ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಗಳು, ತಮಿಳು ಸ್ಟಾರ್ ಗೆ ಸಮನ್ಸ್!

Published : May 03, 2022, 08:02 PM ISTUpdated : May 03, 2022, 08:11 PM IST
ಧನುಷ್ ನಮ್ಮ ಮಗ ಎಂದು ಕೋರ್ಟ್ ಮೆಟ್ಟಿಲೇರಿದ ದಂಪತಿಗಳು, ತಮಿಳು ಸ್ಟಾರ್ ಗೆ ಸಮನ್ಸ್!

ಸಾರಾಂಶ

ಮೂಲಗಳ ವರದಿಯ ಪ್ರಕಾರ, ನಟ ತಮ್ಮ ಮಗ ಎಂದು ಹೇಳಿಕೊಂಡು ವೃದ್ಧ ದಂಪತಿಗಳು ಸಲ್ಲಿಸಿದ ಪಿತೃತ್ವ ಪ್ರಕರಣದಲ್ಲಿ ಮದ್ರಾಸ್ ಹೈಕೋರ್ಟ್ ಧನುಷ್‌ಗೆ ಸಮನ್ಸ್ ನೀಡಿದೆ. ಕಲೆದ ಹಲವು ವರ್ಷದಿಂದ ಈ ಪ್ರಕರಣ ನಡೆಯುತ್ತಿದೆ.

ಚೆನ್ನೈ (ಮೇ.3): ಪಿತೃತ್ವ ಪ್ರಕರಣವೊಂದರಲ್ಲಿ (paternity case) ಕಾಲಿವುಡ್ ನಟ (Kollywood hero) ಧನುಷ್ ಗೆ (Dhanush) ಮದ್ರಾಸ್ ಹೈಕೋರ್ಟ್ (Madras High Court) ಸಮನ್ಸ್ ಜಾರಿ ಮಾಡಿದೆ. ವೃದ್ಧ ದಂಪತಿಗಳು ಚಿತ್ರನಟ ಧನುಷ್ ತಮ್ಮ ಪುತ್ರ ಎಂದು ಕೋರ್ಟ್ ಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದು, ಈ ಕುರಿತಾಗಿ ಕೋರ್ಟ್ ಸಮನ್ಸ್ (summoned ) ಜಾರಿ ಮಾಡಿದೆ.

ಕದಿರೇಸನ್ (Kathiresan ) ಹಾಗೂ ಅವರ ಪತ್ನಿ ಮೀನಾಕ್ಷಿ (Meenakshi ) ಚಿತ್ರ ನಟ ಧನುಷ್ ತಮ್ಮ ಮೂರನೇ ಪುತ್ರ ಎಂದು ಹೇಳಿಕೊಂಡಿದ್ದು, ಚಿತ್ರದಲ್ಲಿ ನಟಿಸಬೇಕು ಎನ್ನುವ ಆಸೆಯ ಕಾರಣದಿಂದಾಗಿ ಮನೆಯಿಂದ ಓಡಿ ಬಂದಿದ್ದ ಎಂದು ಹೇಳಿದ್ದಾರೆ. ಮನೆಯ ನಿರ್ವಹಣೆಗಾಗಿ ಅವರಿಂದ ಪ್ರತಿ ತಿಂಗಳು 65 ಸಾವಿರ ರೂಪಾಯಿ ಬೇಡಿಕೆಯನ್ನೂ ಇಟ್ಟಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಕರಣ ವಿಚಾರಣೆಯ ಹಂತದಲ್ಲಿದೆ.

ಧನುಷ್ ತಮ್ಮ ಮಗ ಎಂದು ಕದಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಆರೋಪಿಸಿದ್ದಾರೆ. ಧನುಷ್ ಪಿತೃತ್ವ ಪಿರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಕದಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅದರೊಂದಿಗೆ ಈ ವಿಚಾರದಲ್ಲಿ ಪೊಲೀಸ್ ತನಿಖೆಯನ್ನೂ ನಡೆಸುವಂತೆ ಕೋರಿದ್ದಾರೆ.  ಪ್ರಕರಣವನ್ನು ವಜಾಗೊಳಿಸಿ 2020 ರಲ್ಲಿ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಕದಿರೇಸನ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಆಗ, ಪಿತೃತ್ವದ ದಾಖಲೆಗಳನ್ನು ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪೂರಕ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿತ್ತು.

ಏನಿದು ಪ್ರಕರಣ: ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅವರ ಮೂಲ ಹೆಸರು ವೆಂಕಟೇಶ್ ಪ್ರಭು ಕಸ್ತೂರಿ ರಾಜಾ. ತಾವು ತಮಿಳಿನ ಚಿತ್ರ ನಿರ್ದೇಶಕ ಕಸ್ತೂರಿ ರಾಜಾ ಹಾಗೂ ವಿಜಯಲಕ್ಷ್ಮೀ ಅವರ ಪುತ್ರ ಎಂದು ಈಗಾಗಲೇ ಧನುಷ್ ಹಲವು ಬಾರಿ ಹೇಳಿದ್ದಾರೆ. ಆದರೆ, ಕದಿರೇಸನ್ ಹಾಗೂ ಅವರ ಪತ್ನಿ ಮೀನಾಕ್ಷಿಈ ಕುರಿತಾಗಿ ಪ್ರಕರಣ ದಾಖಲಿಸಿದ್ದಲ್ಲದೆ, ಧನುಷ್ ತಮ್ಮ ಮೂರನೇ ಮಗ ಎಂದು ವಾದಿಸಿದ್ದರು. ಅಲ್ಲಿಂದ ಆರಂಭವಾದ ಧನುಷ್ ಅವರ ಪೋಷಕರು ಯಾರು ಎನ್ನುವ ವಿವಾದ ಹಲವ ಬಾರಿ ಕೋರ್ಟ್ ಮೆಟ್ಟಿಲೇರಿದೆ.

ಕೋರ್ಟ್ ಇದಕ್ಕೂ ಮುನ್ನ ಈ ವಿಚಾರವನ್ನು ಇತ್ಯರ್ಥ ಮಾಡಲು ಡಿಎನ್ಎ ಟೆಸ್ಟ್ ಮಾಡುವಂತೆ ಸಲಹೆ ನೀಡಿತ್ತು. ಆದರೆ, ಧನುಷ್ ಹಾಗೂ ಅವರ ಪರ ವಕೀಲರು ಇದನ್ನು ನಿರಾಕರಿಸಿದ್ದರು. ನಂತರ, ಧನುಷ್ ಅವರ ಐಡೆಂಟಿಫಿಕೇಷನ್ ಗುರುತುಗಳನ್ನು ಪರಿಶೀಲಿಸಲು ವೈದ್ಯಕೀಯ ಪರೀಕ್ಷೆಗೆ ಒಳಗಾಗುವಂತೆ ನ್ಯಾಯಾಲಯವು ಅವರಿಗೆ ಸೂಚಿಸಿತ್ತು. ಆದಾಗ್ಯೂ, ಅದೇ ಫಲಿತಾಂಶಗಳು ಅನಿರ್ದಿಷ್ಟವೆಂದು ಸಾಬೀತಾಯಿತು. ಇದೀಗ ಪ್ರಕರಣದ ಪೂರ್ತಿ ತೀರ್ಪಿಗೆ ಕಾಯಲಾಗುತ್ತಿದೆ.

Dhanush Announces Separation : ರಜನಿ ಮಗಳ ಜತೆಗಿನ ಬಾಂಧವ್ಯ ಅಂತ್ಯಗೊಳಿಸಿದ ಧನುಷ್

ವೈಯಕ್ತಿಕ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುವ ಧನುಷ್ ಕೆಲ ತಿಂಗಳ ಹಿಂದಷ್ಟೇ ಪತ್ನಿ ಐಶ್ವರ್ಯಾರಿಂದ ವಿಚ್ಛೇದನ ಪಡೆದುಕೊಂಡಿದ್ದರು.  ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆಯಾಗಿದ್ದ ಸುದ್ದಿಯನ್ನೇ ಅಭಿಮಾನಿಗಳು ಅರಗಿಸಿಕೊಳ್ಳುತ್ತಿದ್ದ ನಡುವೆಯೇ ಧನುಷ್ (Dhanush)  ಮತ್ತು ಐಶ್ವರ್ಯಾ (Aishwarya ) ಅಧಿಕೃತವಾಗಿ (Divorce) ದೂರವಾಗಿದ್ದ ವಿಚಾರ ಪ್ರಕಟಗೊಂಡಿತ್ತು. ರಜನೀಕಾಂತ್ (Rajinikanth)  ಪುತ್ರಿಯನ್ನು ಮದುವೆ ಮಾಡಿಕೊಂಡಿದ್ದ ಧನುಷ್  ದೂರವಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ (Social Media)  ಮೂಲಕ ತಿಳಿಸಿದ್ದರು ದಂಪತಿಗೆ ಇಬ್ಬರಿಗೂ ಎರಡು ಗಂಡು ಮಕ್ಕಳಿದ್ದಾರೆ. ಪ್ರೀತಿಸಿ ಮದುವೆ ಆಗಿದ್ದ ನಟ ಧನುಷ್ ಹಾಗು ಐಶ್ವರ್ಯ 18 ವರ್ಷ ದ ದಾಂಪತ್ಯ ಪೂರೈಸಿದ್ದರು.

ಈ ಕಾರಣಕ್ಕೆ ನಟ Danush ಮತ್ತು ಐಶ್ವರ್ಯ ಡಿವೋರ್ಸ್‌ ಪಡೆದಿದ್ದಾರೆ!

18 ವರ್ಷದಿಂದ ಇಬ್ಬರು ಅನ್ಯೂನ್ಯವಾಗಿದ್ದೇವು. . ಒಬ್ಬರಿಗೊಬ್ಬ ಅರ್ಥ ಮಾಡಿಕೊಂಡು ಕಷ್ಟ ಸುಖದಲ್ಲಿ ಭಾಗಿ ಆಗಿದ್ವಿ. ಸ್ನೇಹಿತರಾಗಿ, ದಂಪತಿಗಳಾಗಿ ಪೋಷಕರಾಗಿ ಜೀವನ ನಡೆಸಿದ್ವಿ. ಈಗ ನಾವು ದೂರಾಗಲು ನಿರ್ಧರಿಸಿದ್ದೇವೆ ಎಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!