ಅಯೋಧ್ಯೆ ರಾಮನ ದರ್ಶನಕ್ಕೆ ತೆರಳುವ ರಾಮಪಥ ಸಂಚಾರಕ್ಕೆ ಮುಕ್ತ: 100 ಮೀ. ಅಗಲ, 800 ಮೀ. ಉದ್ದದ ಮಾರ್ಗ

By Kannadaprabha NewsFirst Published Jul 31, 2023, 9:29 AM IST
Highlights

ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರ ಪ್ರವೇಶಕ್ಕೆ ನಿರ್ಮಿಸಲಾಗಿರುವ ನೂತನ ‘ರಾಮಪಥ’ ಮಾರ್ಗವನ್ನು ಭಾನುವಾರ ಭಕ್ತರಿಗೆ ಮುಕ್ತಗೊಳಿಸಲಾಯಿತು.

ಅಯೋಧ್ಯೆ: ಇಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ರಾಮಮಂದಿರ ಪ್ರವೇಶಕ್ಕೆ ನಿರ್ಮಿಸಲಾಗಿರುವ ನೂತನ ‘ರಾಮಪಥ’ ಮಾರ್ಗವನ್ನು ಭಾನುವಾರ ಭಕ್ತರಿಗೆ ಮುಕ್ತಗೊಳಿಸಲಾಯಿತು. ರಾಮಮಂದಿರ ನಿರ್ಮಾಣ ಕಾಮಗಾರಿಗೆ ಚುರುಕು ನೀಡುವ ನಿಟ್ಟಿನಲ್ಲಿ ಇದುವರೆಗೂ ಬಳಸಲಾಗುತ್ತಿದ್ದ ಮಾರ್ಗವನ್ನು ಭಾನುವಾರದಿಂದ ಬಂದ್‌ ಮಾಡಲಾಗಿದ್ದು, ನೂತನವಾಗಿ ನಿರ್ಮಿಸಲಾಗಿರುವ ರಾಮಪಥ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಹೀಗಾಗಿ ರಾಮಲಲ್ಲಾನ ವಿಗ್ರಹ ನೋಡಲು ಇದೇ ಮಾರ್ಗದಲ್ಲಿ ತೆರಳಬೇಕು.

100 ಮೀಟರ್‌ ಅಗಲ, 800 ಮೀಟರ್‌ ಉದ್ದದ ಈ ರಾಮಪಥವನ್ನು ಸುಂದರವಾದ ಕೆಂಪುಕಲ್ಲುಗಳಿಂದ ನಿರ್ಮಿಸಲಾಗಿದೆ. 40 ಕೋಟಿ ರು. ವೆಚ್ಚದಲ್ಲಿ ಈ ಮಾರ್ಗ ನಿರ್ಮಾಣಗೊಂಡಿದ್ದು, ರಸ್ತೆಯ ಅಕ್ಕಪಕ್ಕದಲ್ಲಿ ಭಕ್ತರಿಗೆ ಕುಡಿಯುವ ನೀರು, ವಿಶ್ರಾಂತಿ ಸ್ಥಳ, ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷದ ಸಂಕ್ರಮಣ ಸಂದರ್ಭದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದ್ದು, ನಂತರ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅನುಮತಿ ಸಿಗಲಿದೆ.

Latest Videos

ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೆ ಮೋದಿಗೆ ಅಧಿಕೃತ ಆಹ್ವಾನ

ಅಯೋಧ್ಯೆ: ರಾಮಜನ್ಮಭೂಮಿಗೆ ಭೇಟಿ ನೀಡಿದ ರಾಮಾಯಣದ ಸೀತೆ ದೀಪಿಕಾ

click me!