ಸಿಜೆಪಿ ಪ್ರತಿಭಟನೆ ವೇಳೆ ದೆಹಲಿಯಲ್ಲಿ ಭಯ ಹುಟ್ಟಿಸಲು ಸಂಚು! ಪೊಲೀಸ್ ಸಮವಸ್ತ್ರದಲ್ಲಿ ದಾಳಿಗೆ ಪ್ಲಾನ್, ಉಗ್ರನ ಗೆಳತಿ ಅರೆಸ್ಟ್!

Published : Aug 02, 2026, 01:43 PM IST
ATF team arrests Hamim Mandal and Arpita Sarkar Plot to incite terror in Delhi rav

ಸಾರಾಂಶ

ನೀಟ್ ಪೇಪರ್ ಸೋರಿಕೆ ಪ್ರತಿಭಟನೆಯನ್ನು ಬಳಸಿಕೊಂಡು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಹಮೀಮ್ ಮಂಡಲ್‌ನ ಗೆಳತಿ ಅರ್ಪಿತಾ ಸರ್ಕಾರ್‌ನನ್ನು ಪಶ್ಚಿಮ ಬಂಗಾಳ ಎಸ್‌ಟಿಎಫ್ ಬಂಧಿಸಿದೆ.

ನೀಟ್ ಪೇಪರ್‌ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ನಡೆದ ಹೋರಾಟದಲ್ಲಿ ನುಸುಳಿದ ಭಾರತದ ವಿರೋಧಿ ಸಂಚುಗಳು ಇದೀಗ ಒಂದೊಂದಾಗಿ ಬಯಲಿಗೆ ಬರುತ್ತಿವೆ. ಸಿಜೆಪಿ ಪ್ರತಿಭಟನೆ ವೇಳೆ ಅದನ್ನೇ ಅವಕಾಶ ಮಾಡಿಕೊಂಡು ದೆಹಲಿಯಲ್ಲಿ ಹಿಂಸಾಚಾರದ ಮೂಲಕ ಭಯ ಸೃಷ್ಟಿಸಲು ಸಂಚು ಮಾಡಿದ ಆರೋಪದಡಿ ಜೈಶ್ ಭಯೋತ್ಪಾದಕನ ಗೆಳತಿಯೋರ್ವಳನ್ನು ಬಂಧಿಸುವಲ್ಲಿ ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ(ಎಸ್‌ಟಿಎಫ್) ಯಶಸ್ವಿಯಾಗಿದೆ.

ಜೈಶ್‌-ಎ-ಮೊಹಮ್ಮದ್ ಎನ್ನುವ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಉಗ್ರ ಹಮೀಮ್ ಮಂಡಲ್‌ನನ್ನು ಪೂರ್ವ ಬುರ್ದ್ವಾನ್‌ನಲ್ಲಿ ಬಂಧಿಸಲಾಗಿದೆ. ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶಂಕಿತ ಉಗ್ರ ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೆಳೆ ಪೊಲೀಸ್ ಸಮವಸ್ತ್ರ ಧರಿಸಿ ಹಿಂಸಾಚಾರವನ್ನು ಹರಡಲು ಸಂಚು ರೂಪಿಸುತ್ತಿದ್ದ ಎಂದು ಎಸ್‌ಟಿಎಫ್ ಐಜಿ ಗೌರವ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆತನ ಸಹಚರ ಮತ್ತು ಗೆಳತಿ ಅರ್ಪಿತಾ ಸರ್ಕಾರ್ ಅವರನ್ನು ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಬಂಧಿಸಲಾಗಿದೆ.

ಅರ್ಪಿತಾ ಸರ್ಕಾರ್ ಶಂಕಿತ ಉಗ್ರನ ಗೆಳತಿ?

ಜಾರ್ಖಂಡ್‌ನ ಸಾಹಿಬ್‌ಗಂಜ್ ಜಿಲ್ಲೆಯಲ್ಲಿ ಬಂಧಿಸಲಾಗಿರುವ ಅರ್ಪಿತಾ ಸರ್ಕಾರ್ ಶಂಕಿತ ಉಗ್ರನ ಗೆಳತಿ ಎನ್ನಲಾಗಿದೆ ಎಸ್‌ಟೆಫ್‌ ತಂಡವು ಸಿಸಿಟಿವಿ, ಲೋಕೆಷನ್ ಟ್ರ್ಯಾಕ್ ಮಾಡಿ ಆಕೆ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧನ ಬಳಿಕ ಅರ್ಪಿತಾ ಸರ್ಕಾರ್ ಅವರನ್ನ ಹೆಚ್ಚಿನ ವಿಚಾರಣೆಗಾಗಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲಾಯಿತು, ಅಲ್ಲಿ ಆಕೆಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುತ್ತದೆ. ಈ ವಿಷಯವು ಅತ್ಯಂತ ಸೂಕ್ಷ್ಮವಾಗಿದೆ ಎಟಿಎಫ್ ಅಧಿಕಾರಿಗಳು ತಿಸಿದ್ದಾರೆ.

ಶಂಕಿತ ಉಗ್ರ ಹಮೀಮ್ ಮಂಡಲ್ ಸಿಕ್ಕಿಬಿದ್ದಿದ್ದು ಹೇಗೆ?

ವಿಶೇಷ ಕಾರ್ಯಪಡೆ (STF) ಪ್ರಕಾರ, ಸಂಚಿನ ಪ್ರಮುಖ ಆರೋಪಿ ಹಮೀಮ್ ಮಂಡಲ್‌ನನ್ನು ಈಗಾಗಲೇ ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಹಮೀಮ್ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್‌ಗೆ ಸಂಬಂಧಿಸಿದ ಶಂಕಿತ ಮಾಡ್ಯೂಲ್‌ನೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. ಆತನ ಮೊಬೈಲ್ ಫೋನ್ ಮತ್ತು ಇತರ ಡಿಜಿಟಲ್ ಸಾಧನಗಳಿಂದ ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ತನಿಖೆಯು ಆತನು ತನ್ನ ನಿರ್ವಾಹಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನೆಂದು ಹೇಳುತ್ತದೆ.

WhatsApp, Telegram, ಎನ್‌ಕ್ರಿಪ್ಟ್ ಚಾಟ್‌ ಪತ್ತೆ

ವಿಚಾರಣೆಯಲ್ಲಿ ಶಾಕಿಂಗ್ ಸತ್ಯ ಬಹಿರಂಗಗೊಂಡಿವೆ ಎಂದು ಐಜಿ ಹೇಳಿದ್ದಾರೆ. ಶಂಕಿತ ಉಗ್ರ ಹಮೀಮ್ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಇತರ ಮೆಸೇಜಿಂಗ್ ಅಪ್ಲಿಕೇಶನ್‌ಗಳ ಮೂಲಕ ತನ್ನ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಎಸ್‌ಟಿಎಫ್ ಹೇಳುವಂತೆ ಅವನು ಎನ್‌ಕ್ರಿಪ್ಟ್ ಮಾಡಿದ ಚಾಟ್‌ಗಳನ್ನು ಬಳಸುತ್ತಿದ್ದನು ಮತ್ತು ಯುವಕರನ್ನು ಬ್ರೈನ್‌ವಾಶ್ ಮಾಡಲು ಮತ್ತು ಅವರನ್ನು ತನ್ನ ನೆಟ್‌ವರ್ಕ್‌ಗೆ ಸೇರಿಸಿಕೊಳ್ಳಲು ಪ್ರಯತ್ನಿಸುತಿದ್ದ ಉಗ್ರ.

ಜಂತರ್ ಮಂತರ್ ಪ್ರತಿಭಟನೆ ವೇಳೆ ದೊಡ್ಡ ಸಂಚು!

ವಿಶೇಷ ಕಾರ್ಯಪಡೆ (STF) ಅಧಿಕಾರಿಗಳು ಹೇಳುವಮತೆ, ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಬೇಕಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಹಮೀಮ್ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ವಿಷಯವೂ ಬಾಯಿಬಿಟ್ಟಿದ್ದಾನೆ. ಪ್ರತಿಭಟನೆ ವೇಳೆ ಪೊಲೀಸರ ಸಮವಸ್ತ್ರ ಧರಿಸಿ ಪ್ರತಿಭಟನೆಯೊಳಗೆ ನುಸುಳಿ ವಿದ್ಯಾರ್ಥಿಗಳ ದಾಳಿ ಮಾಡಿ ಹಿಂಸಾತ್ಮಾಕ ಕೃತ್ಯ ನಡೆಸಬೇಕು, ಅದರಿಂದ ಪೊಲೀಸರ ಮೇಲೆ ಅಪವಾದಗಳು ಬಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಇನ್ನಷ್ಟು ಆಕ್ರೋಶಗೊಂಡು ಹಿಂಸಾಚಾರಕ್ಕೆ ಇಳಿಸುವ ಸಂಚು ರೂಪಿಸಿಲಾಗಿತ್ತು ಎಂಬ ಆಘಾತಕಾರಿ ಮಾಹಿತಿ ಬಾಯಿಬಿಟ್ಟಿದ್ದಾನೆ.

ಪೊಲೀಸ್ ಸಮವಸ್ತ್ರ ಖರೀದಿಸಲು ಪಾಕಿಸ್ತಾನದಿಂದ ಮೆಸೇಜ್!

ಪೊಲೀಸ್ ಮೂಲಗಳ ಪ್ರಕಾರ ವಿಚಾರಣೆಯ ಸಮಯದಲ್ಲಿ ಹಮೀಮ್ ಮಂಡಲ್ ಸುಮಾರು 10 ರಿಂದ 12 ದಿನಗಳ ಹಿಂದೆ ಪಾಕಿಸ್ತಾನಿ ಪ್ರಜೆ ಮತ್ತು ಶಹಜಾದ್ ಭಟ್ಟಿ ಗ್ಯಾಂಗ್‌ನ ಸಹಚರ ಎಂದು ಹೇಳಲಾದ ಹಮ್ಮದ್ ಪೊಲೀಸ್ ಸಮವಸ್ತ್ರಗಳನ್ನು ಖರೀದಿಸಲು ಸೂಚಿಸಿದ್ದಾಗಿ ಬಹಿರಂಗಪಡಿಸಿದ್ದಾನೆ. ಆರೋಪಿಗಳ ಪ್ರಕಾರ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಯ ಸಮಯದಲ್ಲಿ ಈ ಸಮವಸ್ತ್ರಗಳನ್ನು ಖರೀದಿಸಿ, ದೆಹಲಿಯ ಗೊತ್ತುಪಡಿಸಿದ ಬಸ್ ನಿಲ್ದಾಣಕ್ಕೆ ತಲುಪಿಸಬೇಕಾಗಿತ್ತು. ಈ ಸಮವಸ್ತ್ರಗಳನ್ನು ಆತ್ಮ೧ಹತ್ಯಾ ಬಾಂಬರ್‌ಗಳು ಬಳಸಲು ಉದ್ದೇಶಿಸಲಾಗಿತ್ತು ಎಂದು ಮೂಲಗಳು ಹೇಳುತ್ತವೆ. ಆದರೆ ಹಣ ಪಾವತಿಗೆ ಸಂಬಂಧಿಸಿದ ಗೌಪ್ಯತೆಯ ಸಮಸ್ಯೆಗಳಿಂದಾಗಿ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ ಎನ್ನಲಾಗಿದೆ.

ಸ್ಥಳೀಯ ಸಚಿವ ಉಮೇಶ್ ರೈ ಟಾರ್ಗೆಟ್!.

ಸ್ಥಳೀಯ ಸಚಿವ ಉಮೇಶ್ ರೈ ಕೂಡ ಭಯೋತ್ಪಾದಕರ ಟಾರ್ಗೆಟ್ ಆಗಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಹಮೀಮ್ ಮತ್ತು ಅವನ ಗೆಳತಿ ಅರ್ಪಿತಾ ಸರ್ಕಾರ್ ಕೂಡ ಉಮೇಶ್ ರಾಯ್ ಅವರ ಮಗನನ್ನು ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿದ್ದರು ಎಂದು ಎಸ್‌ಟಿಎಫ್ ಹೇಳಿಕೊಂಡಿದೆ.

ಗಡಿಯಾಚೆಗಿನ ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಒದಗಿಸುವ ಜಾಲದೊಂದಿಗೆ ಹಮೀಮ್ ಸಾಮಾಜಿಕ ಮಾಧ್ಯಮದ ಮೂಲಕ ಸಂಪರ್ಕ ಹೊಂದಿದ್ದ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ ಎಂದು ಎಸ್‌ಟಿಎಫ್ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ದೃಶ್ಯಂ' ಚಿತ್ರದ ಮಾದರಿಯಲ್ಲೇ ಪತ್ನಿಯಿಂದ ಮರ್ಡರ್​: ಗಂಡ ಫಾರಿನ್​ನಲ್ಲಿ, ಅವನ ಹೆಣ ಮನೆಯ ಬಾತ್​ರೂಮ್​ನಲ್ಲಿ
'ವಿದೇಶಿ ಫಂಡಿಂಗ್​ ಆಗ್ತಿರೋದು ನಿಜ, ಪ್ರೂವ್​ ಮಾಡಿ ನೋಡ್ವಾ' ಎಂದು ಸವಾಲು ಹಾಕಿದ್ದ ಜಿರಳೆ ದೀಪ್ಕೆ ಬುಡಕ್ಕೆ ಬೆಂಕಿ