Ayodhya Ground Report: ಅಯೋಧ್ಯೆಯಲ್ಲಿರುವ ವ್ಯವಸ್ಥೆಗಳೇನು, ಚಂಪತ್‌ ರೈ ಹೇಳ್ತಾರೆ ಕೇಳಿ..

Published : Dec 20, 2023, 08:13 PM IST
Ayodhya Ground Report: ಅಯೋಧ್ಯೆಯಲ್ಲಿರುವ ವ್ಯವಸ್ಥೆಗಳೇನು, ಚಂಪತ್‌ ರೈ ಹೇಳ್ತಾರೆ ಕೇಳಿ..

ಸಾರಾಂಶ

ಅಯೋಧ್ಯೆ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ನಂತರವೂ 48 ದಿನಗಳ ಕಾಲ ಮಂಡಲ ಪೂಜೆ ನಡೆಯಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಸಮಾರಂಭದ ವ್ಯವಸ್ಥೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಅಯೋಧ್ಯೆ (ಡಿ.20): ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ದೃಷ್ಟಿಯಿಂದ ಜನವರಿ 22 ರಂದು ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಟೀ ಸ್ಟಾಲ್‌ಗಳು, ಊಟೋಪಚಾರ ಗೃಹಗಳು ಮತ್ತು ಕ್ಯಾಂಪ್‌ಫೈರ್‌ ವ್ಯವಸ್ಥೆ ಇರುತ್ತದೆ. ತೀರ್ಥ ಕ್ಷೇತ್ರದಲ್ಲಿ ಮೊಬೈಲ್ ನೆಟ್‌ವರ್ಕ್‌ಗಾಗಿ 4 ಮೊಬೈಲ್ ಟವರ್‌ಗಳನ್ನು ಅಳವಡಿಸಲಾಗುತ್ತದೆ. ಆಂಬ್ಯುಲೆನ್ಸ್ ಮತ್ತು ಇ-ರಿಕ್ಷಾದ ವ್ಯವಸ್ಥೆಯೂ ಇರುತ್ತದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಕುರಿತಾಗಿ ಮಾಹಿತಿ ನೀಡಿದರು. ಜನವರಿ 16 ರಿಂದ ಪ್ರಾಣ ಪ್ರತಿಷ್ಠಾಪನೆಯ ಪೂಜೆ ಆರಂಭವಾಗಲಿದ್ದು, ಕಾಶಿಯ ಗಣೇಶ್ವರ ಶಾಸ್ತ್ರಿ ದ್ರಾವಿಡ್ ಮತ್ತು ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ರಾಮನ ವಿಗ್ರಹವನ್ನು ಆಯ್ಕೆ ಮಾಡೋದು ಹೇಗೆ?: ಶ್ರೀರಾಮ ಪ್ರಾಣ-ಪ್ರತಿಷ್ಠಾ ಸಮಾರಂಭದ ನಂತರ ಮಂಡಲ ಪೂಜೆ 48 ದಿನಗಳ ಕಾಲ ನಡೆಯಲಿದೆ. ಉಡುಪಿಯ ಪೇಜಾವರದ ವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ನಡೆಯಲಿದೆ. ಅಯೋಧ್ಯೆಯ ರಾಮ ಮಂದಿರದ ಪ್ರತಿಷ್ಠಾಪನೆಗಾಗಿ, ಮೂವರು ಶಿಲ್ಪಿಗಳು ತಯಾರಿಸುತ್ತಿರುವ ವಿಗ್ರಹಗಳಲ್ಲಿ ಒಂದನ್ನು ಆಯ್ಕೆ ಮಾಡಲಾಗುತ್ತದೆ, ಯಾವ ಶಿಲ್ಪಿ ವಿಗ್ರಹದಲ್ಲಿ 5 ವರ್ಷದ ಬಾಲಕನ  ಮೃದುವಾದ ಮುಖ ಕಾಣುತ್ತದೆಯೋ ಆ ವಿಗ್ರಹವನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಮೂರ್ತಿಯನ್ನು ಭಗವಾನ್ ಶ್ರೀರಾಮನ ವಿಗ್ರಹವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಜಿಯೋದಿಂದ 4 ಮೊಬೈಲ್‌ ಟವರ್‌: ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ, ಬಾಗ್ ಬಿಜೈಸಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಸಂತರು ತಂಗುತ್ತಾರೆ. ಆ ಸಮಯದಲ್ಲಿ ಜನಸಂದಣಿಯಿಂದಾಗಿ ಮೊಬೈಲ್ ನೆಟ್‌ವರ್ಕ್‌ಗೆ ಯಾವುದೇ ತೊಂದರೆಯಾಗಬಾರದು. ಆದ್ದರಿಂದ ತೀರ್ಥಪುರಂ ಪ್ರದೇಶದಲ್ಲಿ ನಾಲ್ಕು ಮೊಬೈಲ್ ಟವರ್‌ಗಳನ್ನು ಅಳವಡಿಸುವ ಯೋಜನೆ ಇದೆ. ಇದಕ್ಕೆ ಜಿಯೋ ಕಂಪನಿ ಸಮ್ಮತಿ ನೀಡಿದೆ.

ಸಮಾರಂಭದಲ್ಲಿ ಇರಲಿದ್ದಾರೆ ದೇವಸ್ಥಾನ ನಿರ್ಮಾಣದ ಕಾರ್ಮಿಕರು: ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಎಲ್ಲ ಸಂಪ್ರದಾಯಗಳ ಋಷಿಮುನಿಗಳು, ಸಂತರು, ಕಟ್ಟಡ ನಿರ್ಮಾಣ ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಅನೇಕ ದೇಶಗಳ ಪ್ರತಿನಿಧಿಗಳು ಮತ್ತು ಆಯಾ ಕ್ಷೇತ್ರದಲ್ಲಿ ದೇಶಕ್ಕೆ ಕೀರ್ತಿ ತಂದ ಪ್ರಮುಖರನ್ನು ಆಹ್ವಾನಿಸಲಾಗಿದೆ.

ಇಲ್ಲಿಯವರೆಗೂ 4000 ಸಂತರು, ಎಲ್ಲಾ ಶಂಕರಾಚಾರ್ಯರು ಮತ್ತು ಮಹಾಮಂಡಲೇಶ್ವರರು, ಸಿಖ್ ಮತ್ತು ಬೌದ್ಧ ಪಂಥಗಳ ಉನ್ನತ ಸಂತರಿಗೆ ಆಹ್ವಾನ ನೀಡಲಾಗಿದೆ. ಅದರೊಂದಿಗೆ ಸ್ವಾಮಿ ನಾರಾಯಣ್, ಆರ್ಟ್ ಆಫ್ ಲಿವಿಂಗ್, ಗಾಯತ್ರಿ ಪರಿವಾರ, ಮಾಧ್ಯಮ, ಕ್ರೀಡೆ, ರೈತರು ಮತ್ತು ಕಲಾ ಪ್ರಪಂಚದ ಪ್ರಮುಖ ವ್ಯಕ್ತಿಗಳು, 2200 ಮನೆಯವರು, 1984 ಮತ್ತು 1992 ರ ನಡುವೆ ಸಕ್ರಿಯ ಪತ್ರಕರ್ತರಾಗಿ ರಾಮಮಂದಿರ ಕುರಿತಾಗಿ ವರದಿ ಮಾಡಿದವರು, ಹುತಾತ್ಮ ಕರಸೇವಕರ ಸಂಬಂಧಿಕರು, ಬರಹಗಾರರು,  ಸಾಹಿತಿ, ಕವಿಗಳು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಗಳ ಅಧಿಕಾರಿಗಳು, ಉದ್ಯಮಿಗಳು, ಮಾಜಿ ಪ್ರಧಾನಿ, ಸೇನಾ ಅಧಿಕಾರಿಗಳು, ಎಲ್.& ಟಿ, ಟಾಟಾ, ಅಂಬಾನಿ, ಅದಾನಿ ಗ್ರೂಪ್‌ನ ಉನ್ನತ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ.

ವಾಹನ ನಿಲುಗಡೆಗೆ ವ್ಯವಸ್ಥೆ ಏನು?: ಸರ್ಕಾರದ ವ್ಯವಸ್ಥೆಗಳಲ್ಲದೆ ಟ್ರಸ್ಟ್ ವತಿಯಿಂದ ಪಾರ್ಕಿಂಗ್ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಚಂಪತ್ ರೈ ತಿಳಿಸಿದರು. ಬಾಗ್ ಬಿಜೈಸಿ, ಹೆದ್ದಾರಿ ಸಮೀಪದ ಮೈದಾನ, ರಾಮಸೇವಕಪುರಂ ಮತ್ತು ಕರಸೇವಕಪುರಂನಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಅತಿಥಿಗಳನ್ನು ಸ್ಥಳಕ್ಕೆ ಕರೆದೊಯ್ಯಲು 100 ಸಣ್ಣ ಶಾಲಾ ಬಸ್‌ಗಳು ಇರುತ್ತವೆ. ಇ-ರಿಕ್ಷಾ, ಕಾರ್ಟ್ ಮತ್ತು ಆಂಬ್ಯುಲೆನ್ಸ್‌ನ ವ್ಯವಸ್ಥೆಯೂ ಇರುತ್ತದೆ.

Ayodhya Ground Report: ಅಯೋಧ್ಯೆ ಭದ್ರತಾ ವ್ಯವಸ್ಥೆ ಹೇಗಿರಲಿದೆ? ಇಲ್ಲಿದೆ ಡೀಟೇಲ್ಸ್‌

ಕರಸೇವಕಪುರದಲ್ಲಿ ಈಗಾಗಲೇ ಒಂದು ಸಾವಿರ ಮನೆಗಳು ಸಿದ್ಧವಾಗಿವೆ ಎಂದು ಚಂಪತ್ ರೈ ತಿಳಿಸಿದ್ದಾರೆ. ನೃತ್ಯ ಗೋಪಾಲ್ ದಾಸ್ ಜಿ ಅವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ 850 ಜನರಿಗೆ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಅಯೋಧ್ಯೆಯ ಮಠ, ಮಂದಿರ, ಧರ್ಮಶಾಲೆ ಮತ್ತು ಕುಟುಂಬಗಳಲ್ಲಿ 600 ಜನರಿಗೆ ವಸತಿ ವ್ಯವಸ್ಥೆ ಇರಲಿದೆ. ಅಯೋಧ್ಯೆಯ ಕುಟುಂಬಗಳು ತಮ್ಮ ಸ್ಥಳದಲ್ಲಿ ಜನರಿಗೆ ವಸತಿ ಕಲ್ಪಿಸಲು ಒಪ್ಪಿಗೆ ನೀಡಿದ್ದಾರೆ. ತೀರ್ಥ ಕ್ಷೇತ್ರಪುರಂ (ಬಾಗ್ ಬಿಜೈಸಿ) ನಲ್ಲಿ ಪ್ರಮುಖ ಪಟ್ಟಣ ಸ್ಥಾಪಿಸಲಾಗಿದೆ.  ಬಾಗ್ ಬಿಜೈಸಿಯಲ್ಲಿ 6 ಕೊಳವೆ ಬಾವಿಗಳು ಮತ್ತು ಅಡುಗೆ ಕೋಣೆ ಮತ್ತು 10 ಹಾಸಿಗೆಗಳ ಆಸ್ಪತ್ರೆ ಇದೆ. ದೇಶದಾದ್ಯಂತ ಸುಮಾರು 150 ವೈದ್ಯರು ಸೇವೆಗಳನ್ನು ಒದಗಿಸುತ್ತಾರೆ. ನಗರದ ಮೂಲೆ ಮೂಲೆಯಲ್ಲಿ ಊಟೋಪಚಾರದ ಗೃಹ, ರೆಸ್ಟೋರೆಂಟ್, ಉಗ್ರಾಣ ಮತ್ತು ಧಾನ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಚಹಾ ಮತ್ತು ಅದರೊಂದಿಗೆ ಸ್ವಲ್ಪ ಆಹಾರದ ವ್ಯವಸ್ಥೆ ಇರಲಿದೆ.  2 ಸಾವಿರ ಶೌಚಾಲಯಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.  ಚಳಿಯ ದೃಷ್ಟಿಯಿಂದ ಅಲ್ಲಲ್ಲಿ ಕ್ಯಾಂಪ್‌ಫೈರ್‌ ವ್ಯವಸ್ಥೆ ಕೂಡ ಇರಲಿದೆ.

Ayodhya Ground Report: ರಾಮಮಂದಿರ ಮಾದರಿ ರಚನೆ ಮಾಡಿದ ವ್ಯಕ್ತಿ ಇವರು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ