ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು: ಅರುಣ್‌ ಯೋಗಿರಾಜ್

Published : Jan 23, 2024, 09:09 AM IST
ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು: ಅರುಣ್‌ ಯೋಗಿರಾಜ್

ಸಾರಾಂಶ

ನಾನು ಈಗ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮ ಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇದೆ. ಕೆಲವೊಮ್ಮೆ ಕನಸಿನ ಲೋಕದಲ್ಲಿ ನಾನು ಇದ್ದೇನೆ ಎಂದು ನನಗೆ ಅನಿಸುತ್ತದೆ’ ಎಂದರು.

ಅಯೋಧ್ಯೆ (ಜನವರಿ 23, 2024): ರಾಮ್ ಲಲ್ಲಾ ವಿಗ್ರಹ ಶಿಲ್ಪಿ, ಅರುಣ್ ಯೋಗಿರಾಜ್ ಅವರು ತಮ್ಮ ಹಸ್ತದಲ್ಲಿ ಮೂಡಿ ಬಂದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. ತಾನು ಕನಸಿನ ಲೋಕದಲ್ಲಿ ಇದ್ದೇನೆ ಎಂದು ಭಾಸವಾಗುತ್ತಿದೆ ಎಂದಿದ್ದಾರೆ.

ಸೋಮವಾರ ಪ್ರಾಣಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಈಗ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮ ಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇದೆ. ಕೆಲವೊಮ್ಮೆ ಕನಸಿನ ಲೋಕದಲ್ಲಿ ನಾನು ಇದ್ದೇನೆ ಎಂದು ನನಗೆ ಅನಿಸುತ್ತದೆ’ ಎಂದರು.

ಇದನ್ನು ಓದಿ: ಅಯೋಧ್ಯೆಯಲ್ಲಿ ಗಣ್ಯರಿಗೆ ಅಚ್ಚುಕಟ್ಟಾದ ವ್ಯವಸ್ಥೆ: ಸ್ಟಾರ್‌ ಹೋಟೆಲ್‌ನಲ್ಲಿ ವಾಸಕ್ಕೆ ಅವಕಾಶ, ಶುಚಿ-ರುಚಿಯಾದ ಊಟ

ಅರುಣ್‌ ಯೋಗಿರಾಜ್ ಕೆತ್ತಿರುವ ವಿಗ್ರಹವನ್ನು ಸೋಮವಾರ ಮಧ್ಹಾಹ್ನ 12.30ರ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪನೆ ಮಾಡಿದರು. ವಿವಿಧ ಶಿಲ್ಪಿಗಳು ಕೆತ್ತಿದ್ದ 3 ರಾಮನ ವಿಗ್ರಹದಲ್ಲಿ ಅರುಣ್‌ ಕೆತ್ತಿದ ಮೂರ್ತಿ ಇತ್ತೀಚೆಗೆ ಆಯ್ಕೆಯಾಗಿತ್ತು.

ಇದನ್ನೂ ಓದಿ: ರಾಮ ಬಂದಾಗಿದೆ, ಇನ್ನು ಎಲ್ಲ ವಿವಾದಗಳಿಗೂ ಅಂತ್ಯ ಹಾಡಿ; ನವಭಾರತ ಉದಯವಾಯ್ತು: ಮೋಹನ್‌ ಭಾಗವತ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ
ಪುಟಿನ್‌ಗೆ ರಷ್ಯನ್ ಭಾಷೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ, ಭಾರಿ ಮೆಚ್ಚುಗೆ