ಸಂಸತ್‌ ಭವನ ಉದ್ಘಾಟನೆಯಲ್ಲಿ ಭಾಗವಹಿಸಲು ಜಗನ್‌, ಬಿಜೆಡಿ, ಅಕಾಲಿ ನಿರ್ಧಾರ

By Kannadaprabha NewsFirst Published May 25, 2023, 5:57 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ನೂತನ ಸಂಸತ್‌ ಭವನ ಉದ್ಘಾಟನೆ ವಿರೋಧಿಸಿ 21 ವಿಪಕ್ಷಗಳು ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿದ್ದರೂ ಕೆಲವು ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ಎತ್ತಿವೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ನೂತನ ಸಂಸತ್‌ ಭವನ ಉದ್ಘಾಟನೆ ವಿರೋಧಿಸಿ 21 ವಿಪಕ್ಷಗಳು ಸಮಾರಂಭ ಬಹಿಷ್ಕರಿಸುವುದಾಗಿ ಘೋಷಿಸಿದ್ದರೂ ಕೆಲವು ಪ್ರತಿಪಕ್ಷಗಳು ಇದಕ್ಕೆ ಆಕ್ಷೇಪ ಎತ್ತಿವೆ. ವಿಪಕ್ಷಗಳಾದ ವೈಎಸ್ಸಾರ್ ಕಾಂಗ್ರೆಸ್, ಬಿಜೆಡಿ ಹಾಗೂ ಅಕಾಲಿದಳಗಳು ಸಮಾರಂಭದಲ್ಲಿ ಭಾಗವಹಿಸುವ ಘೋಷಣೆ ಮಾಡಿವೆ. ದೇಶದ ಪ್ರಜಾಪ್ರಭುತ್ವದ ಪಾಲಿಗೆ ಅದೊಂದು ಮಹತ್ವದ ದಿನ. ಅಭಿಪ್ರಾಯ ಭೇದಗಳಿದ್ದರೆ ನಂತರ ಆ ಬಗ್ಗೆ ಕೂತು ಮಾತನಾಡೋಣ ಎಂದು ಬಿಜೆಡಿ ಮುಖ್ಯಸ್ಥ ನವೀನ್‌ ಪಟ್ನಾಯಕ್‌ ಹೇಳಿದ್ದಾರೆ. ಇನ್ನೊಂದು ಕಡೆ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷ ಈ ಬಗ್ಗೆ ಇಂದು ನಿರ್ಧಾರ ಪ್ರಕಟಿಸಲಿದ್ದೇವೆ ಎಂದಿದೆ.

ವಿಪಕ್ಷಗಳಿಂದ ನಿರ್ಲಜ್ಜ ನಡೆ: ಎನ್‌ಡಿಎ ಟೀಕೆ

Latest Videos

ನವದೆಹಲಿ: ಹೊಸ ಸಂಸತ್‌ ಭವನದ ಉದ್ಘಾಟನೆಯನ್ನು ವಿರೋಧಿಸುತ್ತಿರುವ ವಿಪಕ್ಷಗಳ ನಡೆ ನಿರ್ಲಜ್ಜತೆಯಿಂದ ಕೂಡಿದ್ದು, ಇದು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಅವಹೇಳನ ಮಾಡಿದಂತಿದೆ. ಕಳೆದ 9 ವರ್ಷಗಳಿಂದ ವಿಪಕ್ಷಗಳು ಸಂಸತ್‌ ಕಲಾಪಕ್ಕೆ ಯಾವುದೇ ಗೌರವವನ್ನು ತೋರಿಲ್ಲ. ಸದನಗಳಿಗೆ ಅಡ್ಡಿಯನ್ನುಂಟು ಮಾಡಿವೆ. ಸಭಾತ್ಯಾಗಗಳನ್ನು ನಡೆಸಿವೆ ಎಂದು ಎನ್‌ಡಿಎ (NDA) ಆಕ್ರೋಶ ವ್ಯಕ್ತಪಡಿಸಿದೆ.

New Parliament Building: ನೂತನ ಸಂಸತ್‌ ಭವನ ಉದ್ಘಾಟನೆಗೆ 19 ಪಕ್ಷಗಳ ಬಾಯ್ಕಾಟ್‌!

ಅಲ್ಲದೆ, ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು (Droupadi murmu) ರಾಷ್ಟ್ರಪತಿ ಅಭ್ಯರ್ಥಿ ಆಗಿದ್ದಾಗ ಇದೇ ವಿಪಕ್ಷಗಳು ಅವರನ್ನು ವಿರೋಧಿಸಿದ್ದವು. ವಿಪಕ್ಷಗಳು ಬೌದ್ಧಿಕ ದಿವಾಳಿ ಆಗಿವೆ. ಕೂಡಲೇ ಅವು ತಮ್ಮ ನಿರ್ಧಾರ ಮರುಪರಿಶೀಲಿಸಬೇಕು ಎಂದು ಎನ್‌ಡಿಎ ಪ್ರಕಟಣೆ ಆಗ್ರಹಿಸಿದೆ.

ಸಂಸತ್‌ ಭವನ ಉದ್ಘಾಟನೆಯ ಸಮಯ ಸರಿಯಿಲ್ಲ, ಪ್ಲೀಸ್‌ ಬದಲಾಯಿಸಿ ಎಂದು ಜ್ಯೋತಿಷಿಯ ಮನವಿ!

click me!