
ನವದೆಹಲಿ (ಏಪ್ರಿಲ್ 27, 2023): ತುರ್ತು ಚಿಕಿತ್ಸೆ ಹಾಗೂ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳಲ್ಲಿ ಭಾಗಿಯಾಗದ ಕಾರಣ ಆಯುರ್ವೇದದಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳ ವೈದ್ಯರು ಅಲೋಪತಿ ವೈದ್ಯರಿಗೆ ಸಮನಾದ ವೇತನಕ್ಕೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಆದೇಶ ನೀಡಿದೆ. ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಿಗೆ ಸಮನಾದ ವೇತನ ಪಡೆಯಲು ಅರ್ಹರು ಎಂಬ 2012ರ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ವಿ. ಸುಬ್ರಮಣಿಯನ್ ಹಾಗೂ ನ್ಯಾಯಮೂರ್ತಿ ಪಂಕಜ್ ಮಿಥಾಲ್ ಪೀಠವು ಈ ಅಭಿಪ್ರಾಯ ಹೊರಹಾಕಿದೆ. ಈ ವೇಳೆ ಮರಣೋತ್ತರ ಅಥವಾ ಶವಪರೀಕ್ಷೆಗಳನ್ನು ಆಯುರ್ವೇದ ವೈದ್ಯರು ಸಾಧ್ಯವಿಲ್ಲ ಎಂಬುದನ್ನು ಪೀಠ ತಿಳಿಸಿದೆ.
ಆಯುರ್ವೇದದಂತಹ ಪರ್ಯಾಯ ವೈದ್ಯಕೀಯ ವ್ಯವಸ್ಥೆಗಳು ಇತಿಹಾಸದಲ್ಲಿ ತಮ್ಮ ಹೆಮ್ಮೆಯನ್ನು ಹೊಂದಿವೆ ಮತ್ತು ದೇಶದಲ್ಲಿ ಇದಕ್ಕೆ ಪ್ರಚಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೆ, ಎರಡು ವಿಭಾಗಗಳ ಮೆಡಿಸಿನ್ ಅಭ್ಯಾಸ ಮಾಡುವವರನ್ನು ಸಂಬಳದ ವಿಷಯದಲ್ಲಿ ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಅದು ಹೇಳಿದೆ.
ಇದನ್ನು ಓದಿ: ಅರಣ್ಯ ಸುತ್ತ ಸಣ್ಣ ಕಟ್ಟಡ ನಿರ್ಮಾಣಕ್ಕೆ ಸುಪ್ರೀಂ ಅಸ್ತು: 1 ಕಿ.ಮೀ. ಬಫರ್ ವಲಯ ಆದೇಶದಲ್ಲಿ ಮಾರ್ಪಾಡು
ಪ್ರಮುಖ ವ್ಯತ್ಯಾಸಗಳು
ಕರ್ನಾಟಕದಲ್ಲಿ 4 ಸೇರಿ ದೇಶದಲ್ಲಿ 157 ನರ್ಸಿಂಗ್ ಕಾಲೇಜು - ಕೇಂದ್ರ ಸಚಿವ ಸಂಪುಟ ಅನುಮೋದನೆ
ದೇಶಾದ್ಯಂತ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದರಲ್ಲಿ ಕರ್ನಾಟಕದ 4 ಕಾಲೇಜುಗಳು ಸೇರಿವೆ. ಇದನ್ನು ಒಟ್ಟು 1,570 ಕೋಟಿ ರು. ವೆಚ್ಚದಲ್ಲಿ ಈಗಿರುವ ನರ್ಸಿಂಗ್ ಕಾಲೇಜುಗಳ ಜೊತೆ ನಿರ್ಮಿಸಲಾಗುವುದು ಎಂದು ಕೇಂದ್ರ ಸಚಿವ ಮನಸುಖ್ ಮಾಡವೀಯ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಪಕ್ಷಗಳಿಗೆ ಶಾಕ್: ಮೀಸಲಾತಿ ಮಿತಿ ಶೇ. 50 ಮೀರಿಸಲು ಸುಪ್ರೀಂಕೋರ್ಟ್ ನಕಾರ
ಇದೇ ವೇಳೆ, 2023ರ ರಾಷ್ಟ್ರೀಯ ವೈದ್ಯಕೀಯ ಉಪಕರಣಗಳ ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯಲ್ಲಿ ವೈದ್ಯಕೀಯ ಉಪಕರಣಗಳನ್ನು ದೇಶೀಯವಾಗಿ ನಿರ್ಮಿಸಲು ಪ್ರಾಧಾನ್ಯತೆ ನೀಡಲಾಗುವುದು. ಇದರಿಂದಾಗಿ ವೈದ್ಯಕೀಯ ಕ್ಷೇತ್ರದ ವ್ಯಾಪ್ತಿಯು ಈಗಿರುವ 90 ಸಾವಿರ ಕೋಟಿಯಿಂದ ಮುಂದಿನ 5 ವರ್ಷದಲ್ಲಿ 4.10 ಲಕ್ಷ ಕೋಟಿ ರೂ. ಗೆ ವಿಸ್ತರಣೆಯಾಗಲಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಸರ್ಕಾರದ ಟೀಕೆ, ದೇಶ ವಿರೋಧಿಯಲ್ಲ; ಪತ್ರಿಕಾ ಸ್ವಾತಂತ್ರ ಕಡಿತಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ