ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ತಮಗೆ ಬೇಕಾದಂತೆ ರಚಿಸಿದ ಕಾನೂನು ಇದುವರೆಗೆ ಜಾರಿಯಲ್ಲಿತ್ತು. ಆದರೆ ಕೇಂದ್ರ ಸರ್ಕಾರ ಪ್ರಸ್ತುತ ಸಂದರ್ಭ, ಬದಲಾದ ಸನ್ನಿವೇಶ ಸೇರಿದಂತೆ ಭಾರತೀಯ ಸ್ವರ್ಶ ನೀಡಿದ ಭಾರತೀಯ ನ್ಯಾಯ ಸಂಹಿತೆ ಕಾನೂನು ಬಿಲ್ ಲೋಕಸಭೆಯಲ್ಲಿ ಮಂಡಿಸಿದೆ. ಈ ಬಿಲ್ ಲೋಕಸಭೆಯಲ್ಲಿ ಪಾಲ್ ಆಗಿದೆ. ಮೂರು ಬಿಲ್ ಪಾಸ್ ಆಗಿದ್ದು, ಕಾನೂನಿನಲ್ಲಿ ಮಹತ್ತರ ಬದಲಾವಣೆ ತರಲಾಗಿದೆ
ನವೆಹಲಿ(ಡಿ.20) ಬ್ರಿಟಿಷರ್ ರಚಿಸಿದ ಅಪರಾಧ ಕಾನೂನಿನ ಬದಲು ಭಾರತೀಯರ ಅಗತ್ಯತೆ, ಸಂದರ್ಭ, ಸನ್ನಿವೇಶ ಹಾಗೂ ಭಾರತೀಯತೆಗೆ ತಕ್ಕಂತೆ ಕೇಂದ್ರ ಸರ್ಕಾರ ಮೂರು ಹೊಸ ಬಿಲ್ ತಂದಿದೆ. ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಮೂರು ಬಿಲ್ ಮಂಡಿಸಿದ್ದಾರೆ. ಲೋಕಸಭೆಯಲ್ಲಿ ಈ ಮೂರು ಬಿಲ್ ಪಾಸ್ ಆಗಿದೆ. ಹೊಸ ಬಿಲ್ ಭಾರತೀಯ ಕಾನೂನಿನಲ್ಲಿ ಕೆಲ ಮಹತ್ತರ ಬದಲಾವಣೆ ತಂದಿದೆ. ಪ್ರಮುಖವಾಗಿ ಗುಂಪು ಹತ್ಯೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತ ಕಠಿಣ ಕ್ರಮವನ್ನು ತರಲಾಗಿದೆ. ಇದೇ ವೇಳೆ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಜೈಲಿನಲ್ಲಿಡಲು ದೇಶದ್ರೋಹ ಕೇಸ್ ಹಾಕಲಾಗುತ್ತಿತ್ತು. ಇದೀಗ ದೇಶದ್ರೋಹದ ಕಾನೂನು ತೆಗೆದು ಹಾಕಲು ನಿರ್ಧರಿಸಲಾಗಿದೆ.
ಲೋಕಸಭೆಯಲ್ಲಿ ಇಂದು ಅಮಿತ್ ಶಾ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್-2023), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್-2023) ಮತ್ತು ಭಾರತೀಯ ಸುರಕ್ಷಾ ಅಧಿನಿಯಮ (ಬಿಎಎಸ್-2023) ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆ ಸದ್ಯ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ-1860, ಅಪರಾಧ ಪ್ರಕ್ರಿಯೆ ಕಾಯ್ದೆ-1898 ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ-1872 ಬದಲಿಗೆ ತರಲಾಗಿದೆ.
ದೇಶದ ಸುರಕ್ಷತೆಗಾಗಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸ್ವಾಧೀನ, ಕೇಂದ್ರದ ಹೊಸ ಮಸೂದೆ!
ನೂತನ ಮಸೂದೆ ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲಿದೆ. ಯಾವುದೇ ಪೊಲೀಸ್ ಠಾಣೆಯಲ್ಲಿ ಅರೆಸ್ಟ್ ಆಗಿರುವ ಆರೋಪಿಗಳ ದಾಖಲೆಗಳು, ಮಾಹಿತಿಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಇನ್ನು 18 ವರ್ಷ ಒಳಗಿನ ಬಾಲಕಿ ಮೇಲೆ ರೇಪ್ ಘಟನೆ ನಡೆದರೆ ಪೋಕ್ಸೋ ಕೇಸ್ ದಾಖಲಾಗಲಿದೆ. ಇನ್ನು ಹೊಸ ಕಾನೂನು ಭಯೋತ್ಪಾದನೆ ಕುರಿತು ಡಿಫಿನೀಶನ್ ಉಲ್ಲೇಖಿಸಿದೆ. ಸದ್ಯ ಭಯೋತ್ಪಾದನೆಗಳ ಸ್ವರೂಪವೂ ಬದಲಾಗಿದೆ. ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಕಾನೂನು ರೂಪಿಸಲಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಗುಂಪಿನಲ್ಲಿ ಟಾರ್ಗೆಟ್ ವ್ಯಕ್ತಿಗಳ ಹತ್ಯೆ ಅಥವಾ ಗುಂಪು ಹತ್ಯೆ(Mob lynching) ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಹೊಸ ಕಾನೂನು ಅವಕಾಶ ನೀಡುತ್ತದೆ. ಹಿಟ್ ಅಂಡ್ ರನ್ ಅಪಘಾತ ಪ್ರಕರಣಗಳು ಕಠಿಣ ಶಿಕ್ಷೆ ಎದುರಿಸಬೇಕು. ಅಪರಾಧ ಕಾನೂನಿನಲ್ಲಿ ಮಹತ್ತರ ಬದಲಾವಣೆ ಮಾಡಿರುವ ಈ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ.
‘ಜಮೀರ್ ಗದ್ದಲ’ದ ನಡುವೆಯೇ ಚರ್ಚೆಇಲ್ಲದೇ 5 ಮಸೂದೆ ಅಂಗೀಕಾರ !