ಮಗಳ ಮದುವೆ, ಲಾಕ್‌ಡೌನ್ ನಿಯಮ ಗಾಳಿಗೆ ತೂರಿದ ಬಿಜೆಪಿ ಶಾಸಕನಿಗೆ ಕಂಟಕ!

By Suvarna NewsFirst Published Jun 1, 2021, 4:57 PM IST
Highlights

* ಕೊರೋನಾ ಮಾರ್ಗಸೂಚಿ ಗಾಳಿಗೆ ತೂರಿದ ಶಾಸಕ

* ಮಗಳ ಮದುವೆಗೆ ಭರ್ಜರಿ ಸ್ಟೆಪ್ಸ್

* ವೈರಲ್ ಆದ ವಿಡಿಯೋ, ಶಾಸಕನಿಗೆ ಕಂಟಕ

ಮುಂಬೈ(ಜೂ.01): ಕೊರೋನಾದಂತಹ ವಿಷಮ ಪರಿಸ್ಥಿತಿಯಲ್ಲಿ ಲಾಖ್‌ಡೌನ್ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭದಲ್ಲಿ ಭಾಗಿಯಾದ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಪಿಂಪ್ರಿ-ಚಿಂಚ್ವಾಡ್ ಕ್ಷೇತ್ರದ ಶಾಸಕ ಮಹೇಶ್ ಲಾಂಡ್ಗೆ ಸೇರಿ 60 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಕಾರ್ಯಕ್ರಮದ ವಿಡಿಯೋ ಕೂಡಾ ವೈರಲ್ ಆಗಿದ್ದು, ಇದರಲ್ಲಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿಡುವುದು ಸ್ಪಷ್ಟವಾಗಿದೆ.

ಭೋಸ್ರಿ ಪೊಲೀಸ್ ಠಾಣೆಯ ಸೀನಿಯರ್ ಇನ್ಸ್‌ಪೆಕ್ಟರ್ ಶಂಕರ್ ಅವ್ತಡೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಸ್‌ ದಾಖಲಿಸಲಾದ ಇತರರಲ್ಲಿ ಶಾಸಕನ ಸಹೋದರ ಸಚಿನ್ ಲಾಂಡ್ಗೆ, ಅಜಿತ್ ಸಸ್ತೆ, ಕುಂದನ್ ಗಾಯಕ್ವಾಡ್, ರಾಹುಲ್ ಲಾಂಡ್ಗೆ, ದತ್ತಾ ಗವ್ಹಾಣೆ, ಗೋಪಿ ಕೃಷ್ಣ ಧಾವ್ಡೆ, ಸುನಿಲ್ ಲಾಂಡ್ಗೆ, ನಿತಿನ್ ಗೋಡ್ಸೆ ಹಾಗೂ ಪ್ರಜೋತೆ ಫುಜ್‌ ಹೆಸರಿದೆ ಎಂದಿದ್ದಾರೆ..

ಭೋಸ್ರೀ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 32 ವರ್ಷದ ಸುರೇಶ್ ನಾನಾ ವಾಗ್ಮೋರೆ ಈ ಬಗ್ಗೆ ದೂರು ದಾಖಲಿಸಿದ್ದರು. ಇನ್ನು ವೈರಲ್ ಆದ ವಿಡಿಯೀವನ್ನು ಕಳೆದ ಭಾನುವಾರ ಸಂಜೆ ಆರೂವರೆಯಿಂದ ರಾತ್ರಿ ಒಂಭತ್ತೂವರೆಯೊಳಗೆ ರೆಕಾರ್ಡ್‌ ಮಾಡಲಾಗಿತ್ತು. ಈ ವಿಡಿಯೋ ಲಾಂಡ್ಗೆ ಮನೆಯಲ್ಲೇ ತೆಗೆಯಲಾದ ಈ ವಿಡಿಯೋದಲ್ಲಿ ಎಲ್ಲರೂ ಕುಣಿಯುತ್ತಿರುವ ದೃಶ್ಯಗಳಿದ್ದವು.

ಇನ್ನು ಮಹಾರಾಷ್ಟ್ರದಲ್ಲಿ ಹೇರಲಾದ ಕೊರೋನಾ ಮಾರ್ಗಸೂಚಿ ಅನ್ವಯ ಯಾವುದೇ ಮದುವೆ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ಮಂದಿ ಭಾಗವಹಿಸುವಂತಿಲ್ಲ. ನಿಯಮಗಳನ್ವಯ ಕಾರ್ಯಕ್ರಮದ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೂ ಅತೀ ಅಗತ್ಯವಾಗಿದೆ. ಆದರೆ ವಿಡಿಯೋದಲ್ಲಿ ಈ ಎರಡೂ ನಿಯಮಗಳನ್ನು ಗಾಲಿಗೆ ತೂರಿರುವುದು ಸ್ಪಷ್ಟವಾಗಿದೆ.
 

click me!