Hijab Row: ಹಿಜಾಬ್‌ ಧಾರಿಣಿ ಮುಂದೊಂದು ದಿನ ಭಾರತದ ಪ್ರಧಾನಿ: ಅಸಾದುದ್ದೀನ್‌ ಓವೈಸಿ

Kannadaprabha News   | Asianet News
Published : Feb 14, 2022, 02:30 AM IST
Hijab Row: ಹಿಜಾಬ್‌ ಧಾರಿಣಿ ಮುಂದೊಂದು ದಿನ ಭಾರತದ ಪ್ರಧಾನಿ: ಅಸಾದುದ್ದೀನ್‌ ಓವೈಸಿ

ಸಾರಾಂಶ

ಹಿಜಾಬ್‌ ಧರಿಸುವ ಮಹಿಳೆಯೊಬ್ಬಳು ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ ಎಂದು ಎಐಎಂಐಎಂ ನೇತಾರ ಹಾಗೂ ಲೋಕಸಭಾ ಸಂಸದ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ.

ಹೈದರಾಬಾದ್‌ (ಫೆ.14): ಹಿಜಾಬ್‌ (Hijab) ಧರಿಸುವ ಮಹಿಳೆಯೊಬ್ಬಳು ಮುಂದೊಂದು ದಿನ ಭಾರತದ ಪ್ರಧಾನಿಯಾಗುತ್ತಾಳೆ (Prime Minister of India) ಎಂದು ಎಐಎಂಐಎಂ ನೇತಾರ ಹಾಗೂ ಲೋಕಸಭಾ ಸಂಸದ ಅಸಾದುದ್ದೀನ್‌ ಓವೈಸಿ (Asaduddin Owaisi) ಹೇಳಿದ್ದಾರೆ.

ಕರ್ನಾಟಕದಲ್ಲಿ (Karnataka) ಭುಗಿಲೆದ್ದ ಹಿಜಾಬ್‌ ವಿವಾದದ (Hijab Controversy) ಹಿನ್ನೆಲೆಯಲ್ಲಿ ಟ್ವೀಟ್‌ (Tweet) ಮಾಡಿರುವ ಅವರು, ‘ಹಿಜಾಬ್‌ ಧರಿಸಿದ ಮಹಿಳೆಯರು ಕಾಲೇಜಿಗೆ ಹೋಗುತ್ತಾರೆ, ಮುಂದೆ ಜಿಲ್ಲಾಧಿಕಾರಿ, ಮ್ಯಾಜಿಸ್ಪ್ರೇಟ್‌, ವೈದ್ಯೆ, ಉದ್ಯಮಿಯಾಗುತ್ತಾರೆ. ಆ ದಿನವನ್ನು ನೋಡಲು ನಾನು ಜೀವಂತ ಇರುವುದಿಲ್ಲವೇನೋ.. ಆದರೆ ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ. ಹಿಜಾಬ್‌ ಧರಿಸುವ ಮಹಿಳೆಯೇ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾಳೆ’ ಎಂದಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ತೆಲಂಗಾಣದ (Telangana) ಬಿಜೆಪಿ (BJP) ಶಾಸಕ ಟಿ. ರಾಜಾ ಸಿಂಗ್‌ (T Rajasingh) ‘ಬಿಜೆಪಿಯಿರುವವರೆಗೆ ಯಾವುದೇ ಬುರ್ಖಾವಾಲಿ ಪ್ರಧಾನಿಯಾಗಲು ಸಾಧ್ಯವಿಲ್ಲ. ನಿಮ್ಮ ಜನಸಂಖ್ಯೆಯನ್ನು ಎಷ್ಟೇ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೂ ನಿಮ್ಮ ಕನಸುಗಳನ್ನು ಈಡೇರಿಸಲು ನಾವು ಬಿಡಲ್ಲ’ ಎಂದಿದ್ದಾರೆ.

Asaduddin Owaisi attack ದಾಳಿ ಅಪಾಯ ತಗ್ಗಿಲ್ಲ, ಝಡ್‌ ಭದ್ರತೆ ಸ್ವೀಕರಿಸಿ: ಒವೈಸಿಗೆ ಸಚಿವ ಶಾ ಮನವಿ

ಓವೈಸಿ ದೀರ್ಘ ಆಯಸ್ಸಿಗಾಗಿ 101 ಮೇಕೆಗಳ ಬಲಿಕೊಟ್ಟ ಉದ್ಯಮಿ: ಲೋಕಸಭಾ ಸದಸ್ಯ ಅಸಾದುದ್ದೀನ್ ಓವೈಸಿ ಅವರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಹಾರೈಸಿ ಭಾನುವಾರ ಹೈದರಾಬಾದ್‌ನ ಬಾಗ್-ಎ-ಜಹನಾರಾದಲ್ಲಿ 101 ಮೇಕೆಗಳನ್ನು ಬಲಿ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮಲಕಪೇಟೆ ಶಾಸಕ ಹಾಗೂ ಎಐಎಂಐಎಂ ಮುಖಂಡ ಅಹ್ಮದ್ ಬಲಾಲ ಉಪಸ್ಥಿತರಿದ್ದರು. ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ವ್ಯಸ್ತರಾಗಿರುವ ಅಸಾದುದ್ದೀನ್ ಓವೈಸಿ, ಇತ್ತೀಚೆಗೆ ಉತ್ತರಪ್ರದೇಶದ ಮೀರತ್ ನಿಂದ ದೆಹಲಿಗೆ ತೆರಳುವ ವೇಳೆ ಟೋಲ್ ಪ್ಲಾಜಾ ಬಳಿ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದಿತ್ತು.

 3-4 ಸುತ್ತು ಗುಂಡಿನ ದಾಳಿ ನಡೆದರೂ, ಓವೈಸಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಫೆಬ್ರವರಿ 3 ರಂದು ನಡೆದ ದಾಳಿಯ ನಂತರ, ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಓವೈಸಿಯ ಬೆಂಬಲಿಗರು ಅವರ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ದಾಳಿಯ ನಂತರ ಕೇಂದ್ರ ಗೃಹ ಸಚಿವಾಲಯವು ಅಸಾದುದ್ದೀನ್ ಓವೈಸಿಗೆ Z- ವರ್ಗದ ಭದ್ರತೆಯನ್ನು ಅನುಮೋದಿಸಿತು. ಆದರೆ, ಅವರು ಅದನ್ನು ತಿರಸ್ಕರಿಸಿದ್ದಾರೆ.

ಬಾಗ್‌ಪತ್‌ನ ಛಪ್ರೌಲಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಓವೈಸಿ, "ನನ್ನ ಕಾರಿನ ಮೇಲೆ ದಾಳಿ ಮಾಡಲಾಯಿತು, ನಾಲ್ಕು ಗುಂಡು ಹಾರಿಸಲಾಯಿತು, ಗುಂಡು ಹಾರಿಸಿದವರು (ವಾಹನದ ಮೇಲೆ) ಯಾರೆಂದರೆ, ಗಾಂಧೀಜಿಯನ್ನು ಗುಂಡು ಹಾಕಿ ಕೊಂದವರು. ನಾನು ಜನರ ಹಕ್ಕುಗಳ ಬಗ್ಗೆ ಮಾತನಾಡುತ್ತೇನೆ, ಹಾಗಾಗಿ ನನ್ನ ಮೇಲೆ ಬುಲೆಟ್ ಹಾರಿಸಲಾಗಿದೆ.ನಾನು ಮುಸಲ್ಮಾನರ ಕುರಿತು ಮಾತನಾಡುತ್ತೇನೆ, ಆದ್ದರಿಂದ ಗುಂಡು ಹಾರಿಸಲಾಗಿದೆ, ನಾನು ಸಂವಿಧಾನದ ವ್ಯಾಪ್ತಿಯಲ್ಲಿ ಮಾತನಾಡಿದಾಗ, ದುಷ್ಕರ್ಮಿಗಳು ಅದನ್ನು ಸಹಿಸುವುದಿಲ್ಲ, 

ಬುಲೆಟ್‌ಗೆ ಬ್ಯಾಲೆಟ್‌ ಮೂಲಕ ಉತ್ತರ, ಒವೈಸಿಯಿಂದ Z Category ಭದ್ರತೆ ತಿರಸ್ಕಾರ!

ಅವರ ಗುಂಡುಗಳು ನನ್ನ ಧ್ವನಿಯನ್ನು ಮೌನಗೊಳಿಸುತ್ತವೆ ಎಂದು ಈ ಮೂರ್ಖರು ಭಾವಿಸುತ್ತಾರೆ, ಒಬ್ಬ ಓವೈಸಿ ಸತ್ತರೆ , ಲಕ್ಷಗಟ್ಟಲೆ ಓವೈಸಿಯನ್ನು ಹುಟ್ಟತ್ತಾರೆ ಎನ್ನುವುದನ್ನು ನಾನೀಗಲೇ ಬರೆದುಕೊಡುತ್ತೇನೆ' ಎಂದು ಓವೈಸಿ ಹೇಳಿದ್ದರು. ಝಡ್ ಕೆಟಗರಿ ಭದ್ರತೆ ಒದಗಿಸುವ ಕೇಂದ್ರದ ನಿರ್ಧಾರವನ್ನು ಉಲ್ಲೇಖಿಸಿದ ಅವರು, ತಾವು ಝಡ್ ಭದ್ರತೆಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು, ಬಡವರಿಗೆ ರಕ್ಷಣೆ ದೊರೆತರೆ ಅದೇ ನನ್ನ ಭದ್ರತೆ ಎಂದು ಹೇಳಿದರು. "ನನಗೆ ಭದ್ರತೆ ಬೇಡ, ನನಗೆ ಪಾಲು ಬೇಕು. ಭಾರತದ ಮುಸ್ಲಿಮರು ಮತ್ತು ಬಡವರನ್ನು ಎ ವರ್ಗದ ನಾಗರಿಕರನ್ನಾಗಿ ಮಾಡಿ" ಎಂದು ಅವರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ