ಪಾಕ್‌ಗೆ ಶಾಕ್ ಮೇಲೆ ಶಾಕ್; ವಾಘಾ ಗಡಿ ಪ್ರವೇಶಕ್ಕೆ ಅಪ್ಘನ್ ಟ್ರಕ್‌ಗಳಿಗೆ ಭಾರತ ಅನುಮತಿ!

Published : May 18, 2025, 05:10 AM IST
 ಪಾಕ್‌ಗೆ ಶಾಕ್ ಮೇಲೆ ಶಾಕ್;  ವಾಘಾ ಗಡಿ ಪ್ರವೇಶಕ್ಕೆ ಅಪ್ಘನ್ ಟ್ರಕ್‌ಗಳಿಗೆ ಭಾರತ ಅನುಮತಿ!

ಸಾರಾಂಶ

ಪಹಲ್ಗಾಂ ನರಮೇಧ ನಡೆಸಿದ ಪಾಕಿಸ್ತಾನಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಇದೀಗ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನದ ಶತ್ರು ರಾಷ್ಟ್ರ ಅಪ್ಘಾನಿಸ್ತಾನದ ಟ್ರಕ್‌ಗಳ ಸಂಚಾರಕ್ಕೆ ಅಟ್ಟಾರಿ- ವಾಘಾ ಗಡಿ ಸಂಚಾರ ಮುಕ್ತಗೊಳಿಸುವ ಮೂಲಕ ಉಗ್ರಪೋಷಿತ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ.

ನವದೆಹಲಿ (ಮೇ.18): ಪಹಲ್ಗಾಂ ನರಮೇಧ ನಡೆಸಿದ ಪಾಕಿಸ್ತಾನಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಇದೀಗ ಮತ್ತೊಂದು ಆಘಾತ ನೀಡಿದೆ. ಪಾಕಿಸ್ತಾನದ ಶತ್ರು ರಾಷ್ಟ್ರ ಅಪ್ಘಾನಿಸ್ತಾನದ ಟ್ರಕ್‌ಗಳ ಸಂಚಾರಕ್ಕೆ ಅಟ್ಟಾರಿ- ವಾಘಾ ಗಡಿ ಸಂಚಾರ ಮುಕ್ತಗೊಳಿಸುವ ಮೂಲಕ ಉಗ್ರಪೋಷಿತ ರಾಷ್ಟ್ರಕ್ಕೆ ಮತ್ತೊಂದು ಪೆಟ್ಟು ನೀಡಿದೆ.

ಪಾಕಿಸ್ತಾನ ಬೆಂಬಲಿಸಿ ದ್ರೋಹ ಎಸಗಿದ್ದ ಟರ್ಕಿ ಸೇರಿದಂತೆ ಕೆಲ ದೇಶಗಳಿಗೆ ಪೆಟ್ಟು ನೀಡಿದ್ದ ಭಾರತ ಪಾಕಿಸ್ತಾನದ ಶತ್ರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದಂತೆ ಕಾಣುತ್ತಿದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಅಟ್ಟಾರಿ- ವಾಘಾ ಗಡಿಯಲ್ಲಿ ಬಂಧಿಯಾಗಿದ್ದ ಡ್ರೈ ಫ್ರೂಟ್‌ಗಳನ್ನು ಹೊತ್ತಿರುವ ಟ್ರಕ್‌ಗಳ ಭಾರತ ಪ್ರವೇಶಕ್ಕೆ ಅನುಮತಿಸಿದೆ.

ಶುಕ್ರವಾರಷಷ್ಟೇ ಅಘ್ಘಾನಿಸ್ತಾನದ ವಿದೇಶಾಂಗ ಸಚಿವ ಮೌಲವಿ ಅಮೀರ್‌ ಖಾನ್‌ ಜೊತೆಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ದೂರವಾಣಿ ಮಾತುಕತೆ ನಡೆಸಿದ್ದರು. ತಾಲಿಬಾನ್‌ ಸರ್ಕಾರ ರಚನೆ ಬಳಿಕ ಇದು ಭಾರತದ ಮೊದಲ ಸಚಿವರ ಮಟ್ಟದ ಮಾತುಕತೆಯಾಗಿತ್ತು. ಜೈಶಂಕರ್‌ ಮಾತುಕತೆ ಬಳಿಕ ಅಪ್ಘನ್ ಅಭಿವೃದ್ಧಿಗೆ ನೆರವು ಮುಂದುವರೆಸುತ್ತೇವೆ ಎಂದಿದ್ದರು. ಈ ಬೆನ್ನಲ್ಲೇ ಬೆಳವಣಿಗೆಯಾಗಿದೆ.

ಇದನ್ನೂ ಓದಿ: ಜಾಲತಾಣದಲ್ಲಿ ರಾಷ್ಟ್ರಧ್ವಜ ಚಿತ್ರ ಹಾಕಿದ ಅಮೀರ್‌ ಸಂಸ್ಥೆ: ಏನಿದರ ಒಳಮರ್ಮ?

ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಪಾರಕ್ಕೆ ಏಕೈಕ ಅಧಿಕೃತ ಕಾರಿಡಾರ್ ಆಗಿರುವ ಈ ಪ್ರಮುಖ ಭೂ ಮಾರ್ಗವನ್ನು ಏ.24ರಿಂದ ಮುಚ್ಚಲಾಗಿತ್ತು. ಆಫ್ಘಾನಿಸ್ತಾನದಿಂದಲೂ ಇದೇ ಮಾರ್ಗವಾಗಿ ಟ್ರಕ್‌ಗಳು ಭಾರತ ಪ್ರವೇಶಿಸುತ್ತಿದ್ದವು. ಆದರೆ ಗಡಿ ಬಂದ್‌ನಿಂದ ಡ್ರೈಫ್ರೂಟ್‌ , ಗಿಡಮೂಲಿಕೆ ಸಾಗಿಸುತ್ತಿದ್ದ 162 ಟ್ರಕ್‌ಗಳು ಪಾಕ್ ಗಡಿಯಲ್ಲಿಯೇ ಬಂಧಿಯಾಗಿದ್ದವು. ಇದೀಘ ಅಪ್ಘನ್ ಅಧಿಕಾರಿಗಳ ಮನವಿಯ ಮೇರೆಗೆ, ಭಾರತ ಮತ್ತು ಆಫ್ಘಾನಿಸ್ತಾನ ನಡುವೆ ಮಾತುಕತೆ ನಡೆದ ನಂತರ ವಾಘಾ- ಅಟ್ಟಾರಿ ಗಡಿಯನ್ನು ಮತ್ತೆ ತೆರೆಯಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

4.7 ಮಹಿಳಾ ಸ್ನೇಹಿ ರೇಟಿಂಗ್ ಹೊಂದಿದ್ದ ಕಂಪನಿ ಸಿಇಒನಿಂದಲೇ ಉದ್ಯೋಗಿಯ ಗ್ಯಾಂಗ್‌ರೇ*ಪ್ : ಮಹಿಳೆಯೂ ಆರೋಪಿ
ಲ್ಯಾಪ್‌ಟಾಪ್ ಬ್ಯಾಟರಿ ಸ್ಫೋಟಗೊಂಡು 20 ವರ್ಷದ ಯುವಕ ಸಾವು, ಸಹೋದರನಿಗೆ ಗಾಯ