆ ಮಾ.10ಕ್ಕೆ ಮುಂದೂಡಿಕೆ!

ಈ ವರದಿಯನ್ನು ಆಧರಿಸಿ ಲೆಫ್ಟಿನೆಂಟ್‌ ಗವರ್ನರ್‌ ಪ್ರಕರಣವನ್ನು ಸಿಬಿಐಗೆ ವರ್ಗಾವಣೆ ಮಾಡಿದ್ದರು. ಎಲ್‌ಜಿ ಶಿಫಾರಸಿನ ಬೆನ್ನಲ್ಲಿಯೇ 2022ರ ಆಗಸ್ಟ್‌ 17 ರಂದು ಕೇಸ್‌ ದಾಖಲು ಮಾಡಿ ಸಿಬಿಐ ವಿಚಾರಣೆ ಆರಂಭ ಮಾಡಿತ್ತು. ಈ ಪ್ರಕರಣದಲ್ಲಿ ಮನೀಷ್‌ ಸಿಸೋಡಿಯಾ ಸೇರಿದಂತೆ 15 ಮಂದಿಯನ್ನು ಆರೋಪಿಗಳು ಎಂದು ಹೇಳಲಾಗಿದೆ.ಆಗಸ್ಟ್‌ 22 ರಂದು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನೂ ದಾಖಲು ಮಾಡಿತ್ತು.  ಸುಮಾರು ಆರು ತಿಂಗಳ ತನಿಖೆಯ ನಂತರ, ಫೆಬ್ರವರಿ ತಿಂಗಳಲ್ಲಿ ಸಿಬಿಐ ಮನೀಶ್ ಸಿಸೋಡಿಯಾ ಅವರನ್ನು ಬಂಧಿಸಿದ್ದು, ಅಂದಿನಿಂದ ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

MNREGA Row: ಕಾಂಗ್ರೆಸ್‌ಗೆ ಯಾವುದೇ ನೀತಿ ಇಲ್ಲ, ಗದ್ದಲ ಕೇವಲ ರಾಜಕೀಯ: ಶಿವರಾಜ್ ಸಿಂಗ್ ಚೌಹಾಣ್ ಕಿಡಿ
ಮಾತೃಭಾಷೆ ಮಾತನಾಡುತ್ತಿಲ್ಲ ಎಂದು 6 ವರ್ಷದ ಮಗಳನ್ನೇ ಕೊಂದ ಪಾಪಿ ತಾಯಿ