ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ, ವಿಶ್ವನಾಥ ಮಂದಿರ ಕೆಡವಲಿಲ್ಲ: ಕಾಶಿ ಗ್ಯಾನವಾಪಿ ಮಸೀದಿ ಸಮಿತಿ

By Kannadaprabha News  |  First Published May 25, 2023, 6:42 AM IST

ಕಾಶಿ ವಿಶ್ವನಾಥ ಮಂದಿರ ಪಕ್ಕದ ಗ್ಯಾನವಾಪಿ ಮಸೀದಿಯನ್ನು ಪುರಾತತ್ವ ಸರ್ವೇಕ್ಷಣೆ ಇಲಾಖೆಯಿಂದ ಸಮೀಕ್ಷೆ ನಡೆಸಬೇಕು ಎಂಬ ಹಿಂದೂ ಗುಂಪುಗಳ ಅರ್ಜಿ ವಿರೋಧಿಸಿರುವ ಅಂಜುಮನ್‌ ಇಸ್ಲಾಮಿಯಾ ಮಸೀದಿ ಸಮಿತಿ, ಮೊಘಲ್‌ ದೊರೆ ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ. ಆತ 1669ರಲ್ಲಿ ಆದಿ ವಿಶ್ವೇಶ್ವರ (ವಿಶ್ವನಾಥ) ಮಂದಿರವನ್ನು ಕೆಡವಲಿಲ್ಲ ಎಂದು ವಾದಿಸಿದೆ.


ವಾರಾಣಸಿ: ಕಾಶಿ ವಿಶ್ವನಾಥ ಮಂದಿರ ಪಕ್ಕದ ಗ್ಯಾನವಾಪಿ ಮಸೀದಿಯನ್ನು ಪುರಾತತ್ವ ಸರ್ವೇಕ್ಷಣೆ ಇಲಾಖೆಯಿಂದ ಸಮೀಕ್ಷೆ ನಡೆಸಬೇಕು ಎಂಬ ಹಿಂದೂ ಗುಂಪುಗಳ ಅರ್ಜಿ ವಿರೋಧಿಸಿರುವ ಅಂಜುಮನ್‌ ಇಸ್ಲಾಮಿಯಾ ಮಸೀದಿ ಸಮಿತಿ, ಮೊಘಲ್‌ ದೊರೆ ಔರಂಗಜೇಬ್‌ ಕ್ರೂರಿ ಆಗಿರಲಿಲ್ಲ. ಆತ 1669ರಲ್ಲಿ ಆದಿ ವಿಶ್ವೇಶ್ವರ (ವಿಶ್ವನಾಥ) ಮಂದಿರವನ್ನು ಕೆಡವಲಿಲ್ಲ ಎಂದು ವಾದಿಸಿದೆ.

ಕೋರ್ಟಿಗೆ ಅರ್ಜಿ ಸಲ್ಲಿಸಿರುವ ಸಮಿತಿ, ಔರಂಗಜೇಬ್‌ ಮಂದಿರ ಕೆಡವಲಿಲ್ಲ. ಆದಿ ವಿಶ್ವನಾಥ (Adi Vishwanath) ಹಾಗೂ ಹೊಸ ವಿಶ್ವನಾಥ ಮಂದಿರ (new Vishwanath temple) ಇರಬೇಕು ಎಂಬ ಕಲ್ಪನೆಯನ್ನು ಆತ ಹೊಂದಿರಲಿಲ್ಲ. ಗ್ಯಾನವಾಪಿ ಮಸೀದಿ (mosque) ಸಾವಿರಾರು ವರ್ಷ ಹಳೆಯದು. ಅದು ಹಿಂದೆಯೂ ಮಸೀದಿ. ಈಗಲೂ ಮಸೀದಿ. ಅಲ್ಲದೆ, ಇಲ್ಲಿ ಇರುವುದು ಶಿವಲಿಂಗವಲ್ಲ. ಅದು ಕಾರಂಜಿ ಎಂದು ಹೇಳಿದೆ.  ಈ ಮೂಲಕ, ಆದಿ ವಿಶ್ವೇಶ್ವರ ಮಂದಿರ ಕೆಡವಿ ಗ್ಯಾನವಾಪಿ ಮಸೀದಿಯನ್ನು ಔರಂಗಜೇಬ್‌ ನಿರ್ಮಿಸಿದ. ನಂತರ ಪಕ್ಕದಲ್ಲೇ ಇನ್ನೊಂದು ವಿಶ್ವನಾಥ ಮಂದಿರವನ್ನು ಹಿಂದೂ ಅರಸ ತೋಡರಮಲ್‌ (Hindu king Todaramal) ನಿರ್ಮಿಸಿದ ಎಂಬ ಹಿಂದೂ ಪಂಗಡದ ವಾದವನ್ನು ಅದು ತಳ್ಳಿಹಾಕಿದೆ.

Tap to resize

Latest Videos

Gyanvapi Case: ಶಿವಲಿಂಗದ ಕಾರ್ಬನ್‌ ಡೇಟಿಂಗ್‌ಗೆ ಒಪ್ಪಿಗೆ ನೀಡಿದ ಅಲಹಾಬಾದ್‌ ಹೈಕೋರ್ಟ್‌!

 ಗ್ಯಾನವಾಪಿ: 7 ವಿವಿಧ ಅರ್ಜಿ ಒಂದೇ ಕೋರ್ಟಲ್ಲಿ ವಿಚಾರಣೆ

ಗ್ಯಾನವಾಪಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿವಿಧ ಕೋರ್ಟ್‌ಗಳಲ್ಲಿರುವ 7 ಬೇರೆ ಬೇರೆ ಅರ್ಜಿಗಳನ್ನು ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ವಾರಾಣಸಿ ಜಿಲ್ಲಾ ನ್ಯಾಯಾಲಯ (Varanasi District Court) ಮಂಗಳವಾರ ಆದೇಶ ಹೊರಡಿಸಿದೆ. ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್‌ (AK Vishwesh) ಅವರು ತಮಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಬಳಸಿಕೊಂಡು ಈ ಆದೇಶವನ್ನು ಹೊರಡಿಸಿದ್ದಾರೆ. ವಿವಿಧ ನ್ಯಾಯಾಲಯಗಳು ಬೇರೆ ಬೇರೆ ತೀರ್ಪು ನೀಡುವುದರಿಂದ ಪ್ರಕರಣ ಮತ್ತಷ್ಟು ಜಟಿಲವಾಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ನ್ಯಾಯಾಲಯದ ಸಮಯವನ್ನು ಉಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

2021ರಲ್ಲಿ 5 ಮಹಿಳೆಯರು ಗ್ಯಾನವಾಪಿಯಲ್ಲಿನ ಶೃಂಗಾರ ಗೌರಿ (worship of Sringara Gauri) ಪೂಜೆಗೆ ಅನುಮತಿ ಕೋರಿದ್ದರು. ನಂತರ ಕೋರ್ಟು ಗ್ಯಾನವಾಪಿ ಸಮೀಕ್ಷೆಗೆ ಆದೇಶಿಸಿತ್ತು. ಈ ನಡುವೆ ಶಿವಲಿಂಗ ಮಾದರಿ ಶಿಲೆಯೊಂದು ಮಸೀದಿಯಲ್ಲಿ ಪತ್ತೆಯಾಗಿತ್ತು. ಇದರ ವೈಜ್ಞಾನಿಕ ತಪಾಸಣೆಗೂ ಅರ್ಜಿಗಳು ಸಲ್ಲಿಕೆ ಆಗಿದ್ದವು. ಇವು ಸೇರಿದಂತೆ 7 ಅರ್ಜಿಗಳು ಬೇರೆ ಬೇರೆ ಕೋರ್ಟುಗಳಲ್ಲಿ ವಿಚಾರಣೆಗೆ ಒಳಪಟ್ಟಿವೆ. ಇನ್ನು ಇವೆಲ್ಲ ಒಟ್ಟಾಗಿ ಜಿಲ್ಲಾ ಕೋರ್ಟಿನಲ್ಲೇ ವಿಚಾರಣೆಗೆ ಒಳಪಡಲಿವೆ.

Gyanvapi: ರಂಜಾನ್‌ ಸಮಯದಲ್ಲಿ ವುಜುಕಾನಾ ಬಳಕೆಗೆ ಅನುಮತಿ ಕೇಳಿದ ಮುಸ್ಲಿಮರು, ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಸ್ವಾಗತ-ವಿರೋಧ:

ಆದರೆ ಈ ಆದೇಶಕ್ಕೆ ಮುಸ್ಲಿಮರ ಪರವಾಗಿ ವಾದ ಮಾಡುತ್ತಿದ್ದ ವಕೀಲ ಮೊಹಮದ್‌ ತೋಹಿದ್‌ ಖಾನ್‌ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಿಂಗಾರಗೌರಿ ದೇವಾಲಯದಲ್ಲಿ ಪೂಜೆಗೆ ಕೋರಿದ್ದ ಅರ್ಜಿದಾರರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.  ನ್ಯಾಯಾಧೀಶರಿಗೆ ಸಿಪಿಸಿ 4ಎ ನೀಡುವ ವಿಶೇಷಾಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದೆ. ಇದರ ಪ್ರಕಾರ, ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದೇ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಅಥವಾ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಅರ್ಜಿಗಳೂ ಸಲ್ಲಿಕೆಯಾಗಿದ್ದರೂ ಅವುಗಳನ್ನು ಒಗ್ಗೂಡಿಸಿ ಒಂದೇ ನ್ಯಾಯಾಲಯದಡಿ ವಿಚಾರಣೆ ನಡೆಸಲಾಗುತ್ತದೆ.

click me!