ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳ ಹಾಜರಿಗೆ ಕೋಟ್೯ ಸೂಚನೆ!

By Suvarna NewsFirst Published Sep 16, 2020, 4:01 PM IST
Highlights

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ತೀರ್ಪು ವಿಚಾರ| ಸೆಪ್ಟೆಂಬರ್‌ 30ರಂದು  ತೀರ್ಪು ಪ್ರಕಟಿಸಲಿರುವ  ಸಿಬಿಐ ವಿಶೇಷ ನ್ಯಾಯಾಲಯ| ಆರೋಪಿಗಳ ಹಾಜರಿಗೆ ಕೋಟ್೯ ಸೂಚನೆ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಸೆಪ್ಟೆಂಬರ್‌ 30ರಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಹೀಗಿರುವಾಗ ಪ್ರಕರಣದ ಆರೋಪಿಗಳಾದ ಬಿಜೆಪಿ ಹಿರಿಯ ಮುಖಂಡ ಎಲ್‌ ಕೆ ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳ ಹಾಜರಿಗೆ ಕೋಟ್೯ ಸೂಚನೆ ನೀಡಿದೆ. 

ಮಾಸಾಂತ್ಯಕ್ಕೆ ಬಾಬ್ರಿ ತೀರ್ಪು ಸಂಭವ: ಅಡ್ವಾಣಿಗೆ ಢವ ಢವ!

ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಎಸ್‌ ಕೆ ಯಾದವ್‌ ಅವರಿಂದ ತೀರ್ಪು ಪ್ರಕಟಗೊಳ್ಳಲಿದ್ದು, ಮಾಜಿ ಉಪ ಪ್ರಧಾನಿ ಎಲ್‌ ಕೆ ಅಡ್ವಾಣಿ, ಕಲ್ಯಾಣ್‌ ಸಿಂಗ್, ಮುರಳಿ ಮನೋಹರ ಜೋಷಿ, ಉಮಾ ಭಾರತಿ ಪ್ರಮುಖ ಆರೋಪಿಗಳಾಗಿದ್ದಾರೆ. 

ಪ್ರಕರಣದಲ್ಲಿ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌, ಬಿಜೆಪಿ ಮುಖಂಡರಾದ ವಿನಯ್‌ ಕಟಿಯಾರ್‌, ಸಾಕ್ಷಿ ಮಹಾರಾಜ್‌ ಮೊದಲಾದವರು ಕೂಡ ಪ್ರಮುಖ ಆಪಾದಿತರಾಗಿದ್ದಾರೆ.

ಸಿಬಿಐ ಬಾಬ್ರಿ ಧ್ವಂಸದ ತನಿಖೆ ನಡೆಸಿ 350 ಸಾಕ್ಷಿಗಳನ್ನು ಹಾಜರುಪಡಿಸಿತ್ತು ಹಾಗೂ 600 ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿತ್ತು.

ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!

ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ ಎಂದು 1992ರ ಡಿಸೆಂಬರ್‌ 6ರಂದು ‘ಕರಸೇವಕರು’ ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಇದಕ್ಕೆ ಅಡ್ವಾಣಿ ಹಾಗೂ ಇತರ ಬಿಜೆಪಿ ನಾಯಕರೇ ಕುಮ್ಮಕ್ಕು ನೀಡಿದ್ದರು ಎಂದು ಆಪಾದಿಸಲಾಗಿತ್ತು.

ಈಗಾಗಲೇ ಜನ್ಮಭೂಮಿ ವಿವಾದ ಬಗೆಹರಿದಿದ್ದು, ವಿವಾದಿತ ಸ್ಥಳ ರಾಮಜನ್ಮಭೂಮಿ ಎಂದು ಸುಪ್ರೀಂ ಕೋರ್ಟ್‌ ಕಳೆದ ವರ್ಷವೇ ತೀರ್ಪು ನೀಡಿತ್ತು. ಆಗಸ್ಟ್‌ 5ರಂದು ರಾಮಮಂದಿರ ನಿರ್ಮಾಣದ ಭೂಮಿಪೂಜೆ ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೆರವೇರಿತ್ತು.

click me!