ತಿರುಪತಿ ತಿಮ್ಮಪ್ಪನ ಭಕ್ತರ ವಸತಿಗಾಗಿ ಮೊಬೈಲ್ ಕಂಟೇನರ್: ಎಸಿ ಫ್ಯಾನ್ ಲಭ್ಯ

By Anusha Kb  |  First Published Jul 31, 2023, 7:28 AM IST

ಆಂಧ್ರಪ್ರದೇಶದ ಜಗದ್ವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗಾಗಿ ದೇವಾಲಯ ಆಡಳಿತ ಮಂಡಳಿಯು ಮೊಬೈಲ್‌ ಕಂಟೇನರ್‌ಗಳಲ್ಲಿ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಪ್ರಾರಂಭಿಸಿದೆ.


ತಿರುಮಲ: ಆಂಧ್ರಪ್ರದೇಶದ ಜಗದ್ವಿಖ್ಯಾತ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗಾಗಿ ದೇವಾಲಯ ಆಡಳಿತ ಮಂಡಳಿಯು ಮೊಬೈಲ್‌ ಕಂಟೇನರ್‌ಗಳಲ್ಲಿ ತಾತ್ಕಾಲಿಕ ವಸತಿ ಕೇಂದ್ರಗಳನ್ನು ಪ್ರಾರಂಭಿಸಿದೆ. ದೇವಸ್ಥಾನಕ್ಕೆ ಹರಿದು ಬರುವ ಅಪಾರ ಭಕ್ತರಿಗೆ ತಾತ್ಕಾಲಿಕವಾಗಿ ತಂಗಲು ಆಶ್ರಯ ಕಲ್ಪಿಸುವ ಉದ್ದೇಶದಿಂದ ವಿಶಾಖಪಟ್ಟಣದ ಮೂರ್ತಿ ಎಂಬುವವರು ಈ ಕಂಟೇನರ್‌ಗಳನ್ನು ದಾನವಾಗಿ ನೀಡಿದ್ದಾರೆ. ತಾಂತ್ರಿಕವಾಗಿ ಕಡಿಮೆ ಜಾಗದಲ್ಲಿಯೇ ಹೆಚ್ಚು ಮಂದಿ ತಂಗುವ ರೀತಿಯಾಗಿ ಈ ಕಂಟೇನರ್‌ಗಳನ್ನು ನಿರ್ಮಿಸಲಾಗಿದೆ.

ಇಲ್ಲಿ ಮಹಡಿ ಮಂಚಗಳನ್ನಿರಿಸಲಾಗಿದ್ದು ಕೆಳ ಮಂಚದಲ್ಲಿ ಮತ್ತು ಮೇಲ್ಭಾಗದಲ್ಲಿ ತಲಾ ಇಬ್ಬರು ಮಲಗಿಕೊಳ್ಳಬಹುದಾಗಿದೆ. ಇಲ್ಲಿ ಫ್ಯಾನ್‌ ಮತ್ತು ಎ.ಸಿ ಸೌಲಭ್ಯವೂ ಇದ್ದು ಹೊರಗಿನಿಂದ ಚಿಕ್ಕ ಪೆಟ್ಟಿಗೆಯಾಕಾರದಲ್ಲಿ ಮೊಬೈಲ್‌ ಕಂಟೇನರ್‌ ಕಾಣಿಸಿಕೊಳ್ಳುತ್ತದೆ. ಟಿಟಿಡಿ ಅಧ್ಯಕ್ಷ ವೈ.ವಿ ಸುಬಾರೆಡ್ಡಿ ಹಾಗೂ ಇವಿಒ ಧರ್ಮ ರೆಡ್ಡಿ ಅವರು 2 ಮೊಬೈಲ್‌ ಕಂಟೇನರ್‌ಗಳನ್ನು ಉದ್ಘಾಟಿಸಿದ್ದಾರೆ. ಈ ಪೈಕಿ ಒಂದನ್ನು ಟಿಟಿಡಿಯ ಸಾರಿಗೆ ಸಿಬ್ಬಂದಿಗಳಿಗಾಗಿ ಹಾಗೂ ಇನ್ನೊಂದನ್ನು ಭಕ್ತಾದಿಗಳಿಗಾಗಿ ನಿಯೋಜನೆ ಮಾಡಲಾಗಿದೆ. ಹೆಚ್ಚು ದಟ್ಟಣೆ ಇರುವ ಜಾಗದಲ್ಲಿ ಕಂಟೇನರ್‌ ಇರಲಿದ್ದು, ಅಲ್ಲಿ ಭಕ್ತರು ತಾತ್ಕಾಲಿಕವಾಗಿ ವಿಶ್ರಮಿಸಬಹುದಾಗಿದೆ.

Tap to resize

Latest Videos

2,000 ರೂ. ನೋಟ್‌ ಎಕ್ಸ್‌ಚೇಂಜ್‌ ಹೆಸರಲ್ಲಿ 25 ಲಕ್ಷ ರೂ. ವಂಚನೆ: ತಿರುಪತಿಗೆ ಕರೆಸಿ ನಾಮ ಹಾಕಿದ ಖದೀಮರು

ತಿರುಪತಿ ದೇವಳಕ್ಕೆ ಕೆಎಂಎಫ್ ನಂದಿನಿ ತುಪ್ಪ ನೀಡುತ್ತಿಲ್ಲ: ಅಧ್ಯಕ್ಷ

click me!