
ನವದೆಹಲಿ (ಮೇ. 3): ರಾಷ್ಟ್ರ ರಾಜಧಾನಿಯಲ್ಲಿ ಬಿಸಿಲ ತಾಪ (heatwave ) ಮುಂದುವರಿದಿದ್ದು, ದೆಹಲಿಯಲ್ಲಿ (Delhi) ಆಟೋ ಚಾಲಕನೊಬ್ಬ (Auto Driver) ತನ್ನ ಆಟೋವನ್ನು (Auto) ತಂಪಾಗಿಡಲು ವಿಶಿಷ್ಟವಾದ ಮಾರ್ಗವನ್ನು ಕಂಡುಕೊಂಡಿದ್ದಾನೆ. ಮಹೇಂದ್ರ ಕುಮಾರ್ (Mahendra Kumar) ಎಂಬ ಆಟೋ ಚಾಲಕ ತನ್ನ ಹಸಿರು ಮತ್ತು ಹಳದಿ ಬಣ್ಣದ ಆಟೋರಿಕ್ಷಾದ ಮೇಲೆ ಶಾಖವನ್ನು ಸೋಲಿಸಲು ಸಣ್ಣ ಸಣ್ಣ ಗಿಡಗಳು ಹಾಗೂ ತರಕಾರಿ ಸಸ್ಯಗಳನ್ನು ಬೆಳೆಸಿದ್ದಾನೆ.
ಸುದ್ದಿಸಂಸ್ಥೆಯೊಂದು ಈ ಕುರಿತಾದ ವರದಿ ಮಾಡಿದ ಬೆನ್ನಲ್ಲಿಯೇ ಮಹೇಂದ್ರ ಕುಮಾರ್ ಅವರ ಐಡಿಯಾಗೆ ಸಾಮಾಜಿಕ ಜಾಲತಾಣದಲ್ಲಿ ( Social Media ) ಮೆಚ್ಚುಗೆ ವ್ಯಕ್ತವಾಗಿದೆ. 48 ವರ್ಷದ ಕುಮಾರ್ ಅವರು 20 ಕ್ಕೂ ಹೆಚ್ಚು ವಿಧದ ಸಸ್ಯಗಳು, ಬೆಳೆಗಳು ಮತ್ತು ಹೂವುಗಳನ್ನು ತಮ್ಮ ಆಟೋರಿಕ್ಷಾದ ಮೇಲೆ ಹೊಂದಿದ್ದಾರೆ. ಅವರ "ಚಲಿಸುವ ಉದ್ಯಾನ" ದ ಫೋಟೋಗಳನ್ನು ಕ್ಲಿಕ್ ಮಾಡಲು ಪ್ರಯಾಣಿಕರು ಮತ್ತು ಸ್ಥಳೀಯ ಜನರು ಇಷ್ಟಪಡುತ್ತಾರೆ.
ಕಳೆದ ಎರಡು ವರ್ಷದ ಹಿಂದೆ ಬೇಸಿಗೆ ಕಾಲ (Summer Season) ಉಚ್ಚ್ರಾಯ ಹಂತದಲ್ಲಿದ್ದ ಸಮಯದಲ್ಲಿ ನನಗೆ ಈ ಐಡಿಯಾ ಹೊಳೆದಿತ್ತು. ಆಟೋ ರಿಕ್ಷಾದ ಮೇಲೆ ಸಣ್ಣ ಸಣ್ಣ ಸಸ್ಯಗಳನ್ನು ಬೆಳೆಸಬಹುದು ಎನ್ನುವ ಐಡಿಯಾ ಬಂದಿತ್ತು. ಇದು ನನ್ನ ಆಟೋವನ್ನು ತಂಪಾಗಿ ಇಡುವುದು ಮಾತ್ರವಲ್ಲ. ನನ್ನ ಪ್ರಯಾಣಿಕರೂ ಬಿಸಿಲಿನಿಂದ ಬಚಾವ್ ಆಗಲು ಸಾಧ್ಯವಾಗುತ್ತದೆ' ಎಂದು ಕುಮಾರ್ ಹೇಳುತ್ತಾರೆ.
ಈಗಾಗಲೇ ತಮ್ಮ ಆಟೋದಲ್ಲಿ ಎರಡು ಮಿನಿ ಕೂಲರ್ ಗಳು ಹಾಗೂ ಫ್ಯಾನ್ ಗಳನ್ನೂ ಮಹೇಂದ್ರ ಕುಮಾರ್ ಅಳವಡಿಸಿದ್ದಾರೆ. ಇದೊಂಥರ ನೈಸರ್ಗಿಕ ಏರ್ ಕಂಡೀಷನರ್ ಇದ್ದ ಹಾಗೆ ನನ್ನ ಪ್ರಯಾಣಿಕರು ಕೂಡ ಆಟೋದಲ್ಲಿ ಪ್ರಯಾಣಿಸಲು ಖುಷಿ ಪಡುತ್ತಾರೆ. ಇದಕ್ಕಾಗಿ 10-20 ರೂಪಾಯಿ ಹೆಚ್ಚು ಹಣವನ್ನೂ ಕೊಡುತ್ತಾರೆ ಎಂದು ಆಟೋ ಚಾಲಕ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಇಂಥದ್ದೊಂದು ಗಾರ್ಡನ್ ಮಾಡುವ ಆಲೋಚನೆ ನನ್ನಲ್ಲಿತ್ತು. ಚಾಪೆಯ ಮೇಲೆ ಗೋಣಿಚೀಲವನ್ನು ಇಟ್ಟಿದ್ದು, ಅದರ ಮೇಲೆ ಸ್ವಲ್ಪ ಸ್ವಲ್ಪವೇ ಮಣ್ಣು ಹಾಕಿ, ರಸ್ತೆಯ ಬದಿಯಲ್ಲಿದ್ದ ಕೆಲ ಹುಲ್ಲುಗಳನ್ನು ಹಾಕಿದ್ದರು. ನಂತರ ಕೆಲ ಸ್ನೇಹಿತರು ಹಾಗೂ ಸಂಬಂಧಿಕರಿಂದ ತರಕಾರಿಗಳ ಬೀಜಗಳನ್ನು ಪಡೆದುಕೊಂಡು, ಅದನ್ನೂ ಹಾಕಿದ್ದೆ. ಬಳಿಕ ಕೆಲವೇ ದಿನಗಳನ್ನು ಇದು ಸಸ್ಯಗಳಾಗಿ ಮೊಳಕೆಯೊಡೆಯಿತು.
ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಗಳು, ತಮಿಳು ಸ್ಟಾರ್ ಗೆ ಸಮನ್ಸ್!
"ಇದಕ್ಕೆ ಹೆಚ್ಚಿನ ಶ್ರಮ ಅಗತ್ಯವಿಲ್ಲ. ನಾನು ದಿನಕ್ಕೆ ಎರಡು ಬಾರಿ 1 ಲೀಟರ್ ಬಾಟಲಿಯನ್ನು ಬಳಸಿ ಸಸ್ಯಗಳಿಗೆ ನೀರು ಹಾಕುತ್ತೇನೆ, ”ಎಂದು ಅವರು ತಿಳಿಸಿದ್ದಾರೆ. ಕುಮಾರ್ ಅವರು ತಮ್ಮ ಆಟೋರಿಕ್ಷಾದಲ್ಲಿ ಲೆಟಿಸ್, ಟೊಮ್ಯಾಟೊ ಮತ್ತು ರಾಗಿಗಳನ್ನು ನೆಡುವ ಮೂಲಕ ಪರಿಸರಕ್ಕಾಗಿ ತಮ್ಮದೇ ಆದ ಸಣ್ಣ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಪಾರ್ನ್ ಸಿನೆಮಾ ಪ್ರದರ್ಶನ: ತನಿಖೆಗೆ ಆದೇಶ
ಇಡೀ ಉತ್ತರ ಭಾರತ ಬಿಸಿಲಿನ ಝಳದಿಂದ ತತ್ತರಿಸಿದೆ. ಬಹುತೇಕ ರಾಜ್ಯದಲ್ಲಿ ತಾಪಮಾನವು 46 ಡಿಗ್ರಿ ತಲುಪಿದೆ. ದೆಹಲಿಯಲ್ಲಿನ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ, ಇದರ ಪರಿಣಾಮವಾಗಿ ಕಳೆದ 12 ವರ್ಷಗಳಲ್ಲಿ ಗರಿಷ್ಠ ಗರಿಷ್ಠ ತಾಪಮಾನ ಮತ್ತು ಕಳೆದ 122 ವರ್ಷಗಳಲ್ಲಿ ಅತ್ಯಂತ ಬಿಸಿಯಾದ ಏಪ್ರಿಲ್ ತಿಂಗಳು ಎನಿಸಿದೆ. ದೆಹಲಿಯ ಆಟೋ ಚಾಲಕನ ವಿಶಿಷ್ಟ ಕಲ್ಪನೆಯು ಆನ್‌ಲೈನ್‌ನಲ್ಲಿ ನಾಗರಿಕರಿಂದ ಅಪಾರ ಪ್ರಶಂಸೆ ಗಳಿಸಿದೆ. ಅನೇಕ ದಾರಿಹೋಕರು ಕುಮಾರ್ ಅವರ ಆಟೋ ತೋಟದ ಛಾಯಾಚಿತ್ರಗಳನ್ನು ಕ್ಲಿಕ್ ಮಾಡುತ್ತಾರೆ, ಕೆಲ ಸಹ ಆಟೋ ಚಾಲಕರು ಸಲಹೆಗಳನ್ನು ಕೇಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ