ಅಯೋಧ್ಯೆ ಪ್ರಾಣ ಪ್ರತಿಷ್ಠೆ: ಇದುವರೆಗೆ ಅತೀ ಹೆಚ್ಚು ವೀಕ್ಷಿಸಿದ ಯೂಟ್ಯೂಬ್ ಲೈವ್ ಸ್ಟ್ರೀಮ್

By Anusha Kb  |  First Published Jan 23, 2024, 10:51 AM IST

ಅಯೋಧ್ಯೆ ರಾಮ ಮಂದಿರದಲ್ಲಿ ನಿನ್ನೆ ರಾಮಲಲ್ಲಾನನ್ನ ಪ್ರತಿಷ್ಠಾಪನೆ ಯೂಟ್ಯೂಬ್‌ನಲ್ಲೂ ದಾಖಲೆ ಬರೆದಿದೆ.  ಈ ಐತಿಹಾಸಿಕ ಶುಭ ಸಂದರ್ಭವೂ  ಇದುವರೆಗೆ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ನಿನ್ನೆ ರಾಮಲಲ್ಲಾನನ್ನ ಸಾವಿರಾರು ಭಕ್ತಗಣದ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ  ಯಜಮಾನಿಕೆಯಲ್ಲಿ ವೈದಿಕ ವಿಧಿ ವಿಧಾನದ ಮೂಲಕ ಗರ್ಭಗುಡಿಯಲ್ಲಿ ವಿರಾಜಮಾನಗೊಳಿಸುವ ಮೂಲಕ ಭಾರತೀಯರ 500 ವರ್ಷಗಳ ಕನಸು ನನಸಾಯಿತು. ಈ ಐತಿಹಾಸಿಕ ಶುಭ ಸಂದರ್ಭವೂ ಈಗ ಹೊಸ ದಾಖಲೆ ಬರೆದಿದೆ. ಇದುವರೆಗೆ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಇದು ಎಂಬ ಹೆಮ್ಮೆಗೆ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಪಾತ್ರವಾಗಿದೆ. 

PM Modi attends Pran Pratishtha of Shri Ram in Ayodhya, LIVE - Shri Ram Lalla Pran Pratishtha Samaroh Ayodhyadham ಈ ಎರಡು ಲೈವ್‌ಗಳು ನಿನ್ನೆ ಹಾಗೂ ಯೂಟ್ಯೂಬ್‌ ಇತಿಹಾಸದಲ್ಲೇ ಅತೀ ಹೆಚ್ಚು ವೀಕ್ಷಣೆ ಗಳಿಸಿದ ಲೈವ್ ಸ್ಟ್ರೀಮ್‌ಗಳಾಗಿವೆ. ಈ ಎರಡು ಯೂಟ್ಯೂಬ್ ಲೈವ್‌ಗಳಿಗೆ ಕ್ರಮವಾಗಿ  10 ಮಿಲಿಯನ್ ಹಾಗೂ 9 ಮಿಲಿಯನ್‌ ವೀಕ್ಷಣೆ ಸಿಕ್ಕಿದೆ. 

Tap to resize

Latest Videos

ಈ ಮೂಲಕ ಈ ಎರಡು ಲೈವ್‌ ಸ್ಟ್ರೀಮ್‌ಗಳು ಯೂಟ್ಯೂಬ್ ಲೈವ್ ಸ್ಟ್ರೀಮ್‌ನ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿವೆ.  ಇದಕ್ಕೂ ಮೊದಲು ಚಂದ್ರಯಾನ 3 ಉಡಾವಣೆ, 2023ರ ಫಿಫಾ ವಿಶ್ವಕಪ್ ಮ್ಯಾಚ್, ಹಾಗೂ ಆಪಲ್ ಫೋನ್ ಲಾಂಚ್ ಈ ಲೈವ್‌ ಸ್ಟ್ರೀಮ್‌ಗಳು ಅತೀ ಹೆಚ್ಚು ವೀಕ್ಷಣೆ ಗಳಿಸಿದ ಯೂಟ್ಯೂಬ್‌ ಲೈವ್ ಸ್ಟ್ರೀಮ್‌ಗಳಾಗಿದ್ದವು.  

ಯೂಟ್ಯೂಬ್‌ ವೀಕ್ಷಣೆ ಇನ್ನಷ್ಟು ದುಬಾರಿ, ಹೊಸ ಪ್ಲ್ಯಾನ್‌ಗಳ ದರ ಏರಿಸಿದ ಗೂಗಲ್‌!

ಈ ಲೈವ್ ಸ್ಟ್ರೀಮ್‌ನಲ್ಲಿ ಪ್ರಧಾನಿ  ಮೋದಿ ಮಡಚಿದ( ಮಡಿಸಿದ) ಕೆಂಪು ದುಪ್ಪಟದ ಜೊತೆ ಬೆಳ್ಳಿಯ ಛತ್ರವನ್ನು ಹಿಡಿದುಕೊಂಡು ದೇವಾಲಯದ ಆವರಣ ಪ್ರವೇಶಿಸಿ ನಡೆದುಕೊಂಡು ಬರುವ ದೃಶ್ಯವಿದೆ. ಈ ಐತಿಹಾಸಿಕ ಕ್ಷಣದ ಬಗ್ಗೆ ಟ್ವಿಟ್ ಮಾಡಿದ ಪ್ರಧಾನಿ ಮೋದಿ ಅಯೋಧ್ಯಾಧಾಮದಲ್ಲಿ ಶ್ರೀರಾಮ್‌ ಲಲ್ಲಾ ಅವರ ಪ್ರಾಣ ಪ್ರತಿಷ್ಠಾಪನೆ ಕ್ಷಣವೂ ಪ್ರತಿಯೊಬ್ಬರನ್ನು ಭಾವುಕವಾಗಿಸಲಿದೆ. ಈ ದಿವ್ಯ ಕಾರ್ಯಕ್ರಮದ ಭಾಗವಾಗಿರುವುದು ನನಗೆ ಅತೀವ ಸಂತಸ ತಂದಿದೆ. ನಮಸ್ಕಾರ ಸಿಯಾ ರಾಮ್ ಎಂದು ಪ್ರಧಾನಿ ಬರೆದುಕೊಂಡಿದ್ದರು. 

ಈ ಕಾರ್ಯಕ್ರಮ ಜರುಗುವುದಕ್ಕೂ ಮೊದಲು ಅಂದರೆ ಕಳೆದ ಭಾನುವಾರದವರೆಗೂ 2023ರ ಆಗಸ್ಟ್‌ 23 ರಂದು ಲಾಂಚ್ ಆದ ಚಂದ್ರಯಾನ 3 ಕಾರ್ಯಕ್ರಮವೂ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ವೀಕ್ಷಿಸಿದ ಇದುವರೆಗಿನ ಲೈವ್ ಸ್ಟ್ರೀಮ್ ಆಗಿತ್ತು. 8.9 ಮಿಲಿಯನ್ ವೀಕ್ಷಣೆಯಿಂದಾಗಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿತ್ತು. ಇದರ ನಂತರದ ಸ್ಥಾನದಲ್ಲಿ ಬ್ರೆಜಿಲ್ ಹಾಗೂ ಕ್ರೊಯೇಷಿಯಾ ನಡುವೆ ನಡೆದ 2022ರ ಫುಟ್ಬಾಲ್ ವಿಶ್ವಕಪ್ ಲೈವ್ ಸ್ಟ್ರೀಮ್  ಇತ್ತು, ಇದು  6.14 ಮಿಲಿಯನ್ ವೀಕ್ಷಣೆ ಗಳಿಸಿತ್ತು. 

ಮ್ಯಾನ್ ವರ್ಸಸ್ ವೈಲ್ಡ್: ಮೋದಿ ಸಂಚಿಕೆಗೆ ಜಗತ್ತು ಕ್ಲೀನ್ ಬೋಲ್ಡ್!

ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಯೂಟ್ಯೂಬ್ ಚಾನೆಲ್ 2 ಕೋಟಿಗೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದೆ. ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ 23,750 ವೀಡಿಯೊಗಳಿದ್ದು 472 ಕೋಟಿ ವೀಕ್ಷಣೆ ಗಳಿಸಿದೆ.  ಜೊತೆಗೆ 2.1 ಕೋಟಿ ಚಂದಾದಾರರನ್ನು ಹೊಂದಿದೆ.  ಅತೀ ಹೆಚ್ಚು ಯೂಟ್ಯೂಬ್ ಫಾಲೋವರ್ಸ್‌ಗಳನ್ನು ಹೊಂದಿರುವ ವಿಶ್ವದ ನಾಯಕರಲ್ಲಿ ಪ್ರಧಾನಿ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಬ್ರೆಜಿಲ್‌ನ ಮಾಜಿ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರಿದ್ದಾರೆ. ಅವರು 64 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. 

 

click me!