ವಿದೇಶಕ್ಕೆ ವಲಸೆ ಹೋಗುವುದರಲ್ಲಿ ಭಾರತೀಯರೇ ಮುಂದು!

By Kannadaprabha NewsFirst Published Nov 29, 2019, 12:21 PM IST
Highlights

ಜಾಗತಿಕ ವಲಸೆ ವರದಿಯ ಅಂಕಿ ಅಂಶ ಪ್ರಕಟ | ಅನಿವಾಸಿಗಳಿಂದ ಭಾರತಕ್ಕೆ 5.65 ಲಕ್ಷ ಕೋಟಿ ಆದಾಯ | ವಿಶ್ವದ ಶೇ.3.5 ಮಂದಿ ವಲಸಿಗರು.

ವಿಶ್ವಸಂಸ್ಥೆ (ನ. 29): ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ, ಅತಿ ಹೆಚ್ಚು ಅಂತಾರಾಷ್ಟ್ರೀಯ ವಲಸಿಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿವೆ. ವಿಶ್ವಸಂಸ್ಥೆಯ ವಲಸೆ ವಿಭಾಗ ಬಿಡುಗಡೆ ಮಾಡಿರುವ ‘ಜಾಗತಿಕ ವಲಸೆ ವರದಿ- 2020’ ವರದಿ ಅನ್ವಯ 1.75 ಕೋಟಿ ಭಾರತೀಯರು ವಲಸಿಗರಾಗಿ ವಿಶ್ವದ ವಿವಿಧ ದೇಶಗಳಲ್ಲಿದ್ದಾರೆ. 2008ರಲ್ಲಿ ಈ ವಲಸಿಗ ಭಾರತೀಯರು ತವರು ನಾಡು ಭಾರತಕ್ಕೆ 5.65 ಲಕ್ಷ ಕೋಟಿ ರು. ಹಣ ರವಾನಿಸಿದ್ದಾರೆ.

ವರದಿ ಅನ್ವಯ, ವಿಶ್ವದಲ್ಲಿ ಒಟ್ಟು 27 ಕೋಟಿ ವಲಸಿಗರಿದ್ದಾರೆ. ಇದು ವಿಶ್ವದ ಒಟ್ಟು ಜನಸಂಖ್ಯೆಯ ಪೈಕಿ ಶೇ.3.5ರಷ್ಟಾಗುತ್ತದೆ. ಅಂದರೆ ಒಟ್ಟು ಜನಸಂಖ್ಯೆಯ ಶೆ.96.5ರಷ್ಟುಜನ ತಾವು ಹುಟ್ಟಿದ ದೇಶದಲ್ಲೇ ವಾಸಿಸುತ್ತಿದ್ದಾರೆ. ಇನ್ನು ವಲಸಿಗರಿಗೆ ಅಮೆರಿಕ ನೆಚ್ಚಿನ ತಾಣವಾಗಿದ್ದು, ಅಲ್ಲಿ 5.1 ಕೋಟಿ ವಲಸಿಗರಿದ್ದಾರೆ.

ದೇಶಾದ್ಯಂತ NRC, ಅಕ್ರಮ ವಲಸಿಗರು ಗಡೀಪಾರು: ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಅಂತಾರಾಷ್ಟ್ರೀಯ ವಲಸಿಗರ ಪೈಕಿ ಅರ್ಧಕ್ಕಿಂತ ಹೆಚ್ಚು ಜನ ಯುರೋಪ್‌ (14.1 ಕೋಟಿ) ಮತ್ತು ಉತ್ತರ ಅಮೆರಿಕ ದೇಶಗಳಲ್ಲಿ ನೆಲೆಸಿದ್ದಾರೆ. ವಲಸಿಗರ ಪೈಕಿ ಮೂರನೇ ಎರಡು ಭಾಗದಷ್ಟುಜನ ಉದ್ಯೋಗ ಅರಸಿ ಹೋದವರು.

ಟಾಪ್‌ ವಲಸಿಗರು: 1.75 ಕೋಟಿ ವಲಸಿಗರೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, 1.18 ಕೋಟಿ ವಲಸಿಗರೊಂದಿಗೆ ಮೆಕ್ಸಿಕೋ 2ನೇ ಸ್ಥಾನ, 1.07 ಕೋಟಿ ಜನರೊಂದಿಗೆ ಚೀನಾ 3ನೇ ಸ್ಥಾನದಲ್ಲಿದೆ. ವಿಶ್ವದೆಲ್ಲೆಡೆ ಇರುವ ವಲಸಿಗರು 2018ರಲ್ಲಿ ತಮ್ಮ ದೇಶಗಳಿಗೆ ಒಟ್ಟಾರೆ 49 ಲಕ್ಷ ಕೋಟಿ ರು. ಹಣ ರವಾನಿಸಿದ್ದಾರೆ.

ವಿಶ್ವಾದ್ಯಂತ ಇರುವ ವಲಸಿಗರ ಪೈಕಿ ಭಾರತೀಯರೇ ಹೆಚ್ಚಾಗಿದ್ದು, ಒಟ್ಟು 1.75 ಕೋಟಿ ಭಾರತೀಯರು ವಿಶ್ವದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಅನಿವಾಸಿಗಳಿಂದ ಭಾರತಕ್ಕೆ 5.65 ಲಕ್ಷ ಕೋಟಿ ರು. ಆದಾಯ ಹರಿದು ಬರುತ್ತಿದೆ ಎಂದು ವಿಶ್ವಸಂಸ್ಥೆಯ ‘ಜಾಗತಿಕ ವಲಸೆ ವರದಿ-2020’ ರಲ್ಲಿ ಹೇಳಲಾಗಿದೆ.

ಅಕ್ರಮ ವಲಸಿಗರಿಗೆ ರಾಜ್ಯದ 35 ಕಡೆ ಜೈಲು

ಅಂತಾರಾಷ್ಟ್ರೀಯ ವಲಸೆ ಸಂಸ್ಥೆ ಈ ವರದಿಯನ್ನು ತಯಾರಿಸಿದ್ದು, ವಿಶ್ವಾದ್ಯಂತ ಒಟ್ಟು 27 ಕೋಟಿ ವಲಸಿಗರಿದ್ದು, ಇದರಲ್ಲಿ 5.07 ಕೋಟಿ ವಲಸಿಗರು ಅಮೆರಿಕದಲ್ಲಿಯೇ ಇದ್ದಾರೆ. ಕಳೆದ ವರದಿಗೆ ಹೋಲಿಕೆ ಮಾಡಿದರೆ ವಲಸಿಗರ ಸಂಖ್ಯೆಯಲ್ಲಿ ಶೇ. 0.1ರಷ್ಟುಮಾತ್ರ ಏರಿಕೆಯಾಗಿದೆ. ವಿಶ್ವದ ಒಟ್ಟು ಜನಸಂಖ್ಯೆ ಪೈಕಿ ಶೇ.3.5ರಷ್ಟುಮಂದಿ ವಲಸಿಗರಾಗಿದ್ದಾರೆ. ಒಟ್ಟು ವಲಸಿಗರಲ್ಲಿ 14.1 ಕೋಟಿ ಮಂದಿ ಯೂರೋಪ್‌ ಹಾಗೂ ದಕ್ಷಿಣ ಅಮೆರಿಕದಲ್ಲೇ ವಾಸಿಸುತ್ತಿದ್ದಾರೆ.

16.4 ಕೋಟಿ ಮಂದಿ ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. 1.75 ಭಾರತೀಯರು, 1.18 ಕೋಟಿ ಮೆಕ್ಸಿಕನ್ನರು, 1.07 ಕೋಟಿ ಚೀನಿಯರು ವಲಸಿಗರಾಗಿದ್ದಾರೆ. ಇವರಿಂದ 2018ರಲ್ಲಿ ಒಟ್ಟು ವಲಸಿಗರು ತಮ್ಮ ತಮ್ಮ ದೇಶಗಳಿಗೆ 49 ಲಕ್ಷ ಕೋಟಿ ಹಣ ರವಾನಿಸಿದ್ದು, ಭಾರತ (5.65 ಲಕ್ಷ ಕೋಟಿ), ಚೀನಾ (4.82 ಲಕ್ಷ ಕೋಟಿ) ಮೆಕ್ಸಿಕೋ (2.55 ಲಕ್ಷ ಕೋಟಿ) ಆದಾಯ ಗಳಿಸುವ ಮೊದಲ ಮೂರು ಸ್ಥಾನದಲ್ಲಿದೆ.

click me!