ಬಾಬಾ ರಾಮ್‌ದೇವ್ ವಿರುದ್ಧ ದೇಶಾದ್ಯಂತ ವೈದ್ಯರ 'ಬ್ಲಾಕ್ ಡೇ' ಪ್ರತಿಭಟನೆ!

By Suvarna NewsFirst Published Jun 1, 2021, 5:54 PM IST
Highlights
  • ಅಲೋಪಥಿ vs ಆಯುರ್ವೇದಾ ಜಟಾಪಟಿ ಮತ್ತಷ್ಟು ತೀವ್ರ
  • ಬಾಬಾ ರಾಮ್‌ದೇವ್ ವಿರುದ್ಧ ದೇಶಾದ್ಯಂತ ವೈದ್ಯರ ಪ್ರತಿಭಟನೆ
  • ರಾಮ್‌ದೇವ್ ಹೇಳಿಕೆ ವಿರೋಧಿಸಿ ದೇಶದಲ್ಲಿ ಬ್ಲಾಕ್ ಡೇ ಆಚರಣೆ

ನವದೆಹಲಿ(ಜೂ.01): ಕೊರೋನಾ ವೈರಸ್ ಸವಾಲಿನ ನಡುವೆ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಆಲೋಪಥಿ ವೈದ್ಯ ಪದ್ಧತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನಡಿದ ಯೋಗ ಗುರು ಬಾಬಾ ರಾಮ್‌ದೇವ್ ವಿರುದ್ಧ ಭಾರತದಲ್ಲಿ ವೈದ್ಯರು ಬ್ಲಾಕ್ ಡೇ ಪ್ರತಿಭಟನೆ ನಡೆಸಿದ್ದಾರೆ.

1,000 ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಪರಿವರ್ತನೆ; ಹೊಸ ಬಾಂಬ್ ಸಿಡಿಸಿದ ಬಾಬಾ!

ಅಲೋಪಥಿ ಮೂರ್ಖ ಪದ್ಧತಿ, ಕೊರೋನಾ ವೈರಸ್ ನಿಯಂತ್ರಣ ಮಾಡಲು ಸಾಧ್ಯವಾಗದ ಅಲೋಪಥಿಯಿಂದ ಯಾವ ಲಾಭವೂ ಇಲ್ಲ. ಇದೆಲ್ಲವೂ ವೈದ್ಯಕೀಯ ಹಗರಣ ಎಂದು ರಾಮ್‌ದೇವ್ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಕ್ಷಮೆ ಕೇಳುವಂತೆ ಸೂಚಿಸಿತ್ತು. ಆದರೆ ರಾಮ್‌ದೇವ್ ಹೊಸ ಹೊಸ ವಿದಾದಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ. ಹೀಗಾಗಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಸಂಘ ಬ್ಲಾಕ್ ಡೇ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು.

ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಪ್ರತಿಭಟನೆ ನಡೆಸುವಂತೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ ಅಸೋಯೇಶನ್ ಸೂಚನೆಯಂತೆ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಕೊರೋನಾ ಸೋಂಕಿತರನ್ನು ಪ್ರಾಣವನ್ನೇ ಲೆಕ್ಕಿಸಿದ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ರಾಮ್‌ದೇವ್ ಅವಮಾನ ಮಾಡಿದ್ದಾರೆ. ತಕ್ಷಣವೇ ಬಂಧಿಸುವಂತೆ ವೈದ್ಯರು ಆಗ್ರಗಿಸಿದ್ದಾರೆ.

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!

ಇಂದು(ಜೂ.01) ಬೆಳಗ್ಗೆಯಿಂದಲೇ ವೈದ್ಯರು ಪ್ರತಿಭಟನೆ ಆರಂಭಿಸಿದ್ದಾರೆ. ಸಂಕಷ್ಟ ಸಮಯದಲ್ಲಿ ರಾಮ್‌ದೇವ್ ಹೇಳಿಕೆ ಅಲೋಪಥಿ ವೈದ್ಯರ ಮನೋಸ್ಥೈರ್ಯ ಕುಗ್ಗಲಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಹೀಗಾಗಿ ಹೇಳಿಕೆ ಹಿಂಪಡೆಯಬೇಕು. ಕ್ಷಮೇ ಕೇಳಬೇಕು, ಇವೆರಡೂ ಒಪ್ಪದಿದ್ದರೆ, ರಾಮ್‌ದೇವ್ ಅವರನ್ನು ಬಂಧಿಸುವಂತೆ ವೈದ್ಯರು ಆಗ್ರಹಿಸಿದ್ದಾರೆ.

click me!