sanjoy roy mother ಖಾಸಗಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಂಜಯ್ ರಾಯ್ ತಾಯಿ, ನನ್ನ ಮಗ ಯಾರೊಂದಿಗೆ ಅನುಚಿತವಾಗಿ ವರ್ತನೆ ತೋರಿಲ್ಲ. ಯಾರೋ ಪ್ರಭಾವಿಗಳು ಈ ಕೇಸ್‌ನಲ್ಲಿ ಮಗನನ್ನು ಸಿಲುಕಿ ಹಾಕಿಸಿರಬಹುದು ಎಂದು ಹೇಳಿದ್ದಾರೆ.
ನವದೆಹಲಿ (ಆ.23): ಕೋಲ್ಕತ್ತಾದಲ್ಲಿ ಟ್ರೇನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಂದ ಆರೋಪಿ ಸಂಜಯ್ ರಾಯ್ ಅವರ ತಾಯಿ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ನನ್ನ ಮಗ ಯಾರಿಗೂ ತೊಂದರೆ ಕೊಡುವ ವ್ಯಕ್ತಿಯಲ್ಲ ಎಂದು ಹೇಳಿದದಾರೆ. ನಾನು ಆತನನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಬೆಳೆಸಿದ್ದರೆ, ಬಹುಶಃ ಇಂಥ ಘಟನೆಯನ್ನು ತಡೆಯಬಹುದಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ. ಇದರೊಂದಿಗೆ ನನ್ನ ಮಗನನ್ನು ಯಾರೋ ಪ್ರಭಾವಿಗಳು ಈ ಕೇಸ್‌ನಲಲ್ಲಿ ಸಿಲುಕಿಸಿರಬಹುದು ಎಂದು ಹೇಳಿದ್ದು, ಹಾಗೇನಾದರೂ ಈತನೇ ತಪ್ಪು ಮಾಡಿದ್ದಲ್ಲಿ ಆವನಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. "ನಾನು ಇನ್ನೂ ಕಟ್ಟುನಿಟ್ಟಾಗಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ, ಆತನ ತಂದೆ ತುಂಬಾ ಕಟ್ಟುನಿಟ್ಟಾಗಿದ್ದರು, ತಂದೆಯನ್ನು ಆತ ಪೂಜಿಸುತ್ತಿದ್ದ. ಆದರೆ, ನನ್ನ ಗಂಡನ ಸಾವಿನ ಬಳಿಕ ಆ ಸುಂದರ ಕುಟುಂಬ ನನಗೆ ನೆನಪು ಮಾತ್ರ..' ಎಂದು ಹೇಳಿದ್ದಾರೆ.
"ಇದನ್ನು ಮಾಡಲು ಅವನ ಮೇಲೆ ಯಾರು ಪ್ರಭಾವ ಬೀರಿದ್ದಾರೆಂದು ನನಗೆ ತಿಳಿದಿಲ್ಲ ... ಯಾರಾದರೂ ಅವನನ್ನು ಈ ಕೃತ್ಯ ಮಾಡುವಂತೆ ಒತ್ತಾಯ ಮಾಡಿದ್ದರೆ, ಆತನಿಗೂ ಶಿಕ್ಷೆಯಾಗುತ್ತದೆ" ಎಂದು ಅವರು ಹೇಳಿದರು. ಅವರ ತಾಯಿಯ ಪ್ರಕಾರ, ಸಂಜಯ್ ರಾಯ್ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ, ಬಾಕ್ಸಿಂಗ್ ಕಲಿಯುತ್ತಿದ್ದ. ಅವರು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ನ ಭಾಗವಾಗಿದ್ದರು ಮತ್ತು ಶಾಲೆಯಲ್ಲಿ ಟಾಪರ್ ಕೂಡ ಆಗಿದ್ದ ಎಂದಿದ್ದಾರೆ. ನನ್ನನ್ನು ಆತ ಚೆನ್ನಾಗಿ ನೋಡಿಕೊಳ್ಳುತ್ತಲೇ ಇದ್ದ. ನನಗೆ ಅಡುಗೆಯನ್ನೂ ಮಾಡಿ ಕೊಡುತ್ತಿದ್ದ. ಬೇಕಾದರೆ, ನೀವು ಅಕ್ಕಪಕ್ಕದವರನ್ನೇ ಕೇಳಿ. ಯಾರೊಂದಿಗೂ ಆತ ಅನುಚಿತವಾಗಿ ವರ್ತನೆ ಮಾಡಿಲ್ಲ ಎಂದು ಹೇಳಿದ್ದಾರೆ. ಹಾಗೇನಾದರೂ ನಾನು ಆತನನ್ನು ಭೇಟಿಯಾದರೆ, ನಾನು ಕೇಳುವ ಮೊದಲ ಪ್ರಶ್ನೆ ಏನೆಂದರೆ, ಮಗನೇ ನೀನ್ಯಾಕೆ ಹೀಗೆ ಮಾಡಿದೆ? ಎಂದು, ನನ್ನ ಮಗ ಎಂದಿಗೂ ಹೀಗೆ ಇದ್ದಿರಲಿಲ್ಲ ಎಂದು ಅವರ ಹೇಳಿದ್ದಾರೆ.
ಅಚ್ಚರಿಯ ವಿಚಾರವೇನೆಂದರೆ, ತನ್ನ ಮಗ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಸಿವಿಕ್ ವಾಲಂಟಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನುವುದೇ ತಾಯಿಗೆ ತಿಳಿದಿರಲಿಲ್ಲ.31 ವರ್ಷ ವಯಸ್ಸಿನ ವೈದ್ಯೆಯ ಅರೆಬೆತ್ತಲೆ ದೇಹವು ಆಗಸ್ಟ್ 9 ರಂದು ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಮರುದಿನ ರಾಯ್‌ನನ್ನು ಬಂಧಿಸಲಾಗಿತ್ತು. ಆತನ ಬ್ಲೂಟೂತ್ ಹೆಡ್‌ಸೆಟ್ ಕೂಡ ಅಪರಾಧದ ಸ್ಥಳದಲ್ಲಿ ಪತ್ತೆಯಾಗಿದೆ. "ಅವನು ಆರ್‌ಜಿ ಕರ್ ಆಸ್ಪತ್ರೆಗೆ ಹೋಗುತ್ತಾನೆ ಅನ್ನೋದೇ ನನಗೆ ತಿಳಿದಿರಲಿಲ್ಲ. ಆದರೆ, ಆ ರಾತ್ರಿ ಅವನು ಊಟ ಮಾಡಿರಲಿಲ್ಲ" ಎಂದು ತಾಯಿ ಹೇಳಿದ್ದಾರ.ೆ ತನ್ನ ಮಗ ವೇಶ್ಯೆಯರನ್ನು ಭೇಟಿಯಾಗುತ್ತಿದ್ದ ಅನ್ನೋ ವರದಿಗಳನ್ನು ಅವರು ನಿರಾಕರಿಸಿದರು.
ಉತ್ತರ ಕೋಲ್ಕತ್ತಾದ 'ರೆಡ್ ಲೈಟ್ ಏರಿಯಾ' ಸೋನಗಾಚಿಗೆ ರಾಯ್ ಪದೇ ಪದೇ ಭೇಟಿ ನೀಡುತ್ತಿದ್ದ ಮತ್ತು ವಿಪರೀತ ಮದ್ಯ ಸೇವಿಸುತ್ತಿದ್ದ ಎಂದು ಈ ಹಿಂದೆ ವರದಿಯಾಗಿತ್ತು. ಅಲ್ಲದೆ, ರಾಯ್‌ಗೆ ಪೋರ್ನ್ ನೋಡುವ ಚಟ ಕೂಡ ಇತ್ತು. ಮೊಬೈಲ್ ಫೋನ್‌ನಲ್ಲಿ ಇಂಥ ಹಲವಾರು ಕ್ಲಿಪ್‌ಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಲ್ಕತ್ತಾದ ಆಸ್ಪತ್ರೆಯಲ್ಲೇ ಟ್ರೈನಿ ವೈದ್ಯೆಯ ಅತ್ಯಾಚಾರವೆಸಗಿ ಕೊಲೆ: ಶಂಕಿತನ ಸುಳಿವು ನೀಡಿದ ಬ್ಲೂಟುಥ್
ಮೊದಲ ಪತ್ನಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ ರಾಯ್ ಕುಡಿತದ ಚಟಕ್ಕೆ ಬಿದ್ದಿದ್ದರು ಎಂದು ಅವರ ತಾಯಿ ಹೇಳಿದ್ದಾರೆ. "ಸಂಜಯ್ ಅವರ ಮೊದಲ ಹೆಂಡತಿ ಒಳ್ಳೆಯ ಹುಡುಗಿ. ಅವರು ಸಂತೋಷವಾಗಿದ್ದರು. ಇದ್ದಕ್ಕಿದ್ದಂತೆ, ಆಕೆಗೆ ಕ್ಯಾನ್ಸರ್ ಎಂದು ಗೊತ್ತಾಯಿತು. ತನ್ನ ಹೆಂಡತಿಯ ಮರಣದ ನಂತರ ಖಿನ್ನತೆಗೆ ಒಳಗಾಗಿದ್ದ, ಬಳಿಕ ಕುಡಿಯಲು ಶುರು ಮಾಡಿದ್ದ' ಎಂದು ಹೇಳಿದ್ದಾರೆ. ಈ ನಡುವೆ ರಾಯ್ ನಾಲ್ಕು ವಿವಾಹವಾಗಿದ್ದ ಎನ್ನುವ ವರದಿಗಳೂ ಇವೆ. ತನ್ನ ಅಳಿಯಂದಿರು ಮತ್ತು ಹೆಣ್ಣುಮಕ್ಕಳು ತನ್ನನ್ನು ತೊರೆದಿದ್ದರಿಂದ ತಾನು ಅಸಹಾಯಕಳಾಗಿದ್ದೇನೆ ಎಂದು ಆರೋಪಿಯ ತಾಯಿ ತಿಳಸಿದ್ದಾರೆ. "ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವುದು ಹೇಗೆ ಎಂದು ನನಗೆ ತಿಳಿದಿಲ್ಲ, ನಾನು ಒಬ್ಬಂಟಿಯಾಗಿದ್ದೇನೆ, ನನ್ನ ಹೆಣ್ಣುಮಕ್ಕಳು ನನ್ನನ್ನು ತೊರೆದಿದ್ದಾರೆ" ಎಂದು ಹೇಳಿದ್ದಾರೆ.
ನನ್ನ ಮಗಳಿಗೆ ನೋವಾಗುತ್ತೆ... ಪರಿಹಾರ ನಿರಾಕರಿಸಿದ ಕೋಲ್ಕತ್ತಾ ಟ್ರೈನಿ ವೈದ್ಯೆಯ ತಂದೆ